ಹಮಿರ್ಪುರ (ಹಿಮಾಚಲ ಪ್ರದೇಶ): ಯೋಗದಲ್ಲಿ ಅತ್ಯಂತ ಕಷ್ಟಕರ ಭಂಗಿ ಆಗಿರುವ ವೃಕ್ಷಾಸನವನ್ನ 1 ಗಂಟೆ 30 ನಿಮಿಷ 30 ಸೆಕೆಂಡುಗಳ ಕಾಲ ಪ್ರದರ್ಶಿಸುವ ಮೂಲಕ ಹಮೀರ್‌ಪುರ ಜಿಲ್ಲೆಯ ಅಜಯ್ ಶರ್ಮಾ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಅಖಿಲ ಭಾರತ ಯೋಗ ಸಂಸ್ಥೆ ಆಯೋಜಿಸಿದ್ದ ಆನ್‌ಲೈನ್ ಯೋಗ ಸ್ಪರ್ಧೆಯಲ್ಲಿ ಅಜಯ್ ಶರ್ಮಾ ಜಯ ಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ದೇಶದ 17 ರಾಜ್ಯಗಳ ಸ್ಪರ್ಧಿಗಳು ಭಾಗಿಯಾಗಿದ್ದರು. ಸೆಪ್ಟೆಂಬರ್ 13 ರಂದು ಆನ್‌ಲೈನ್ ಯೋಗ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯನ್ನು ಅಖಿಲ ಭಾರತ ಯೋಗ ಸಂಸ್ಥೆ ಆಯೋಜಿಸಿತ್ತು.
ಮಟ್ಟಹಾನಿ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರು, ಬಾಲ್ಯದಿಂದಲೂ ಯೋಗಭ್ಯಾಸ ಮಾಡುತ್ತಿದ್ದಾರೆ. ಯೋಗವು ರೋಗಗಳಿಂದ ನಮ್ಮನ್ನ ದೂರವಿರಿಸುತ್ತೆ. ಪ್ರತಿಯೊಬ್ಬರೂ ತಮ್ಮ ಜೀವನದ ಒಂದು ಭಾಗವಾಗಿ ಯೋಗವನ್ನ ಅಳವಡಿಸಿಕೊಳ್ಳಬೇಕು ಅನ್ನೋದು ಅಜಯ್ ಶರ್ಮಾ ಅಭಿಪ್ರಾಯ.
ಇದಕ್ಕೂ ಮೊದಲು ಹಮೀರ್‌ಪುರ ಜಿಲ್ಲೆಯ 11 ವರ್ಷದ ನಿಧಿ ದೋಗ್ರಾ 1 ನಿಮಿಷದಲ್ಲಿ ವಿವಿಧ ಯೋಗ ಭಂಗಿಗಳನ್ನ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದರು. ಇದೀಗ ಅಜಯ್ ಶರ್ಮಾ ಯೋಗ ಕ್ಷೇತ್ರದಲ್ಲಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.