ತಿರುವನಂತಪುರ: ಜೈಶ್ರೀರಾಂ ಘೋಷಣೆ ಕೇಳಲಾಗದಿದ್ದರೆ ಖ್ಯಾತ ಚಲನಚಿತ್ರ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಅವರು ಬೇರೆ ಚಂದ್ರ ಗ್ರಹಕ್ಕೆ ಹೋಗಲಿ ಎಂದು ಟೀಕಿಸಿದ ಕೇರಳದ ಬಿಜೆಪಿ ಘಟಕದ ವಕ್ತಾರ ಬಿ. ಗೋಪಾಲಕೃಷ್ಣನ್ ಅವರ ಹೇಳಿಕೆಗೆ ಅಡೂರ್ ಪ್ರತ್ಯುತ್ತರ ನೀಡಿದ್ದಾರೆ.
ಬಿಜೆಪಿ ಸ್ನೇಹಿತ ಉತ್ತಮ ಸಲಹೆ ನೀಡಿದ್ದಾನೆ. ನಾನು ಚಂದ್ರ ಗ್ರಹಕ್ಕೆ ಹೋಗುತ್ತೇನೆ. ಅವರು ನನಗೆ ಚಂದ್ರನ ಮೇಲೆ ಕೋಣೆಯನ್ನು ಕಾಯ್ದಿರಿಸಿದಾಗ ಮತ್ತು ಟಿಕೆಟ್ ಖರೀದಿಸಿದಾಗ ನಾನು ಹೋಗಿ ವಾಸಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
-
Filmmaker Adoor Gopalakrishnan on a BJP leader asking him to go to the moon if he can't tolerate 'Jai Sri Ram' slogans: It is a good suggestion by this BJP friend that I should go to the moon, if he can book a room for me on moon and buy me a ticket then it will be a nice stay pic.twitter.com/eUcY76zrxA
— ANI (@ANI) July 26, 2019 " class="align-text-top noRightClick twitterSection" data="
">Filmmaker Adoor Gopalakrishnan on a BJP leader asking him to go to the moon if he can't tolerate 'Jai Sri Ram' slogans: It is a good suggestion by this BJP friend that I should go to the moon, if he can book a room for me on moon and buy me a ticket then it will be a nice stay pic.twitter.com/eUcY76zrxA
— ANI (@ANI) July 26, 2019Filmmaker Adoor Gopalakrishnan on a BJP leader asking him to go to the moon if he can't tolerate 'Jai Sri Ram' slogans: It is a good suggestion by this BJP friend that I should go to the moon, if he can book a room for me on moon and buy me a ticket then it will be a nice stay pic.twitter.com/eUcY76zrxA
— ANI (@ANI) July 26, 2019
ಗುಂಪು ಹಲ್ಲೆಗಳ ಸಂದರ್ಭದಲ್ಲಿ 'ಜೈ ಶ್ರೀರಾಂ' ಘೋಷಣೆ ಕೂಗಲಾಗುತ್ತಿದೆ. ಹೀಗಾಗಿ, ಈ ಘೋಷಣೆ ಈಗ ಒಂದು ಪ್ರಚೋದನಕಾರಿ ಯುದ್ಧ ಘೋಷವಾಗಿ ಮಾರ್ಪಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿ 49 ಪ್ರಸಿದ್ಧರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಅದಕ್ಕೆ ಅಡೂರ್ ಸಹ ಸಹಿ ಹಾಕಿದ್ದರು. ಈ ಕಾರಣಕ್ಕಾಗಿ ಅವರನ್ನು ಬಿ. ಗೋಪಾಲಕೃಷ್ಣ ಟೀಕಿಸಿದ್ದರು.