ಹೈದರಾಬಾದ್ : ಮಾರಾಣಾಂತಿಕ ಕೊರೊನಾ ವೈರಸ್ ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿದೆ. ಈವರೆಗೆ ಚೀನಾ 4ನೇ ಹಂತವನ್ನು ಅನುಭವಿಸಿದ ಏಕೈಕ ದೇಶವಾಗಿದೆ. ಅಲ್ಲಿ ಸೋಂಕು ಹರಡುವಿಕೆಯು ಪ್ರಾಯೋಗಿಕವಾಗಿ ಅನಿಯಂತ್ರಿತವಾಗಿದೆ ಮತ್ತು ದೇಶಾದ್ಯಂತ ಅನೇಕ ಪ್ರಮುಖ ಸೋಂಕಿನ ಗುಂಪುಗಳಿವೆ. ಆದರೆ, ಭಾರತದಂತಹ ದೇಶ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಇನ್ನೂ ಮಾರಣಾಂತಿಕ ವೈರಸ್ ಹರಡುವಿಕೆಯ 3ನೇ ಹಂತ ತಲುಪಿಲ್ಲ.
ಮೂರನೇ ಹಂತದಲ್ಲಿ ಈ ವೈರಸ್ ಜಗತ್ತಿನಲ್ಲಿ 59,000ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ವಿಶ್ವಾದ್ಯಂತ 11,31,713 ಜನರಿಗೆ ಸೋಂಕು ತಗುಲಿದೆ. ಆದಾಗ್ಯೂ ಭಾರತ ಮೂರನೇ ಹಂತ ತಲುಪಿದ್ರೆ, ಸರ್ಕಾರವು ಇಡೀ ದೇಶದಲ್ಲಿನ ಅಪಾರ ಸಂಖ್ಯೆಯ ಜನರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸುವುದು ಖಂಡಿತಾ ಸವಾಲಿನ ಕೆಲಸ.
ಇಂತಹ ಪರಿಸ್ಥಿತಿಯಿಂದ ಪಾರಾಗಲು ಹಲವಾರು ವಿಜ್ಞಾನಿಗಳು ಮತ್ತು ಸಂಶೋಧಕರು ಸಮುದಾಯದಲ್ಲಿನ ಒಟ್ಟು ಸೋಂಕುಗಳ ಸಂಖ್ಯೆಯನ್ನು ಅಂದಾಜು ಮಾಡುವ ಮಾರ್ಗವಾಗಿ 'ತ್ಯಾಜ್ಯ ನೀರನ್ನು' ವಿಶ್ಲೇಷಿಸಲು ಪ್ರಾರಂಭಿಸಿದ್ದಾರೆ. ಇದು ಹೆಚ್ಚಿನ ಜನರನ್ನು ಪರೀಕ್ಷಿಸದಂತೆ ಪರಿಹಾರ ನೀಡುವ ಮಾರ್ಗವಾಗಿದೆ. ಸಂಶೋಧಕರ ಪ್ರಕಾರ ಬಳಸಿದ ನೀರು ಒಳಚರಂಡಿ ವ್ಯವಸ್ಥೆ ಮೂಲಕ ಮರು ಚಿಕಿತ್ಸೆಯ ಘಟಕ ತಲುಪುತ್ತದೆ. SARS-CoV-2 ನಂತಹ ಮೂತ್ರ ಅಥವಾ ಮಲದಲ್ಲಿ ಹೊರಹಾಕುವ ಸಾಂಕ್ರಾಮಿಕ ರೋಗಗಳನ್ನು ಪತ್ತೆಹಚ್ಚಲು ಈ ನೀರಿನ ಪರೀಕ್ಷೆಯೂ ಒಂದು ಸುಲಭ ಮಾರ್ಗ.
ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಅಲೈಯನ್ಸ್ ಫಾರ್ ಎನ್ವಿರಾನ್ಮೆಂಟಲ್ ಹೆಲ್ತ್ ಸೈನ್ಸಸ್ ಪ್ರತಿನಿಧಿಸುವ ವಿಜ್ಞಾನಿಗಳು ಹೇಳುವ ಪ್ರಕಾರ ಸಂಶೋಧಕರು ತಾವು ಜನಸಂಖ್ಯೆಯಿಂದ ಹೊರ ಹಾಕಲ್ಪಡುತ್ತಿರುವ ತ್ಯಾಜ್ಯದ ನೀರಿನ ಮಾದರಿಯನ್ನು ಪರೀಕ್ಷಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಕೇವಲ ಒಂದು ಸ್ನ್ಯಾಪ್‌ಶಾಟ್‌ನಂತೆ ಈ ಪರೀಕ್ಷೆ ನಡೆಸಬಾರದು. ಇದರಂತೆ ಸಂಶೋಧಕರು ನೆದರ್‌ಲ್ಯಾಂಡ್ಸ್, ಯುನೈಟೆಡ್ ಸ್ಟೇಟ್ಸ್ ಮತ್ತು ಸ್ವೀಡನ್‌ನಲ್ಲಿ 'ತ್ಯಾಜ್ಯನೀರಿನ ವಿಶ್ಲೇಷಣೆ' ತಂತ್ರದ ಸಹಾಯದಿಂದ ವೈರಸ್‌ನ ಕುರುಹುಗಳನ್ನು ಕಂಡು ಹಿಡಿದಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆಗಾಗ ಕೈ ತೊಳೆಯುವುದು ಮತ್ತು ಫೇಸ್ ಮಾಸ್ಕ್ ಧರಿಸುವುದು ಮುಂತಾದ ತಡೆಗಟ್ಟುವ ಕ್ರಮಗಳು ಪ್ರಸ್ತುತ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಬಹುದು. ಆದರೆ, ಅಂತಹ ಕ್ರಮಗಳನ್ನು ತೆಗೆದು ಹಾಕಿದ ನಂತರ ಮಾರಕ ವೈರಸ್ ಮರಳಬಹುದು ಎಂದು ಕೆಲವು ಸಂಶೋಧಕರು ಹೇಳಿದ್ದಾರೆ. ತಂತ್ರವನ್ನು ಗ್ರಹಿಸಿದ ನಂತರ ನಮಗೆ ಆಶ್ಚರ್ಯವಾಗಬಹುದು. ಟಕ್ಸನ್‌ನ ಅರಿಜೋನಾ ವಿಶ್ವವಿದ್ಯಾಲಯದ ಪರಿಸರ ಸೂಕ್ಷ್ಮ ಜೀವಶಾಸ್ತ್ರಜ್ಞ ಚಾರ್ಲ್ಸ್ ಗರ್ಬಾ ಮತ್ತು ಟಕ್ಸನ್‌ನಲ್ಲಿ ಕಚ್ಚಾ ಕೊಳಚೆನೀರಿನಲ್ಲಿ SARS-CoV-2 ನ ಕುರುಹುಗಳನ್ನು ಕಂಡುಹಿಡಿದ ಸಂಶೋಧಕರಾಗಿದ್ದಾರೆ. ಇದನ್ನು ಅವರು 'ತ್ಯಾಜ್ಯ ನೀರಿನ ನಿರ್ವಹಣೆ' ತಂತ್ರ ಎಂದು ಹೇಳಿದ್ದಾರೆ. ಇದನ್ನು ಪೋಲಿಯೊ ವೈರಸ್ ವಿರುದ್ಧ ವ್ಯಾಕ್ಸಿನೇಷನ್ ಅಭಿಯಾನದ ಯಶಸ್ಸನ್ನು ನಿರ್ಣಯಿಸಲು ದಶಕಗಳಿಂದ ಬಳಸಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೊಸ ಕೊರೊನಾ ವೈರಸ್ ಸೋಂಕನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಇದು ಕೋವಿಡ್-19 ಎಂದು ಕರೆಯಲ್ಪಡುವ ಕಾಯಿಲೆಗೆ ಕಾರಣವಾಗುತ್ತದೆ. ಇದು ಕನಿಷ್ಠ 180 ದೇಶಗಳು ಮತ್ತು ಪ್ರಾಂತ್ಯಗಳಿಗೆ ಹರಡಿದೆ. ಈ ರೋಗವು 53,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 1 ಮಿಲಿಯನ್‌ಗಿಂತಲೂ ಹೆಚ್ಚು ಜನರಲ್ಲಿ ಸೋಂಕು ಇರುವುದು ಖಚಿತ ಎಂದು ವರ್ಲ್ಡ್ ಮೀಟರ್ ಸಂಗ್ರಹಿಸಿದ ದಾಖಲೆಗಳು ಹೇಳುತ್ತಿವೆ. ಇಂತಹ ಸೋಂಕಿನ ಪರೀಕ್ಷೆಗೆ ತ್ಯಾಜ್ಯ ನೀರು ಮಾದರಿ ಯಶಸ್ವಿಯಾದರೆ, ಭಾರತದಲ್ಲಿ ವೈದ್ಯರ ಕೆಲಸ ಅರ್ಧ ಉಳಿತಾಯವಾಗುತ್ತದೆ.