ನವದೆಹಲಿ : ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪತಿಯಾಗಿರುವ ರಾಬರ್ಟ್ ವಾದ್ರಾ ಅವರ ಹೇಳಿಕೆ ದಾಖಲಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಾರಂಭಿಸಿದ್ದಾರೆ.
ಐಟಿ ವಿಭಾಗದ ಮೂಲಗಳಿಂದ ಬಂದ ಮಾಹಿತಿಯಂತೆ, ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೇಳಿಕೆ ದಾಖಲಿಸಲು, ಆದಾಯ ತೆರಿಗೆ ಅಧಿಕಾರಿಗಳ ತಂಡ ವಾದ್ರಾ ನಿವಾಸಕ್ಕೆ ತೆರಳಿದೆ. ಕೊರೊನಾ ಹಿನ್ನೆಲೆ, ಇದುವರೆಗೆ ವಾದ್ರಾ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ.
ಓದಿ : 'ರಾಮ ಭಕ್ತರ' ಮೇಲೆ ಕಲ್ಲು ತೂರಾಟ: ಸಂಸದೆ ಪ್ರಜ್ಞಾ ಸಿಂಗ್ ಪ್ರತಿಕ್ರಿಯೆ ಹೀಗೆ
ಆದಾಯ ತೆರಿಗೆ ಇಲಾಖೆ ಮಾತ್ರವಲ್ಲದೆ, ಲಂಡನ್ನ ಬ್ರಿಯಾನ್‌ಸ್ಟನ್ ಸ್ಕ್ವೇರ್‌ನಲ್ಲಿ 1.9 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿ ಖರೀದಿ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ವಾದ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸದ್ಯ ವಾದ್ರಾಗೆ ಬೇಲ್ ದೊರೆತಿದೆ.