ETV Bharat / bharat

ದೊಡ್ಡಣ್ಣನ ನೆಲದಲ್ಲೂ 'ನಮೋ ಸ್ತುತಿ'... ಹೌಡಿ ತರಲಿದೆಯಾ ಹೂಡಿಕೆಗಳ ಪೂರ?

ಸೆಪ್ಟೆಂಬರ್​ 22ರ ಭಾನುವಾರ ನಡೆಯಲಿರುವ 'ಹೌಡಿ, ಮೋದಿ' ಕಾರ್ಯಕ್ರಮಕ್ಕೆ ಅಮೇರಿಕಾ ಸಜ್ಜಾಗಿದ್ದು, ಅಮೆರಿಕದ ನೆಲದಲ್ಲಿ ನಡೆಯುತ್ತಿರವ ಈ ಬೃಹತ್​ ಕಾರ್ಯಕ್ರಮವು ಭಾರತದ ಶಕ್ತಿಯನ್ನು ಪ್ರತಿನಿಧಿಸುತ್ತಿದೆ.

ದೊಡ್ಡಣ್ಣನ ನೆಲದಲ್ಲೂ 'ನಮೋ ಸ್ತುತಿ'
author img

By

Published : Sep 20, 2019, 10:25 PM IST

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಹಂಚಿಕೊಳ್ಳುತ್ತಿದ್ದು, ಇಂಧನ ಕಂಪನಿಗಳ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇದು ಭಾರತದ ಪಾಲಿಗೆ ಮಹತ್ವದ್ದಾಗಿದ್ದು, ಭಾರತ-ಪಾಕ್​ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸಲು ವೇದಿಕೆಯೂ ಆಗಲಿದೆ.

ಪ್ರಧಾನಿ ಅವರು ಸಾಮಾನ್ಯ ಸಭೆಯ ವೇಳೆ ಪಾಕ್​ ಪ್ರತಿನಿಧಿಗಳ ಜೊತೆ ಕನಿಷ್ಠ 20 ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಮೋದಿ ಅವರ ಒಂದು ವಾರದ ಅಮೇರಿಕ ಹ್ಯೂಸ್ಟನ್​ ಪ್ರವಾಸದಲ್ಲಿ ಚರ್ಚಿಸಲು ಅಗತ್ಯವಿರುವ ಅಜೆಂಡಾಗಳ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಅಮೇರಿಕಕ್ಕೆ ನಾಲ್ಕನೇ ಭಾರಿ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಅವರು ವಿಶ್ವದ ಇಂಧನ ತವರು ಎಂದು ಕರೆಯಲಾದ ಹ್ಯೂಸ್ಟನ್​ಗೆ ತಲುಪಿದ ಕೂಡಲೇ ಎಕ್ಸಾನ್​ಮೊಬಿ, ಬಿಪಿ ಸೇರಿದಂತೆ 16 ಪ್ರಮುಖ ಇಂಧನ ಕಂಪನಿಗಳ ಸಿಇಒಗಳ ಜೊತೆ ದುಂಡು ಮೇಜಿನ ಸಭೆ ನಡೆಸಲಿದೆ. ಈ ಸಭೆ ಶನಿವಾರ ನಡೆಯಲಿದ್ದು, ಅಮೆರಿಕ-ಭಾರತ ವ್ಯಾಪಾರ ಒಪ್ಪಂದದಲ್ಲಿ ಇದು ಪ್ರಮುಖವಾಗಿದೆ.

ನಾವು ಸದ್ಯ ನಾಲ್ಕು ಬಿಲಿಯನ್​ ಮೌಲ್ಯದ ತೈಲ ಹಾಗೂ ಅನಿಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಭಾರತವು ಇಂಧನ ಆಮದು ಮಾಡುಕೊಳ್ಳುತ್ತಿರುವ ಪ್ರಮುಖ ದೇಶ ಎಂಬುದನ್ನು ಮೋದಿ ಅವರು ಇಲ್ಲಿ ಮನವರಿಕೆ ಮಾಡಿಕೊಡುವ ಜೊತೆಗೆ, ಇಂಧನ ಕ್ಷೇತ್ರದಲ್ಲಿ ಭಾರತ ಹೂಡಿಕೆ ಮಾಡಬಹುದಾದ ಸಾಧ್ಯತೆಗಳ ಕುರಿತೂ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್​ ಗೋಖಲೆ ಅವರು ತಿಳಿಸಿದ್ದಾರೆ.

