ETV Bharat / bharat

ಜೀವ ಬೆದರಿಕೆ ಆರೋಪ.. ರಕ್ಷಣೆ ಕೋರಿ ಕೋರ್ಟ್ ಮೊರೆ ಹೋದ ಸ್ವಪ್ನಾ - ಆರೋಪಿ ಸ್ವಪ್ನಾ ಸುರೇಶ್​

ತನಗೆ ಜೀವ ಬೆದರಿಕೆ ಇದೆ ಎಂದು ಕೇರಳ ಗೋಲ್ಡ್​ ಸ್ಮಗ್​ಲಿಂಗ್​ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್​ ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಸ್ವಪ್ನಾಗೆ ಜೀವ ಬೆದರಿಕೆ ಕರೆಗಳು ಬಂದಿರುವುದು ಸ್ಪಷ್ಟವಾಗಿದೆ. ಅವರ ಬಳಿ ಕೇರಳ ಸಿಎಂ, ಸಚಿವರು ಮತ್ತು ವಿಧಾನಸಭಾ ಸ್ಪೀಕರ್​ ಬಗ್ಗೆ ರಹಸ್ಯ ಮಾಹಿತಿ ಇದೆ. ಪ್ರಕರಣವನ್ನು ಮುಚ್ಚಿ ಹಾಕಲು ಪಿಣರಾಯಿ ವಿಜಯನ್ ಅವರು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

I was told by officials not to name top politicians or face life threat: Sapna Suresh
ಜೀವ ಬೆದರಿಕೆ ಇರುವ ಆರೋಪ.. ರಕ್ಷಣೆಗಾಗಿ ಕೋರ್ಟ್ ಮೊರೆ ಹೋದ ಸ್ವಪ್ನಾ
author img

By

Published : Dec 9, 2020, 9:36 AM IST

ಕೊಚ್ಚಿ (ಕೇರಳ): ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್​ಗೆ ಜೈಲಿನಲ್ಲಿ ಜೀವ ಬೆದರಿಕೆ ಬಂದಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಹೆಚ್ಚುವರಿ ಜ್ಯುಡಿಸಿಯಲ್​ ಮ್ಯಾಜಿಸ್ಟ್ರೇಟ್ ಮೊರೆ ಹೋಗಿರುವ ಅವರು, ರಾಜ್ಯ ಸರ್ಕಾರ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಹೆಚ್ಚುವರಿ ಮುಖ್ಯ ಜ್ಯುಡಿಸಿಯಲ್​ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಚಿನ್ನ ಕಳ್ಳ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಮತ್ತು ಸರಿತ್ ಪಿಎಸ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳ ಕಸ್ಟಡಿಗೆ ನೀಡಿದೆ.

ಈ ಸುದ್ದಿಯನ್ನೂ ಓದಿ: 2 ತಲೆ, 4 ಕೈಗಳಿರುವ ವಿಚಿತ್ರ ಮಗುವಿಗೆ ಜನ್ಮ ನೀಡಿದ ತಾಯಿ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಸ್ವಪ್ನಾಗೆ ಜೀವ ಬೆದರಿಕೆ ಕರೆಗಳು ಬಂದಿರುವುದು ಸ್ಪಷ್ಟವಾಗಿದೆ. ಅವರ ಬಳಿ ಕೇರಳ ಸಿಎಂ, ಸಚಿವರು ಮತ್ತು ವಿಧಾನಸಭಾ ಸ್ಪೀಕರ್​ ಬಗ್ಗೆ ರಹಸ್ಯ ಮಾಹಿತಿ ಇದೆ. ಪ್ರಕರಣವನ್ನು ಮುಚ್ಚಿ ಹಾಕಲು ಪಿಣರಾಯಿ ವಿಜಯನ್ ಅವರು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಇದೇ ವೇಳೆ ಸಿಎಂ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಹೆಚ್ಚುವರಿ ಕಾರ್ಯದರ್ಶಿ ರವೀಂದ್ರನ್ ಜೀವಕ್ಕೂ ಅಪಾಯವಿದೆ ಎಂದು ದೂರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.