ETV Bharat / bharat

80ರ ಹರೆಯದಲ್ಲೂ ಫೋಟೊ ಶೂಟ್.. ನಾವ್ಯಾರಿಗೇನೂ ಕಮ್ಮಿಯಿಲ್ಲ ಎಂದ ‘ದಂ’ಪತಿ - photoshoot

ಫೋಟೊ ಶೂಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ನಿಶ್ಚಿತಾರ್ಥ, ಮದುವೆಗೆ ಪ್ರತಿಯೊಂದಕ್ಕೂ ಫೋಟೊ ಶೂಟ್ ಮುಖ್ಯ. ಆದ್ರೆ, ಕೇರಳ ದಂಪತಿಯ ಈ ಫೋಟೊ ಶೂಟ್ ಯುವಕ, ಯುವತಿಯರನ್ನೂ ನಾಚಿಸುವಂತಿದೆ.

Grandparents' wedding photoshoot
80 ರ ಹರೆಯದಲ್ಲೂ ಫೋಟೋ ಶೂಟ್
author img

By

Published : Oct 3, 2020, 6:10 PM IST

Updated : Oct 3, 2020, 6:18 PM IST

ಇಡುಕ್ಕಿ (ಕೇರಳ): ಇತ್ತೀಚೆಗೆ ಮದುವೆಗೂ ಮುನ್ನ ಫೋಟೊ ಶೂಟ್ ಮಾಡಿಸೋದು ಟ್ರೆಂಡ್ ಆಗಿ ಬಿಟ್ಟಿದೆ. ಆದ್ರೆ ಕೇರಳದ ಇಡುಕ್ಕಿಯಲ್ಲಿ 80ರ ವಯೋ ದಂಪತಿ ಫೋಟೊ ಶೂಟ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

85 ವರ್ಷದ ಕುಂಜಟ್ಟಿ ಹಾಗೂ 80 ವರ್ಷದ ಚಿನಮ್ಮ ಮದುವೆಯಾಗಿ 58 ವರ್ಷಗಳು ಕಳೆದಿವೆ. ಆ ವೇಳೆ ಅವರಿಗೆ ಫೋಟೊ ತೆಗೆಸಿಕೊಳ್ಳಲು ಅವಕಾಶ ಸಿಗಲಿಲ್ಲವಂತೆ. ಕೋವಿಡ್ ಸಮಯದಲ್ಲಿ ಕುಟುಂಬಸ್ಥರೆಲ್ಲ ಒಂದೆಡೆ ಸೇರಿದಾಗ ಅಜ್ಜ, ಅಜ್ಜಿಯ ಫೋಟೊ ಶೂಟ್ ಮಾಡೋಕೆ ನಿರ್ಧರಿಸಿದರಂತೆ. ಹಾಗಾಗಿಯೇ, ಅವರ ಮೊಮ್ಮಗ ವೃದ್ಧ ದಂಪತಿಯ ಚಿತ್ರೀಕರಣ ಮಾಡಿದ್ದಾರೆ.

ಥೇಟ್ ಮದುವೆಗೆ ರೆಡಿಯಾಗುವ ಗಂಡು, ಹೆಣ್ಣಿನಂತೆ ಈ ದಂಪತಿ ರೆಡಿಯಾಗಿದ್ದಾರೆ. ಸೂಟು, ಬೂಟು ತೊಟ್ಟು ಕನ್ನಡಕ ಧರಿಸಿರುವ ಇಂಜುಟ್ಟಿ, ಬಾದಾಮಿ ಬಣ್ಣದ ಸೀರೆಯುಟ್ಟು ಮದುಮಗಳಂತೆ ಸಿಂಗಾರಗೊಂಡಿರುವ ಚಿನ್ನಮ್ಮ. ಇವರಿಬ್ಬರು ಫೋಟೊ ಶೂಟ್​ಗೆ ಕೊಟ್ಟಿರುವ ಪೋಸ್ ನವ ವಧುವರರನ್ನೂ ನಾಚಿಸುಂತಿದೆ.

80ರ ಹರೆಯದಲ್ಲೂ ಫೋಟೊ ಶೂಟ್

ಈ ಬಗ್ಗೆ ಪ್ರತಿಕ್ರಿಯಿಸಿರುವ ದಂಪತಿ ನಮಗೂ ಎಲ್ಲರಂತೆ ಫೋಟೊ ತೆಗೆಸಿಕೊಳ್ಳುವ ಬಯಕೆ ಇತ್ತು. ಆದರೆ ಆಗಿನ ಕಾಲದಲ್ಲಿ ನಮಗೆ ಅವಕಾಶವಿರಲಿಲ್ಲ. ನಮ್ಮ ಆಸೆಯನ್ನು ನಮ್ಮ ಮೊಮ್ಮಗ ಜಿಬಿನ್​ಗೆ ಹೇಳಿದಾಗ ಅವನು ನಮ್ಮ ಆಸೆ ಈಡೇರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

Last Updated : Oct 3, 2020, 6:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.