ETV Bharat / bharat

ಪಂಜಾಬ್​​​ನ ಹಸಿರು ಯೋಗಿ: 8 ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟ ಗ್ರೀನ್ ಮ್ಯಾನ್..!

ಪಂಜಾಬ್​​ನ ರೋಹಿತ್ ಮೆಹ್ರಾ ಅವರು ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿ, ಎಂಟು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ. ಅವರ ಪ್ರಕೃತಿ ಪ್ರೇಮ ಪ್ರಶಂಸನೀಯ ಮತ್ತು ಹಲವರಿಗೆ ಮಾದರಿಯಾಗಿದೆ.

Rohit Mehra
ಪರಿಸರ ಪ್ರೇಮಿ ರೋಹಿತ್ ಮೆಹ್ರಾ
author img

By

Published : Oct 30, 2020, 6:04 AM IST

ಪಂಜಾಬ್: ಗ್ರೀನ್ ಮ್ಯಾನ್ ಎಂದು ಪ್ರಸಿದ್ಧವಾಗಿರುವ ರೋಹಿತ್ ಮೆಹ್ರಾ ದೇಶಾದ್ಯಂತ 75 ಗ್ರೀನ್ ಬೆಲ್ಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಅಭಿವೃದ್ಧಿಪಡಿಸಿದ ಪ್ರತಿಯೊಂದು ಗ್ರೀನ್ ಬೆಲ್ಟ್ 600 ರಿಂದ 700 ಮರಗಳನ್ನು ಹೊಂದಿದೆ. ಹೀಗೆ, ಅವರು ದೇಶದ ಪ್ರತಿಯೊಂದು ಮೂಲೆ ಮತ್ತು ಮೂಲೆಯಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.

ರೋಹಿತ್ ಮೆಹ್ರಾ ಪ್ರಸ್ತುತ ಲುಧಿಯಾನದ ತೆರಿಗೆ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರೋಹಿತ್ ಮೆಹ್ರಾ ತಮ್ಮ ವೈಯಕ್ತಿಕ ಹಣದಲ್ಲಿಯೇ ಪ್ಲಾಂಟೇಶನ್ ಡ್ರೈವ್ ನಡೆಸುತ್ತಿದ್ದಾರೆ.

ಪರಿಸರ ಪ್ರೇಮಿ ರೋಹಿತ್ ಮೆಹ್ರಾ

ತೆರಿಗೆ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ರೋಹಿತ್ ತಮ್ಮ ಬಿಗಿಯಾದ ವೇಳಾ ಪಟ್ಟಿಯಲ್ಲಿಯೂ ಪರಿಸರದ ಉಳಿವಿಗಾಗಿ ಸ್ವಲ್ಪ ಸಮಯ ಮೀಸಲಿಟ್ಟಿದ್ದಾರೆ. ಪರಿಸರದ ಸೌಂದರ್ಯವನ್ನು ಕಾಪಾಡಲು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಪರಿಸರವನ್ನು ಅಚ್ಚುಕಟ್ಟಾಗಿ ಮತ್ತು ಹಸಿರಾಗಿಡಲು ಹಗಲು-ರಾತ್ರಿ ಕೆಲಸ ಮಾಡುತ್ತಾರೆ.

ರೋಹಿತ್ ಮೆಹ್ರಾ ದೇಶವನ್ನು ಹಸಿರಾಗಿಡಲು 1,000 ಗ್ರೀನ್ ಬೆಲ್ಟ್ ಅಥವಾ ಮಿನಿ ಕಾಡುಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದಾರೆ. ರೋಹಿತ್ ಪಂಜಾಬ್‌ನಲ್ಲಿ ಪ್ರಕೃತಿಯ ಮೇಲಿನ ಪ್ರೀತಿಯಿಂದ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಸರ್ಕಾರಿ ಉನ್ನತ ಅಧಿಕಾರಿಯಾಗಿದ್ದರೂ, ರೋಹಿತ್ ಅವರ ಪ್ರಕೃತಿ ಪ್ರೇಮ ಪ್ರಶಂಸನೀಯ ಮತ್ತು ಹಲವರಿಗೆ ಮಾದರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.