'ಹೌಡಿ, ಮೋದಿ' ಕಾರ್ಯಕ್ರಮಕ್ಕೆ ಅಮೇರಿಕ ಸಜ್ಜು:

ಸೆಪ್ಟೆಂಬರ್​ 22ರ ಭಾನುವಾರ ನಡೆಯಲಿರುವ 'ಹೌಡಿ, ಮೋದಿ' ಕಾರ್ಯಕ್ರಮದಲ್ಲಿ ಮೋದಿ ಅವರೊಂದಿಗೆ ಟ್ರಂಪ್​ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮವು ಅಮೆರಿಕ-ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಬಹು ದೊಡ್ಡ ವೇದಿಕೆ ಎಂದು ಹೇಳಲಾಗುತ್ತಿದೆ. 50 ಸಾವಿರ ಮಂದಿ ಇಂಡೋ-ಅಮೆರಿಕನ್​ಗಳು ಪಾಲ್ಗೊಳ್ಳುತ್ತಿರುವ ಈ ಕಾರ್ಯಕ್ರಮವು ದೊಡ್ಡಣ್ಣನ ನೆಲದಲ್ಲಿರುವ ಭಾರತೀಯರನ್ನು ರಾಜಕೀಯ ವೇದಿಕೆಯಡಿ ಸಂಘಟಿಸುವ ಒಂದು ಪ್ರಯತ್ನವೂ ಹೌದು. ಮೋದಿ ಅವರು ತಮ್ಮ ಎಂದಿನ ಶೈಲಿಯಲ್ಲಿ ಅಮೆರಿಕನ್​ ಭಾರತೀಯರಿಗೆ ಹತ್ತಿರವಾಗಲಿದ್ದಾರೆ. ಅಮೆರಿಕದ ನೆಲದಲ್ಲಿ ಮೋದಿ ಅವರು ಪಾಲ್ಗೊಳ್ಳುತ್ತಿರುವ ಮೂರನೇ ಬಹು ದೊಡ್ಡ ಕಾರ್ಯಕ್ರಮ ಇದಾಗಿದೆ. 2014ರಲ್ಲಿ ಮ್ಯಾಡಿಸನ್​ ಚೌಕ ಹಾಗೂ 2015ರಲ್ಲಿ ಸ್ಯಾನ್​ ಜೋಸ್​ನಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿದ್ದವು.

