ETV Bharat / bharat

ಇತಿಹಾಸ ಪ್ರಸಿದ್ಧ  ಶ್ರೀಮಂತ್ ದಗ್ಡುಶೇಠ್ ಹಲ್ವಾಯಿ ಗಣಪತಿ ಮಂದಿರ..! - History Dagdusheth Halwai Ganpati Mandir

ಪುಣೆಯ ಐದು ಗಣಪತಿ ದೇವಾಲಯಗಳಲ್ಲಿ ಶ್ರೀಮಂತ ದಗ್ಡುಶೇಠ್ ಹಲ್ವಾಯಿ ಗಣಪತಿ ದೇಗುಲ ಮಾತ್ರ ವಿಭಿನ್ನ ಹಾಗೂ ವಿಶಿಷ್ಟ. ಇದು ಭಾರತದಲ್ಲಿಯೇ ಅತ್ಯಂತ ಪ್ರಸಿದ್ಧ ಗಣೇಶನ ಮಂದಿರಗಳಲ್ಲೊಂದು.

History Dagdusheth Halwai Ganpati Mandir
ಇತಿಹಾಸ ಪ್ರಸಿದ್ಧಿ ದಗ್ದುಶೇಠ್ ಹಲ್ವಾಯಿ ಗಣಪತಿ ಮಂದಿರ
author img

By

Published : Aug 22, 2020, 11:45 PM IST

ಪುಣೆ, ಮಹಾರಾಷ್ಟ್ರ: ಸಿದ್ಧಿ ವಿನಾಯಕ ದೇವಾಲಯದ ನಂತರ ದಗ್ಡುಶೇಠ್ ಹಲ್ವಾಯಿ ಗಣಪತಿ ಮಂದಿರವು ಮಹಾರಾಷ್ಟ್ರದ ಎರಡನೇ ಅತ್ಯಂತ ಪ್ರಸಿದ್ಧ ಗಣೇಶ ದೇವಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಇದು ಪುಣೆಯಲ್ಲಿನ ಗಣೇಶ ದೇವಾಲಯವಾಗಿದ್ದು, ಇಲ್ಲಿ 7.5 ಅಡಿ ಎತ್ತರ ಮತ್ತು 4 ಅಡಿ ಅಗಲದ ಗಣಪತಿ ವಿಗ್ರಹವನ್ನು ಅಮೂಲ್ಯವಾದ ಚಿನ್ನಾಭರಣಗಳಿಂದ ಅಲಂಕರಿಸಲಾಗಿದೆ.

ಸಿಹಿತಿಂಡಿಗಳನ್ನು ಮಾರಾಟ ಮಾಡುತ್ತಿದ್ದ ದಗ್ಡುಶೇಠ್ ಗಾಡ್ವೆ ಎಂಬ ವರ್ತಕ ಆ ಕಾಲದ ಪ್ರಸಿದ್ಧ ಮಿಠಾಯಿಗಾರರಾಗಿದ್ದರು. ಅವರ ಮಗ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪುತ್ತಾನೆ. ಇದೇ ದುಃಖದಲ್ಲಿ ಈ ಶೋಕವನ್ನ ಮರೆಯಲು ಅವರು, ಗಣೇಶ ದೇವಾಲಯವನ್ನು ನಿರ್ಮಿಸಿದರೆಂದು ಹೇಳಲಾಗುತ್ತದೆ. ಗಣೇಶ ಚತುರ್ಥಿಯಂದು ಈ ದೇವಾಲಯವನ್ನು ಅತ್ಯಂತ ಸುಂದರವಾಗಿ ಹೂವು ಮತ್ತು ದೀಪಗಳಿಂದ ಅಲಂಕಾರಗೊಳಿಸಲಾಗುತ್ತದೆ. ಈ ಗಣೇಶ ದೇವಾಲಯವು ಚಿನ್ನದ ವಿಗ್ರಹದಿಂದ ಅತ್ಯಂತ ಜನಪ್ರಿಯವಾಗಿದೆ.

