ಅಹಮದಾಬಾದ್: ಕಾರು ಕಾಲುವೆಗೆ ಬಿದ್ದ ಪರಿಣಾಮ ಓರ್ವ ಯುವತಿ ಸೇರಿ ಮೂವರು ದುರ್ಮರಣಕ್ಕೀಡಾಗಿರುವ ಘಟನೆ ಗುಜರಾತ್ನ ಮೆಹಸ್ನಾ ಜಿಲ್ಲೆಯಲ್ಲಿ ನಡೆದಿದೆ.
ಇಬ್ಬರು ಯುವತಿಯರು ಸೇರಿ ಐವರು ಸ್ನೇಹಿತರು ಕಾರಿನಲ್ಲಿ ಸೋಮವಾರ ವಿದ್ಯಾರ್ಥಿವೇತನ ಯೋಜನೆ ಫಾರ್ಮ್ ಭರ್ತಿ ಮಾಡಲು ನಂದಾಸನ್ ಗ್ರಾಮದಿಂದ ಮೆಹ್ಸಾನಾದ ಕದಿ ಪಟ್ಟಣಕ್ಕೆ ಬಂದಿದ್ದರು. ತಮ್ಮ ಕೆಲಸ ಮುಗಿಸಿಕೊಂಡು ವಾಪಸ್ ಹೋಗ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ನರ್ಮದಾ ಕಾಲುವೆಗೆ ಬಿದ್ದಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಆರ್.ಐ ಪರ್ಮಾರ್ ತಿಳಿಸಿದ್ದಾರೆ.
ಈ ವೇಳೆ ಸ್ಥಳೀಯರು ಓರ್ವ ಯುವತಿಯ ರಕ್ಷಣೆ ಮಾಡಿದ್ದಾರೆ. ಆದರೆ ಮತ್ತೋರ್ವ ನಾಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರಾದವರಲ್ಲಿ ಇಬ್ಬರು ಯುವಕರು ಹಾಗೂ ಮತ್ತೋರ್ವ ಯುವತಿ ಸೇರಿದ್ದು, ಕಾಣೆಯಾದ ವ್ಯಕ್ತಿಗೆ ಶೋಧಕಾರ್ಯ ಮುಂದುವರೆದಿದೆ.