ಅಮೆರಿಕದ ನೆಲದಲ್ಲಿ ನಡೆಯುತ್ತಿರವ ಈ ಬೃಹತ್​ ಕಾರ್ಯಕ್ರಮವು ಭಾರತದ ಶಕ್ತಿಯನ್ನು ಪ್ರತಿನಿಧಿಸುತ್ತಿದೆ. ಟ್ರಂಪ್​ ಅವರೇ ಈ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ಭಾರತ ಎಷ್ಟರ ಮಟ್ಟಿಗೆ ಅಮೆರಿಕ ನೆಲದ ಮೇಲೆ ಪ್ರಭಾವ ಬೀರಿದೆ ಎನ್ನುವುದರ ಪ್ರತಿಬಿಂಬ. ಅಲ್ಲದೇ ವಿದೇಶಿ ನೆಲದಲ್ಲಿ ಭಾರತಕ್ಕೆ ಸಿಗುತ್ತಿರುವ ಗೌರವದ ಪ್ರತೀಕ ಎಂದು ವಿದೇಶಾಂಗ ಸಚಿವ ಡಾ. ಎಸ್​ ಜೈಶಂಕರ್​ ಅವರು ತಮ್ಮ ಇತ್ತೀಚಿನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮೋದಿ ಅವರು ವಿಶ್ವ ಸಂಸ್ಥೆಯ ಬೃಹತ್​ ವೇದಿಕೆಯಲ್ಲಿ ಮಾತನಾಡುತ್ತಿರುವುದು ಇದು ಎರಡನೇ ಬಾರಿ. ಸೆಪ್ಟೆಂಬರ್​ 23ರಂದು ನಡೆಯುತ್ತಿರುವ ಮಹಾಧಿವೇಶನದಲ್ಲಿ ಮೋದಿ ಅವರು ಹವಾಮಾನ ಬದಲಾವಣೆ ತಡೆಗೆ ಭಾರತವು ಯಾವ ರೀತಿ ಶುದ್ಧ ಇಂಧನ (ಇಂಗಾಲ ರಹಿತ) ಬಳಸುತ್ತಿದೆ ಎಂಬ ವಿಷಯ ಮಂಡಿಸಲಿದ್ದಾರೆ. ಭಾರತ ತನ್ನ ಮುಂದಿನ ಗುರಿಯನ್ನೂ ಈ ವೇದಿಕೆ ಮೇಲಿಡಲಿದ್ದು, ಅಂತಾರಾಷ್ಟ್ರೀಯ ಸಮುದಾಯವೂ ಸಹ ಕುತೂಹಲದಿಂದ ಕಾಯುತ್ತಿವೆ. ಪ್ರಧಾನಿ ಅವರು ಇದೇ ವೇದಿಕೆಯಲ್ಲಿ ಮಹತ್ವದ ಆಯುಷ್ಮಾನ್​ ಭಾರತ್​ ಯೋಜನೆಯನ್ನು ಭಾರತದಲ್ಲಿ ಯಾವ ರೀತಿ ಜಾರಿಗೆ ತರಲಾಗಿದೆ ಎಂಬುದನ್ನೂ ವಿವರಿಸಲಿದ್ದಾರೆ. ಅಲ್ಲದೇ ಜೋರ್ಡನ್​ ರಾಜ, ಫ್ರಾನ್ಸ್​ ಅಧ್ಯಕ್ಷ, ನ್ಯೂಜಿಲೆಂಡ್​ ಪ್ರಧಾನಿ ಹಾಗೂ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಜಂಟಿಯಾಗಿ ಆಯೋಜಿಸಿರುವ ಭಯೋತ್ಪಾದನೆ ವಿರುದ್ಧದ ರಚನಾತ್ಮಕ ಹೋರಾಟ ಕುರಿತೂ ಪ್ರಧಾನಿ ಅವರು ಮಾತನಾಡಲಿದ್ದಾರೆ. ಜರ್ಮನ್​ ಪ್ರಧಾನಿ ಮಾರ್ಕೆಲ್​, ಕೀನ್ಯಾ ಹಾಗೂ ಇಂಡೊನೇಷ್ಯಾ ಅಧ್ಯಕ್ಷರು, ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಅವರೂ ಕೂಡ ಇದೇ ವೇದಿಕೆಯಲ್ಲಿ ಮಾತನಾಡಲಿದ್ದಾರೆ.

ಮಾಲ್ಡೀವ್ಸ್​ ಹಾಗೂ ಶ್ರೀಲಂಕಾಗೆ ಭೇಟಿ ನೀಡಿದ್ದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಭಯೋತ್ಪಾದನೆ ವಿರುಧ್ಧದ ಹೋರಾಟಕ್ಕಾಗಿ ಜಾಗತಿಕ ನಾಯಕತ್ವ ಕುರಿತ ಅಧಿವೇಶನ ನಡೆಯಬೇಕು ಎಂದು ಪ್ರತಿಪಾದಿಸಿದ್ದರು. ಹ್ಯೂಸ್ಟನ್​ ಕಾರ್ಯಕ್ರಮಕ್ಕೂ ಮುನ್ನ ಮೋದಿ ಹಾಗೂ ಟ್ರಂಪ್​ ಅವರು ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಇದು ಭಾರತ ಹಾಗೂ ಅಮೆರಿಕ ಪಾಲಿಗೆ ಮಹತ್ವದ ಭೇಟಿಯಾಗಿದೆ. ಈ ಇಬ್ಬರೂ ಜಾಗತಿಕ ನಾಯಕರು ಒಸಾಕದಲ್ಲಿ ನಡೆದ ಜಿ20 ಶೃಂಗಸಭೆ ಹಾಗೂ ಜಿ7 ಬಿಯಾರಿಟ್ಸ್​ ಶೃಂಗಸಭೆಯಲ್ಲಿ ಉಭಯ ದೇಶಗಳ ವ್ಯಾಪಾರ ಒಪ್ಪಂದ, ಸೇನಾ ಸಹಕಾರ ಸೇರಿದಂತೆ ಮಹತ್ವದ ವಿಷಯಗಳ ಕುರಿತು ಮಾತುಕತೆ ನಡೆಸಿದ್ದರು.

