ETV Bharat / bharat

ಜ.18ರಿಂದ ಹಾರ್ದಿಕ್ ಪಟೇಲ್ ಸಂಪರ್ಕಕ್ಕೆ ಸಿಕ್ಕಿಲ್ಲ: ಪತ್ನಿ ಕಿಂಜಾಲ್

ಜ.18ರಂದು ಬಂಧನವಾಗಿದ್ದ ಹಾರ್ದಿಕ್ ಪಟೇಲ್ ಅಂದಿನಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಎಲ್ಲಿದ್ದಾರೆ ಎಂದು ನಮಗೆ ಗೊತ್ತಿಲ್ಲ ಎಂದು ಹಾರ್ದಿಕ್ ಪಟೇಲ್ ಪತ್ನಿ ಕಿಂಜಾಲ್ ಪಟೇಲ್ ಹೇಳಿದ್ದಾರೆ.

Hardik Patel untraceable,ಹಾರ್ದಿಕ್ ಪಟೇಲ್ ಸಂಪರ್ಕಕ್ಕೆ ಸಿಕ್ಕಿಲ್ಲ
ಹಾರ್ದಿಕ್ ಪಟೇಲ್
author img

By

Published : Feb 10, 2020, 8:59 PM IST

ಅಹಮದಾಬಾದ್: ಗುಜರಾತ್ ಕಾಂಗ್ರೆಸ್ ಮುಖಂಡ ಮತ್ತು ಪಾಟೀದಾರ್​​ ಸಮುದಾಯದ ಮೀಸಲಾತಿ ಆಂದೋಲನದ ಮುಂಚೂಣಿಯಲ್ಲಿದ್ದ ಹಾರ್ದಿಕ್ ಪಟೇಲ್ ಅವರನ್ನ ಜನವರಿ 18ರಂದು ಬಂಧಿಸಲಾಗಿತ್ತು. ಅಂದಿನಿಂದ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪತ್ನಿ ಕಿಂಜಾಲ್ ಪಟೇಲ್ ತಿಳಿಸಿದ್ದಾರೆ.

2015ರ ಪಾಟೀದಾರ್ ಸಮುದಾಯದ ಆಂದೋಲನಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣಗಳನ್ನು ಎದುರಿಸುತ್ತಿರುವ ಪಟೇಲ್, ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಹೀಗಾಗಿ ಜನವರಿ 18ರಂದು ಬಂಧಿಸಲಾಗಿತ್ತು.

ಬಂಧನವಾದ ನಾಲ್ಕು ದಿನಗಳ ನಂತರ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಪಠಾಣ್ ಮತ್ತು ಗಾಂಧಿನಗರದಲ್ಲಿ ದಾಖಲಾಗಿದ್ದ ಮತ್ತೆರಡು ಪ್ರತ್ಯೇಕ ಪ್ರಕರಣದಲ್ಲಿ ಹಾರ್ದಿಕ್​​ರನ್ನ ಬಂಧಿಸಲಾಗಿತ್ತು. ಈ ಎರಡು ಪ್ರಕರಣದಲ್ಲಿ ಮತ್ತೆ ಜಾಮೀನು ಪಡೆದಿದ್ದ ಪಟೇಲ್ ಜನವರಿ 24ರಂದು ಜೈಲಿನಿಂದ ಹೊರಬಂದಿದ್ದರು.

ಮತ್ತೆ ವಿಚಾರಣೆಗೆ ಹಾಜರಾಗದ ಹಾರ್ದಿಕ್ ಪಟೇಲ್​ ವಿರುದ್ಧ ಫೆ.7ರಂದು ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಆದರೆ ಹಾರ್ದಿಕ್ ಪಟೇಲ್ ಮಾತ್ರ ಯಾರ ಕೈಗೂ ಸಿಗುತ್ತಿಲ್ಲ.

ಪಾಟೀದಾರ್ ಸಮುದಾಯದ ನಾಯಕರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ವಿಚಾರ ಕುರಿತು ಮಾತನಾಡಿರುವ ಹಾರ್ದಿಕ್ ಪಟೇಲ್ ಪತ್ನಿ ಕಿಂಜಾಲ್ ಪಟೇಲ್, ' ಜ.18ರಂದು ಬಂಧನವಾಗಿದ್ದ ಹಾರ್ದಿಕ್ ಪಟೇಲ್ ಅಂದಿನಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಎಲ್ಲಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಆದರೂ ಆಗಿಂದಾಗೆ ಮನೆಗೆ ಬರುತ್ತಿರುವ ಪೊಲೀಸರು ಹಾರ್ದಿಕ್ ಪಟೇಲ್ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ' ಎಂದಿದ್ದಾರೆ.

2015ರಲ್ಲಿ ನಡೆದಿದ್ದ ಮೀಸಲಾತಿ ಆಂದೋಲನದಲ್ಲಿ ಭಾಗವಹಿಸಿದ್ದ ಜನರ ವಿರುದ್ಧ ದಾಖಲಾಗಿರುವ ಸುಮಾರು 1,500 ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಪಾಟೀದಾರ್ ನಾಯಕರ ಸಭೆ ಆಯೋಜಿಸಲಾಗಿತ್ತು. ಹಾರ್ದಿಕ್ ಪಟೇಲ್ ವಿರುದ್ಧ ಗುಜರಾತ್​ನಲ್ಲಿ ಒಟ್ಟು 20 ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.