ನವದೆಹಲಿ: ಮುಂಬರುವ ವಿಶ್ವಕಪ್ಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ನಿನ್ನೆ ಪ್ರಕಟಗೊಂಡಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅವರು ವಿಶ್ವಕಪ್ಗಾಗಿ ಆಯ್ಕೆಗೊಂಡ ಕೆಲ ಗಂಟೆಗಳಲ್ಲಿ ಬಿಜೆಪಿ ಸಮರ್ಥನೆ ಮಾಡಿ ಪೋಸ್ಟ್ ಮಾಡಿದ್ದಾರೆ. ದೇಶದಲ್ಲಿ ಈಗಾಗಲೇ ಲೋಕಸಭಾ ಚುನಾವಣೆ ನಡೆಯುತ್ತಿರುವುದರ ಮಧ್ಯೆ ಜಡೇಜಾ ಮಾಡಿರುವ ಪೋಸ್ಟ್ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಗುಜರಾತ್ನಲ್ಲಿನ 26 ಲೋಕಸಭಾ ಕ್ಷೇತ್ರಕ್ಕೂ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಜಡೇಜಾ ಟ್ವೀಟ್ ಕೆಲವೊಂದು ವಿವಾದಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.
-
I support BJP.@narendramodi #rivabajadeja jai hind 🇮🇳 pic.twitter.com/GXNz5o07yy
— Ravindrasinh jadeja (@imjadeja) April 15, 2019 " class="align-text-top noRightClick twitterSection" data="
">I support BJP.@narendramodi #rivabajadeja jai hind 🇮🇳 pic.twitter.com/GXNz5o07yy
— Ravindrasinh jadeja (@imjadeja) April 15, 2019I support BJP.@narendramodi #rivabajadeja jai hind 🇮🇳 pic.twitter.com/GXNz5o07yy
— Ravindrasinh jadeja (@imjadeja) April 15, 2019
ನಾನು ಬಿಜೆಪಿ ಸಪೋರ್ಟ್ ಮಾಡುತ್ತೆನೆಂದು ಬರೆದುಕೊಂಡಿರುವ ಜಡೇಜಾ, ಅದನ್ನ ಪ್ರಧಾನಿ ಮೋದಿ ಹಾಗೂ ಪತ್ನಿ ರಿವಾಬಾ ಜಡೇಜಾಗೆ ಟ್ಯಾಗ್ ಮಾಡಿದ್ದಾರೆ. ವಿಶೇಷವೆಂದರೆ ಜಡೇಜಾ ಪತ್ನಿ ರಿವಾಬಾ ಕಳೆದ ಮಾರ್ಚ್ 3ರಂದು ಜಾಮನಗರ್ದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಜಡೇಜಾ ಅವರ ತಂದೆ ಮತ್ತು ಸಹೋದರಿ ಗುಜರಾತ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.