ಮಹಾತ್ಮ ಗಾಂಧಿ ಅವರ 150ನೇ ಜಯಂತಿ ಅಂಗವಾಗಿ 'ಸಮಕಾಲೀನ ಸಮಯದಲ್ಲಿ ಗಾಂಧಿ ವಾದದ ಪ್ರಸ್ತುತತೆ' ಎಂಬ ವಿಷಯದ ಕುರಿತು ಸೆಪ್ಟೆಂಬರ್​ 24ರಂದು ವಿಶ್ವಸಂಸ್ಥೆ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಕೊರಿಯಾ ಅಧ್ಯಕ್ಷ, ಸಿಂಗಾಪುರ, ನ್ಯೂಜಿಲೆಂಡ್​, ಬಾಂಗ್ಲಾದೇಶ, ಜಮೈಕಾ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಇದರ ಅಂಗವಾಗಿ ವಿಶ್ವಸಂಸ್ಥೆ ಕಚೇಯ ಮೇಲೆ ಸೋಲಾರ್​ ಪಾರ್ಕ್​ ನಿರ್ಮಾಣ ಮಾಡಲು ನಿರ್ಧರಿಸಲಾದ್ದು, ಭಾರತವು ಈ ಯೋಜನೆಗೆ ಒಂದು ಮಿಲಿಯನ್​ ಡಾಲರ್​ ಅನುದಾನವನ್ನೂ ನೀಡುತ್ತಿದೆ. ಇದಕ್ಕೆ 'ಗಾಂಧಿ ಸೋಲಾರ್​ ಪಾರ್ಕ್'​ ಎಂದು ನಾಮಕರಣ ಮಾಡಲಾಗುತ್ತದೆ. ನ್ಯೂಯಾರ್ಕ್​ ವಿವಿಯ ಗಾಂಧಿ ಉದ್ಯಾನದ ಓಲ್ಡ್​ ವೆಸ್ಟ್​ಬರಿ ಕ್ಯಾಂಪಸ್​ನಲ್ಲಿ ಮಹಾತ್ಮ ಗಾಂಧಿ ಅವರ ಸ್ಮರಣಾರ್ಥ 150 ಸಸಿಗಳನ್ನು ನೆಡಿಲಾಗುತ್ತದೆ. ಅದೇ ದಿನದಂದು ಪ್ರಧಾನಿ ಬಿಲ್​ ಮಿಲಿಂಡಾ ಗೇಟ್ಸ್​ ಪ್ರತಿಷ್ಠಾನವು ಮೋದಿಗೆ ಗ್ಲೋಬಲ್​ ಗೋಲ್​ ಕೀಪರ್ಸ್​ ಗೋಲ್​ ಪ್ರಶಸ್ತಿ ನೀಡಿ ಗೌರವಿಸಲಿದೆ. ಸುಸ್ಥಿರ ಅಭಿವೃದ್ಧಿ ಗುರಿ ವಿಷಯವಾಗಿ ಈ ಗೌರವ ನೀಡಲಾಗುತ್ತಿದೆ.

ಸೆಪ್ಟೆಂಬರ್​ 25ರಂದು ಪ್ರಧಾನಿ ಅವರು ಬ್ಲೂಂಬರ್ಗ್​ ಜಾಗತಿಕ ಉದ್ಯಮ ವೇದಿಕೆಯಲ್ಲಿ ಭಾಷಣ ಮಾಡಲಿದ್ದು, ನ್ಯೂಯಾರ್ಕ್ ಮೇಯರ್ ಮೈಕ್​ ಬ್ಲೂಂಬರ್ಗ್​ ಹಾಗೂ ಉದ್ಯಮಿಗಳೊಂದಿಗೆ ಮಾತನಾಡಲಿದ್ದಾರೆ. ಅಲ್ಲದೇ ಜೆಪಿ ಮೋರ್ಗನ್​, ಲಖೀದ್​ ಮಾರ್ಟಿನ್​, ಅಮೆರಿಕನ್​ ಟವರ್​ ಕಾರ್ಪೊರೇಷನ್​, ಬ್ಯಾಂಕ್​ ಆಫ್​ ಅಮೆರಿಕ, ಮಾಸ್ಟರ್​ ಕಾರ್ಡ್​, ವಾಲ್​ಮಾರ್ಟ್​ ಸೇರಿದಂತೆ 40ಕ್ಕೂ ಹೆಚ್ಚು ಕಂಪನಿಗಳನ್ನು ಭಾರತದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಲಿದ್ದಾರೆ.

