ETV Bharat / bharat

ಹ್ಯೂಮನ್ ಮಿಲ್ಕ್ ಬ್ಯಾಂಕ್.. ತಾಯಿಯ ಎದೆ ಹಾಲಿನಿಂದ ವಂಚಿತ ಶಿಶುಗಳ ಪಾಲಿನ ಆಧಾರ - Human Milk Banks Best

ಭಾರತದಲ್ಲಿ ಮಹಿಳಾ ಶಿಕ್ಷಣವನ್ನು ಹೆಚ್ಚಿಸುವ ಮೂಲಕ ತಾಯಂದಿರ ಎದೆ ಹಾಲು ದಾನವನ್ನು ಉತ್ತೇಜಿಸಬಹುದು. ಆದಾಗ್ಯೂ, ಅಶಿಕ್ಷಿತ ಮಹಿಳೆಯರನ್ನು ಸಹ ಎದೆ ಹಾಲು ದಾನ ಮಾಡಲು ಪ್ರೇರೇಪಿಸಬಹುದು..

Human Milk Banks Best Substitute for Babies
ಮಗುವಿನ ಮೊದಲ ಆಹಾರವೇ ತಾಯಿಯ ಎದೆ ಹಾಲು
author img

By

Published : Aug 7, 2020, 4:39 PM IST

ಹೈದರಾಬಾದ್ : ತಾಯಿಯ ಒಡಲಿನಿಂದ ಜಗತ್ತಿಗೆ ಕಾಲಿಟ್ಟ ಮಗುವಿನ ಮೊದಲ ಆಹಾರವೇ ತಾಯಿಯ ಎದೆ ಹಾಲು. ಇದೊಂದು ಅದ್ಭುತ ಪ್ರಾಕೃತಿಕ ಪ್ರಕ್ರಿಯೆ. ಆದರೆ, ದುರದೃಷ್ಟಕರ ವಿಷಯವೆಂದರೆ ಕೆಲ ಸನ್ನಿವೇಶಗಳಲ್ಲಿ ಮಗುವಿಗೆ ಅಮ್ಮನ ಎದೆ ಹಾಲು ಪಡೆಯಲು ಸಾಧ್ಯವಾಗುತ್ತಿಲ್ಲ. ಅಂತಹ ಸಮಯದಲ್ಲಿ ‘ಹ್ಯೂಮನ್ ಮಿಲ್ಕ್ ಬ್ಯಾಂಕ್’ ಕಂದನ ರಕ್ಷಣೆಗೆ ಬರುತ್ತದೆ. ಈ ಕುರಿತು ಪ್ರಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಮುಂಬೈನ ಡಾ.ರಾಜಶ್ರೀ ಕಾಟ್ಕೆ ಈಟಿವಿ ಭಾರತದೊಂದಿಗೆ ಕೆಲವು ಅಮೂಲ್ಯ ಮಾಹಿತಿ ಹಂಚಿಕೊಂಡಿದ್ದಾರೆ.

ಮಾನವ ಎದೆ ಹಾಲು ಬ್ಯಾಂಕಿಂಗ್ ಎಂದರೇನು?: ಇದು ತಾಯಂದಿರು ಎದೆ ಹಾಲನ್ನು ದಾನ ಮಾಡುವ ಪರಿಕಲ್ಪನೆ. ಶಿಶು ಸೂತ್ರಕ್ಕೆ ಇದು ಆದ್ಯತೆಯ ಪರ್ಯಾಯವಾಗಿದೆ ಮತ್ತು ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಎದೆ ಹಾಲನ್ನು ದಾನ ಮಾಡಲು ಬಯಸುವ ತಾಯಂದಿರನ್ನು ಕೆಲವು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ನಂತರ ಶಿಶುಗಳ ಅಗತ್ಯಕ್ಕೆ ಅನುಗುಣವಾಗಿ ಸಂಗ್ರಹಿಸಿ, ವಿತರಿಸಲಾಗುತ್ತದೆ.

ಎದೆ ಹಾಲನ್ನು ಯಾರು ದಾನ ಮಾಡಬಹುದು?: ಹೆಚ್‌ಐವಿ, ಹೆಪಟೈಟಿಸ್ ಬಿ ಮತ್ತು ಸಿಫಿಲಿಸ್‌ಗೆ ಪರೀಕ್ಷಿಸಲ್ಪಟ್ಟ ಮತ್ತು ಈ ಸೋಂಕುಗಳಿಂದ ಮುಕ್ತವಾಗಿರುವ ತಾಯಂದಿರು ತಮ್ಮ ಎದೆ ಹಾಲನ್ನು ನೀಡಬಹುದು. ಹಿಮೋಗ್ಲೋಬಿನ್ ಶೇ.10 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಇರುವ ತಾಯಂದಿರು ಮತ್ತು ಯಾವುದೇ ಗಂಭೀರ ಅನಾರೋಗ್ಯವಿಲ್ಲದವರು ಹಾಲನ್ನು ದಾನ ಮಾಡಬಹುದು.

ಕ್ಯಾಮಾ ಮತ್ತು ಮುಂಬೈನ ಆಲ್ಬ್​ಲೆಸ್ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ : 2008ರಲ್ಲಿ ಇದನ್ನು ಪ್ರಾರಂಭಿಸಿದ ಸಮಯದಿಂದ, ಇದು 15,261ಕ್ಕೂ ಹೆಚ್ಚು ಶಿಶುಗಳಿಗೆ ಎದೆ ಹಾಲನ್ನು ಒದಗಿಸಲು ಸಹಾಯ ಮಾಡಿದೆ. ಅದರಲ್ಲಿ 6,000 ನವಜಾತ ತೀವ್ರ ನಿಗಾ ಘಟಕದಲ್ಲಿದ್ದ (ಎನ್‌ಐಸಿಯು) ನಿರ್ಗತಿಕ ಶಿಶುಗಳಾಗಿವೆ. ಮಾನವ ಎದೆ ಹಾಲು ಬ್ಯಾಂಕಿಂಗ್​ನಿಂದ ನವಜಾತ ಶಿಶುಗಳ ಸಾವಿನ ಪ್ರಮಾಣ ಮತ್ತು ಕಾಯಿಲೆಗೆ ಒಳಗಾಗುವ ಸಾಧ್ಯತೆಗಳು ಕಡಿಮೆಯಾದವು.

ಹ್ಯೂಮನ್ ಮಿಲ್ಕ್ ಬ್ಯಾಂಕ್
ಮಗುವಿನ ಮೊದಲ ಆಹಾರವೇ ತಾಯಿಯ ಎದೆ ಹಾಲು

ಮಾನವ ಎದೆ ಹಾಲು ಬ್ಯಾಂಕ್​ನ ಪ್ರಯೋಜನ : ಹುಟ್ಟಿನಿಂದಲೇ ತ್ಯಜಿಸಲ್ಪಟ್ಟ ಶಿಶುಗಳು ಅಥವಾ ತಾಯಿ ಹೆರಿಗೆಯಾದ ನಂತರ ಸಾವನ್ನಪ್ಪಿದ ಶಿಶುಗಳಿಗೆ, ಹೆರಿಗೆಯ ನಂತರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಆಕೆಯಿಂದ ಸ್ತನ್ಯಪಾನ ಸಾಧ್ಯವಾಗುವುದಿಲ್ಲ, ತಾಯಿಗೆ ಸಾಕಷ್ಟು ಎದೆ ಹಾಲು ಸಿಗದಿದ್ದ ವೇಳೆ, ನವಜಾತ ಶಿಶುಗಳನ್ನ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದಾಗ, ಜನಿಸಿದ ಕೂಡಲೇ ದತ್ತು ಪಡೆದ ಮಕ್ಕಳಿಗೆ ಎದೆ ಹಾಲುಣಿಸಲು ಮಾನವ ಎದೆ ಹಾಲು ಬ್ಯಾಂಕ್​ ಸಹಕಾರಿಯಾಗಿದೆ.

ಮಾನವ ಹಾಲು ದಾನದ ಬಗ್ಗೆ ಜಾಗೃತಿ ಹೇಗೆ? : ಭಾರತದಲ್ಲಿ ಮಹಿಳಾ ಶಿಕ್ಷಣವನ್ನು ಹೆಚ್ಚಿಸುವ ಮೂಲಕ ತಾಯಂದಿರ ಎದೆ ಹಾಲು ದಾನವನ್ನು ಉತ್ತೇಜಿಸಬಹುದು. ಆದಾಗ್ಯೂ, ಅಶಿಕ್ಷಿತ ಮಹಿಳೆಯರನ್ನು ಸಹ ಎದೆ ಹಾಲು ದಾನ ಮಾಡಲು ಪ್ರೇರೇಪಿಸಬಹುದು.

ಜಾಗೃತಿಯನ್ನು ಉತ್ತೇಜಿಸುವುದು ಹೇಗೆ? : ದಾನಿಗಳಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಬೇಕು. ತಾಯಂದಿರಿಗೆ ಸಕಾರಾತ್ಮಕ ಸಲಹೆ ನೀಡುವ ಮೂಲಕ ಭಾರತದಲ್ಲಿ ಮಾನವ ಎದೆ ಹಾಲು ಬ್ಯಾಂಕ್​ಗಳ ರಚನೆಯಲ್ಲಿ ಹೆಚ್ಚಳ ಕಾಣಬಹುದು. ಇದು ಅಂತಾರಾಷ್ಟ್ರೀಯ ಸ್ತನ್ಯಪಾನ ವಾರವನ್ನು ಆಚರಿಸಲು ಒಂದು ಸುಂದರ ಮಾರ್ಗವಾಗಿದೆ.

ಅಂತಾರಾಷ್ಟ್ರೀಯ ಸ್ತನ್ಯಪಾನ ವಾರ : ವಿಶ್ವ ಸ್ತನ್ಯಪಾನ ವಾರವು ಪ್ರತಿವರ್ಷ ಆಗಸ್ಟ್ 1ರಿಂದ 7ರವರೆಗೆ 120ಕ್ಕೂ ಹೆಚ್ಚು ದೇಶಗಳಲ್ಲಿ ನಡೆಯುವ ವಾರ್ಷಿಕ ಆಚರಣೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.