ಇತಿಹಾಸ ಪ್ರಸಿದ್ಧಿ ದಗ್ದುಶೇಠ್ ಹಲ್ವಾಯಿ ಗಣಪತಿ ಮಂದಿರ

1894 ರಲ್ಲಿ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದರು. ಬಳಿಕ 1896 ರಲ್ಲಿ ಶ್ರೀಮಂತ ದಗ್ಡುಶೇಠ್ ಹಲ್ವಾಯಿ ಗಣಪತಿಯ ಮತ್ತೊಂದು ವಿಗ್ರಹವನ್ನು ಸ್ಥಾಪಿಸಲಾಯಿತು. ಅಂದಿನಿಂದ ಅದರ ಆಚರಣೆಯನ್ನು ಪ್ರಾರಂಭಿಸಲಾಯಿತು. ಅದೇ ವೇಳೆ ದಗ್ಡುಶೇಠ್ ಗಾಡ್ವೆ ಅವರು ನಿಧನರಾದರು. ಆದರೆ ಅವರು ಪ್ರಾರಂಭಿಸಿದ ಗಣೇಶೋತ್ಸವದ ಸಂಪ್ರದಾಯವನ್ನು, ಆ ಪ್ರದೇಶದ ನಾಗರಿಕರು ಮತ್ತು ಕಾರ್ಯಕರ್ತರು ಮುಂದುವರೆಸಿಕೊಂಡೇ ಬಂದಿದ್ದಾರೆ.

1896 ರಲ್ಲಿ ಮಾಡಿದ ವಿಗ್ರಹವು ಶಿಥಿಲಾವಸ್ಥೆಯಲ್ಲಿತ್ತು. ಆದ್ದರಿಂದ 1967 ರಲ್ಲಿ ಹಲ್ವಾಯಿ ಗಣಪತಿಯ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಸುವರ್ಣಾಯುಗ ತರುಣ್ ಮಂಡಳಿಯ ಪ್ರತಾಪ್ ಗೋಡ್ಸೆ ಎಂಬುವವರು ಗಣಪತಿಯ ಹೊಸ ವಿಗ್ರಹಗಳನ್ನು ಮಾಡಲು ನಿರ್ಧರಿಸಿದರು. ಅದರ ನಂತರದಲ್ಲಿ ಈಗಿರುವ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಮಹಾರಾಷ್ಟ್ರದ ಎಲ್ಲೆಡೆಯಲ್ಲಿಯೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರೂ, ಪುಣೆಯಲ್ಲಿ ಈ ಹಬ್ಬದ ಸೊಗಸೇ ವಿಶಿಷ್ಟವಾದದ್ದು. ಪುಣೆಯ ಗಣೇಶೋತ್ಸವ ದೇಶಾದ್ಯಂತ ಪ್ರಸಿದ್ಧವಾಗಿದೆ. ಗಣೇಶೋತ್ಸವದ ಸಮಯದಲ್ಲಿ ಪ್ರತಿವರ್ಷ ಭವ್ಯವಾದ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಿ, ಹಬ್ಬದ ಎಲ್ಲ ಹತ್ತು ದಿನಗಳಲ್ಲಿ ವಿಭಿನ್ನ ಹೂವುಗಳಿಂದ ಅಲಂಕರಿಸಲಾಗುತ್ತದೆ. ಇನ್ನು ಮುಖ್ಯವಾಗಿ ಶ್ರೀಮಂತ ದಗ್ಡುಶೇಠ್ ಹಲ್ವಾಯಿ ಗಣಪತಿಯ ಪ್ರತಿಕೃತಿಯನ್ನು ಪ್ರತಿವರ್ಷ ದೇಶದ ನಾನಾ ಕಡೆಯ ದೇವಾಲಯಗಳಲ್ಲಿ ಕೂರಿಸಲಾಗುತ್ತದೆ.

ಗಣೇಶೋತ್ಸವದ ಸಮಯದಲ್ಲಿ ಇಡೀ ಹಲ್ವಾಯಿ ಗಣಪತಿ ದೇಗುಲದ ಸುತ್ತಲಿನ ಪ್ರದೇಶ, ಆಕರ್ಷಕ ಬೆಳಕಿನಿಂದ ಕಂಗೊಳಿಸುತ್ತಿರುತ್ತದೆ. ದಗ್ಡುಶೇಠ್ ಹಲ್ವಾಯಿ ಗಣಪನ ದರ್ಶನಕ್ಕಾಗಿ ದೇಶಾದ್ಯಂತ ಅನೇಕ ಗಣೇಶ ಭಕ್ತರು ಬರುತ್ತಾರೆ. ಅಲ್ಲಿ ಗಣೇಶ ಕೂಡಿಸುವ ಚತುರ್ಥಿಯ ದಿನದಿಂದ ಹಿಡಿದು, ಗಣಪತಿಯ ಮುಳುಗಿಸುವವರೆಗೆ ಹತ್ತು ದಿನಗಳಲ್ಲಿ ಪೂಜೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.