ನವದೆಹಲಿ: ಕಣಿವೆ ರಾಜ್ಯದ ಪರಿಸ್ಥಿತಿ ದಿಢೀರ್ ಬದಲಾಗಿದ್ದು, ಈ ನಿಟ್ಟನಿಲ್ಲಿ ಗೃಹ ಸಚಿವ ಅಮಿತ್ ಶಾ ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಂಸತ್ ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಗೃಹ ಸಚಿವರು ಕಣಿವೆ ರಾಜ್ಯಕ್ಕೆ ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಪರಿಸ್ಥಿತಿಯನ್ನು ಅವಲೋಕನ ಮಾಡಲಿದ್ದಾರೆ.
ಭಾರತದಿಂದ ಮಾನವೀಯ ಕಾನೂನು ಉಲ್ಲಂಘನೆ.. ದಾಳಿ ಕುರಿತು ಇಮ್ರಾನ್ ಟ್ವೀಟ್
ಶನಿವಾರ ಪಾಕ್ ಬಾರ್ಡರ್ ಆ್ಯಕ್ಷನ್ ಟೀಂನ ಏಳು ಸದಸ್ಯರು ಭಾರತದ ಗಡಿ ಪ್ರವೇಶಿಸಲೆತ್ನಿಸಿದ ವೇಳೆ ಭಾರತೀಯ ಸೇನೆ ಎಲ್ಲ ಏಳು ಮಂದಿಯನ್ನು ಹೊಡೆದುರುಳಿಸಿತ್ತು. ಈ ಘಟನೆ ಬಳಿಕ ಗಡಿಯಲ್ಲಿ ಪರಿಸ್ಥಿತಿ ಕೊಂಚ ಹದಗೆಟ್ಟಿದೆ.
ಪಾಕ್ ಬಾರ್ಡರ್ ಆ್ಯಕ್ಷನ್ ಟೀಂನ 7 ಸದಸ್ಯರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಪ್ರಸ್ತುತ ಕಾಶ್ಮೀರದ ಘಟನಾವಳಿಗಳ ಬಗ್ಗೆ ಇಂದು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸಹ ಸಭೆಯಲ್ಲಿ ಭಾಗಿಯಾಗಿದ್ದರು.