ಗಾಂಧಿನಗರ (ಗುಜರಾತ್): ಕಾಶ್ಮೀರ ವಿಚಾರದಲ್ಲಿ ಕುಪಿತವಾಗಿರುವ ಪಾಕಿಸ್ತಾನ ಸದ್ಯ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದೆ ಎನ್ನುವ ಖಚಿತ ಮಾಹಿತಿ ಗುಪ್ತಚರ ಇಲಾಖೆ ಲಭ್ಯವಾಗಿದ್ದು, ಗುಜರಾತ್ ಕರಾವಳಿ ಮೂಲಕ ಪಾಕ್ ಕಮಾಂಡೋಗಳು ಭಾರತ ಪ್ರವೇಶಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಗುಪ್ತಚರ ಇಲಾಖೆಯ ಮಾಹಿತಿಯ ಬಳಿಕ ಗುಜರಾತ್ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿ ಭದ್ರತಾ ಪಡೆ ಆಯಕಟ್ಟಿನ ಸ್ಥಳಗಳಲ್ಲಿ ಹದ್ದಿನ ಕಣ್ಣಿಟ್ಟಿದೆ.
ಯುದ್ಧೋನ್ಮಾದದಲ್ಲಿ ಪಾಕಿಸ್ತಾನ: ಅಣ್ವಸ್ತ್ರ ಹೊತ್ತೊಯ್ಯಬಲ್ಲ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ
ಭಾರತದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಜೈಷೆ ಉಗ್ರರು ವಿಶೇಷವಾಗಿ ಒಂದಷ್ಟು ಮಂದಿ ಉಗ್ರರನ್ನು ತರಬೇತುಗೊಳಿಸಿದ್ದು, ಇದೇ ಉಗ್ರಪಡೆ ಇದೀಗ ಗುಜರಾತ್ ಕರಾವಳಿ ಮೂಲಕ ಭಾರತ ಪ್ರವೇಶಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೆಪ್ಟೆಂಬರ್ 2ರಂದು ಗಣೇಶ ಹಬ್ಬವಿದ್ದು ಈ ವೇಳೆ, ದೇಶದ ವಿವಿಧೆಡೆ ಜನದಟ್ಟಣೆ ಹೆಚ್ಚಾಗಲಿದ್ದು, ಹೀಗಾಗಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಈಗಾಗಲೇ ತಮಿಳುನಾಡು ಹಾಗೂ ಕೇರಳದಲ್ಲಿ ಉಗ್ರದಾಳಿಯ ಸಾಧ್ಯತೆ ಹಿನ್ನೆಲೆಯಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ.