ETV Bharat / bharat

ವಿಜಯವಾಡ ಸುಮಾರು ₹3.50 ಕೋಟಿ ಮೌಲ್ಯದ ವಿದೇಶಿ ಸಿಗರೇಟ್​ ಜಪ್ತಿ - ಗೋದಾಮಿನಲ್ಲಿ ಸಿಗರೇಟ್​ ಸಂಗ್ರಹ ಸುದ್ದಿ

ಆಂಧ್ರಪ್ರದೇಶಾದ್ಯಂತ ಸಪ್ಲೈ ಮಾಡಲು ಗ್ಯಾಂಗ್​ವೊಂದು ದೆಹಲಿಯಿಂದ ಇವುಗಳನ್ನು ತಂದು ಸಂಗ್ರಹಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹರಿಯಾಣ ಮೂಲದ ಹರಿ ಮತ್ತು ಶ್ಯಾಮ್​ ಹಾಗೂ ಗೋದಾಮಿನ ಮಾಲೀಕನ ವಿರುದ್ಧ ಕೇಸ್​ ದಾಖಲಿಸಿದ್ದು, ಸದ್ಯ ಈ ಆರೋಪಿಗಳು ಎಸ್ಕೇಪ್​ ಆಗಿದ್ದಾರೆ..

Huge dump of foreign cigarettes costs Rs.3.50 crore has seized in Vijayawada
3.50 ಕೋಟಿ ಮೌಲ್ಯದ ವಿದೇಶಿ ಸಿಗರೇಟ್​ ಜಪ್ತಿ
author img

By

Published : Jan 1, 2021, 5:07 PM IST

ವಿಜಯವಾಡ : ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ವಿಜಯವಾಡ ಜಿಲ್ಲೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ವಿದೇಶಿ ಸಿಗರೇಟ್​ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಒಟ್ಟು 132 ಬ್ಯಾಗ್​ಗಳಲ್ಲಿ ಸುಮಾರು ₹3.50 ಕೋಟಿ ಮೌಲ್ಯದ ಸಿಗರೇಟ್‌ ಸಂಗ್ರಹಿಸಿಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು ಸಿಗರೇಟ್ ಬ್ಯಾಗ್​ಗಳನ್ನು ಸೀಜ್​ ಮಾಡಿದ್ದಾರೆ.

ಆಂಧ್ರಪ್ರದೇಶಾದ್ಯಂತ ಸಪ್ಲೈ ಮಾಡಲು ಗ್ಯಾಂಗ್​ವೊಂದು ದೆಹಲಿಯಿಂದ ಇವುಗಳನ್ನು ತಂದು ಸಂಗ್ರಹಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹರಿಯಾಣ ಮೂಲದ ಹರಿ ಮತ್ತು ಶ್ಯಾಮ್​ ಹಾಗೂ ಗೋದಾಮಿನ ಮಾಲೀಕನ ವಿರುದ್ಧ ಕೇಸ್​ ದಾಖಲಿಸಿದ್ದು, ಸದ್ಯ ಈ ಆರೋಪಿಗಳು ಎಸ್ಕೇಪ್​ ಆಗಿದ್ದಾರೆ. ಇವರನ್ನು ಹಿಡಿಯಲು ಖಾಕಿ ಬಲೆ ಬೀಸಿದೆ.

ಇದನ್ನೂ ಓದಿ:ಭೀಕರ ಅಪಘಾತ: ಹೊಸ ವರ್ಷವೇ ಇಬ್ಬರು ಮಕ್ಕಳು ಸೇರಿ ನಾಲ್ವರ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.