ಹರಿಯಾಣ ವಿಧಾನ ಸಭಾ ಚುನಾವಣೆ 2019ರ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾ ನೇರ ಫೈಟ್ ಇದೆ. ಸದ್ಯದ ಮತ ಎಣಿಕೆ ಪ್ರಕಾರ ಬಿಜೆಪಿ ಅಲ್ಪ ಹಿನ್ನೆಡೆಯಲ್ಲಿದ್ದು, ಕಾಂಗ್ರೆಸ್ 30 ಸೀಟುಗಳ ಮುನ್ನಡೆ ಸಾಧಿಸಿದೆ.
ಹರಿಯಾಣದಲ್ಲಿ ಗದ್ದುಗೆ ಏರಲು 46 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಜೆಪಿಯ ದುಶ್ಯಂತ್ ಚೌಟಾಲರನ್ನು ಭೇಟಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡರೆ ಜೆಜೆಪಿ ಪಕ್ಷ ದುಶ್ಯಂತ್ ಚೌಟಾಲಗೆ ಸಿಎಂ ಸ್ಥಾನ ನೀಡುವುದಾಗ ಕಾಂಗ್ರೆಸ್ ತಿಳಿಸಿದೆ.
ಇನ್ನೊಂದು ಕಡೆ ಬಿಜೆಪಿ ಕೂಡ ತನ್ನ ತಂತ್ರ ನಡೆಸುತ್ತಿದ್ದು, ದುಶ್ಯಂತ್ ಚೌಟಾಲ ಬಿಜೆಪಿಗೆ ಸಪೋರ್ಟ್ ಮಾಡುವಂತೆ ಪ್ರಕಾಶ್ ಸಿಂಗ್ ಬದಲ ಜೊತೆ ಮಾತುಕತೆ ನಡೆಸಿದೆ ಎಂದು ಹೇಳಲಾಗಿದೆ.
-
JJP leader Dushyant Chautala leading on Haryana's Uchana Kalan assembly seat. #HaryanaAssemblyPolls pic.twitter.com/M4iv9xJzyx
— ANI (@ANI) October 24, 2019 " class="align-text-top noRightClick twitterSection" data="
">JJP leader Dushyant Chautala leading on Haryana's Uchana Kalan assembly seat. #HaryanaAssemblyPolls pic.twitter.com/M4iv9xJzyx
— ANI (@ANI) October 24, 2019JJP leader Dushyant Chautala leading on Haryana's Uchana Kalan assembly seat. #HaryanaAssemblyPolls pic.twitter.com/M4iv9xJzyx
— ANI (@ANI) October 24, 2019
ಸದ್ಯ ಹರಿಯಾಣದಲ್ಲಿ ಜೆಜೆಪಿ ಕಿಂಗ್ ಮೇಕರ್ ಆಗಿದ್ದು, ಕಾಂಗ್ರೆಸ್ ಅಥವಾ ಬಿಜೆಪಿ ಯಾವ ಕಡೆಗಾದ್ರೂ ವಾಲಬಹುದು.