ಗುರುಗಾಂ: ನವದೆಹಲಿ ಟೋಲ್ ಫ್ಲಾಜಾವೊಂದರಲ್ಲಿ ಟೋಲ್ ಫೀ ನೀಡುವಂತೆ ಒತ್ತಾಯ ಮಾಡಿದ ಮಹಿಳಾ ಸಿಬ್ಬಂದಿಗೆ ಕಾರ್ ಚಾಲಕನೊಬ್ಬ ಮುಖಕ್ಕೆ ಗುದ್ದಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಗುರುಗಾಂನ ಖೆರ್ಕಿ ದೌಲ ಟೋಲ್ ಪ್ಲಾಜಾದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಕಾರ್ ಚಾಲಕನ ದಾಳಿಯಿಂದ ಮಹಿಳಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ.
ಇಂದು ಬೆಳಕ್ಕೆ 8:50ಕ್ಕೆ ಫ್ಲಾಜಾದ ಲೈನ್ ನಂಬರ್ 27ರಲ್ಲಿ ಮಹಿಳಾ ಸಿಬ್ಬಂದಿ ಶುಲ್ಕ ಸಂಗ್ರಹಿಸುತ್ತಿದ್ದರು. ಕಪ್ಪು ಬಣ್ಣದ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಫೀ ನೀಡಲು ಒಪ್ಪದೇ, ಇದ್ದಕ್ಕಿದ್ದಂತೆ ಕೋಪಗೊಂಡು ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಮುಖಕ್ಕೆ ಗುದ್ದಿದ್ದರಿಂದ ಆಕೆಯ ಮೂಗಿನಲ್ಲಿ ರಕ್ತ ಸುರಿದಿದೆ. ಪೊಲೀಸರು ಆಗಮಿಸಿ ಸಿಸಿಟಿವಿ ದೃಶ್ಯಗಳನ್ನು ಪರಶೀಲಿಸುತ್ತಿದ್ದಾರೆ ಎಂದು ಟೋಲ್ ಆಪರೇಟರ್ ಕಿರ್ಪಾಲ್ ಸಿಂಗ್ ಹೇಳಿದ್ದಾರೆ.
ಟೋಲ್ ಬೂತ್ ಒಳಗೆ ಕೂತ ಮಹಿಳೆಯೊಂದಿಗೆ ಹೊರಗಿನಿಂದ ಕೈ ಕೈ ಮಿಲಾಯಿಸುತ್ತಿರುವ ವ್ಯಕ್ತಿಯೊಬ್ಬ, ಆನಂತರ ಆಕೆಯ ಮುಖಕ್ಕೆ ಗುದ್ದಿದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಸದ್ಯ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.