ಮೋದಿ ಭಾಷಣದಲ್ಲಿಲ್ಲ ಕಾಶ್ಮೀರ:

ಕಾಶ್ಮೀರ ವಿಷಯ ವಿಶ್ವಾದ್ಯಂತ ಬಹು ಚರ್ಚಿತ. ಆದರೆ, ಪ್ರಧಾನಿ ಅವರ ಭಾಷಣದಲ್ಲಿ ಈ ವಿಷಯವಿಲ್ಲ. ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಅವರು ಮೋದಿ ಅವರ ನಂತರ ವಿಶ್ವಸಂಸ್ಥೆ ವೇದಿಕೆಯಲ್ಲಿ ಮಾತನಾಡಲಿದ್ದು, ಬಹುಶಃ ಇಮ್ರಾನ್​ ಖಾನ್ ಕಾಶ್ಮೀರ ವಿಷಯ ಪ್ರಸ್ತಾಪಿಸಬಹುದು. ವಿಧಿ 370 ರದ್ದಿನ ನಂತರ ಕಣಿವೆಯಲ್ಲಿರುವ ವಾಸ್ತವ ಪರಿಸ್ಥಿತಿ ಕುರಿತು ಮಾತನಾಡುವ ಸಾಧ್ಯತೆ ಇದೆ. ಈ ವೇದಿಕೆಯಲ್ಲಿ ಭಯೋತ್ಪಾದನೆ ಒಂದು ವಿಷಯವಾಗಿರುವ ಕಾರಣ, ಪ್ರಧಾನಿ ಅವರು ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವು ಯಾವ ರೀತಿ ಸಹಕಾರ ನೀಡಬಹುದು ಎಂಬ ಕುರಿತು ಮಾತನಾಡಲಿದ್ದಾರೆ.

ದಕ್ಷಿಣದಿಂದ ದಕ್ಷಿಣಕ್ಕೆ ಸಹಕಾರ ವಿಚಾರವಾಗಿ 14 ಕೆರೆಬಿಯನ್​ ದ್ವೀಪ ರಾಷ್ಟ್ರಗಳ ನಾಯಕರೊಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆ.24ರಂದು ಮಾತುಕತೆ ನಡೆಸಲಿದ್ದು, ಭಾರತವು ಈ ರಾಷ್ಟ್ರಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ನಂತರ ನಾಶವಾಗಿರುವ ಮೂಲ ಸೌಲಭ್ಯಗಳ ಮರು ಸ್ಥಾಪನೆಗೆ ಸಹಕಾರ ನೀಡುವ ಕುರಿತು ಚರ್ಚೆ ನಡೆಸಲಿದ್ದಾರೆ. ಜೊತೆಗೆ ವಿಕೋಪ ಸಂಭವಿಸುವ ಮುನ್ನ ಎಚ್ಚರಿಕೆ ನೀಡುವ ತಂತ್ರಜ್ಞಾನವನ್ನು ಒದಗಿಸುವ ಭರವಸೆಯನ್ನೂ ಕೊಡಲಿದೆ. ಇದರೊಟ್ಟಿಗೆ ಈ ರಾಷ್ಟ್ರಗಳು ಆರ್ಥಿಕವಾಗಿ ಸಲಬವಾಗಲು ಬೇಕಿರುವ ಸಹಕಾರವನ್ನು ನೀಡಲು ಇತರೆ ದೇಶಗಳೊಂದಿಗೆ ಕೈ ಜೋಡಿಸುವ ಕುರಿತು ಮೋದಿ ಅವರು ಚರ್ಚೆ ನಡೆಸಲಿದ್ದಾರೆ.

ವಿದೇಶಾಂಗ ಸಚಿವ ಜೈಶಂಕರ್​ ಹಾಗೂ ಸಹಾಯಕ ಸಚಿವ ವಿ ಮುರಳೀಧರನ್​ ಅವರು ನಾಮ್​, ಸಾರ್ಕ್​, ಕಾಮನ್​ವೆಲ್ತ್​, ಸಿಐಸಿಎ ಹಾಗೂ ಬ್ರಿಕ್ಸ್​ ರಾಷ್ಟ್ರಗಳೊಟ್ಟಿಗೆ ಇದೇ ಸಮಯದಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

  • ಲೇಖಕರು: ಸ್ಮಿತಾ ಶರ್ಮಾ, ನವದೆಹಲಿ

Intro:Body:

maghana

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.