ನವದೆಹಲಿ: ಹಾಲಿವುಡ್ ನಟ ಬ್ರಾಡ್ ಪಿಟ್ ಇಸ್ರೋ ಚಂದ್ರನ ಅಂಗಳಕ್ಕೆ ಕಳುಹಿಸಿದ್ದ ವಿಕ್ರಂ ಲ್ಯಾಂಡರ್ ಕುರಿತು ನಾಸಾ ವಿಜ್ಞಾನಿಗಳ ಬಳಿ ವಿಚಾರಿಸಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ ನಿಕ್ ಹೇಗ್ ಅವರೊಂದಿಗೆ 20 ನಿಮಿಷಗಳ ಕಾಲ ಟೆಲಿಫೋನ್ ಮೂಲಕ ಸಂಭಾಷಣೆ ನಡೆಸಿದ್ದಾರೆ.
ಈ ಮಧ್ಯದಲ್ಲಿ ಇಸ್ರೋ ಕಳುಹಿಸಿದ್ದ ವಿಕ್ರಂ ಲ್ಯಾಂಡರ್ ಅನ್ನು ನೀವೇನಾದ್ರೂ ನೋಡಿದ್ರಾ ಎಂದು ಕೂಡ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನಿಕ್ ಅವರು ಚಂದ್ರನ ದಕ್ಷಿಣ ಧೃವದಲ್ಲಿ ಲ್ಯಾಂಡರ್ ಇಳಿಸುವ ಪ್ರಯತ್ನ ಬಹಳ ಕಠಿಣವಾದದ್ದು, ಇಂತಹ ಕಾರ್ಯ ಕೈಗೊಂಡ ಇಸ್ರೋ ಸಂಸ್ಥೆಯ ಧೈರ್ಯ ಮೆಚ್ಚುವಂತದ್ದು. ಭೂಮಿಯ ಮೇಲಿರುವ ನಾಸಾ ಕೇಂದ್ರವು ವಿಕ್ರಂ ಲ್ಯಾಂಡರ್ ಹುಡುಕಿ ಅದರೊಟ್ಟಿಗೆ ಸಂಪರ್ಕ ಸಾಧಿಸಲು ನೆರವು ನೀಡುತ್ತಿದೆ ಎಂದು ಗಗನಯಾತ್ರಿ ಹೇಳಿದರು.
ನೀವಿರುವ ಜಾಗದಿಂದ ಏನಾದ್ರೂ ಲ್ಯಾಂಡರ್ ಕಾಣುತ್ತಿದೆಯೇ ಎಂದು ಪಿಟ್, ಗಗನ ಯಾತ್ರಿಗೆ ಮರು ಪ್ರಶ್ನೆ ಹಾಕಿದಾಗ ಅವರು ದುರಾದೃಷ್ಟವಶಾತ್ ಇಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.