ಭುವನೇಶ್ವರ: ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕಾಗಿ ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಬುಧವಾರ ಖಾಸಗಿ ಆಸ್ಪತ್ರೆಯೊಂದನ್ನು ಸೀಲ್ಡೌನ್ ಮಾಡಿದೆ. ಕಾರಣ ಈ ಆಸ್ಪತ್ರೆಯಿಂದ 27 ಜನರಿಗೆ ಸೋಂಕು ಹರಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ಪಾಸಿಟಿವ್ ರೋಗಿಯನ್ನು ನಗರದಲ್ಲಿ ಮೀಸಲಾದ ಕೋವಿಡ್ ಕೇರ್ಗೆ ಸ್ಥಳಾಂತರಿಸುವ ಬದಲು ಆಸ್ಪತ್ರೆಯಲ್ಲೇ ದಾಖಲಿಸಿಕೊಂಡಿದ್ದಾರೆ. ಸೋಮವಾರ ಮಂಚೇಶ್ವರ ಪ್ರದೇಶದಲ್ಲಿ 11 ಜನರಲ್ಲಿ ಸೋಂಕು ಕಾಣಿಸಿತ್ತು. ಆಸ್ಪತ್ರೆಯ 16 ಉದ್ಯೋಗಿಗಳಲ್ಲಿಯೂ ಸೋಂಕು ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ 16 ಜನರೂ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.
ಕೋವಿಡ್-19 ರೋಗಿಗಳಿಗೆ ತಮ್ಮ ಸೌಲಭ್ಯಗಳಲ್ಲಿ ಚಿಕಿತ್ಸೆ ನೀಡುವ ಬದಲು ಮೀಸಲಾದ ಆಸ್ಪತ್ರೆಗಳಿಗೆ ಸ್ಥಳಾಂತರಿಸುವಂತೆ ರಾಜ್ಯ ಸರ್ಕಾರ ಈ ಹಿಂದೆ ಖಾಸಗಿ ಮತ್ತು ಸರ್ಕಾರದ ಎಲ್ಲಾ ಆಸ್ಪತ್ರೆಗಳಿಗೆ ಸೂಚಿಸಿತ್ತು. ಈ ಸೂಚನೆಯ ಹೊರತಾಗಿಯೂ, ಆಸ್ಪತ್ರೆಯು ಕೋವಿಡ್-19 ಮಾನದಂಡಗಳನ್ನು ಉಲ್ಲಂಘಿಸಿದೆ. ಇದರಿಂದಾಗಿ ವೈರಸ್ 27 ಜನರಿಗೆ ಹರಡಿದೆ ಎಂದು ಅವರು ಹೇಳಿದರು.