ETV Bharat / bharat

ದೆಹಲಿ ಗಲಭೆ ಬಳಿಕ ಸರ್ಕಾರ ರೈತರ ನಿಜವಾದ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ: ಸೀತಾರಾಮ್​ ಯೆಚೂರಿ - ದೆಹಲಿ ಗಲಭೆ ಬಳಿಕ ಸರ್ಕಾರ ರೈತರ ನಿಜವಾದ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ

ರೈತರ ಟ್ರ್ಯಾಕ್ಟರ್ ರ‍್ಯಾಲಿಯ ವೇಳೆ ನಡೆದ ಹಿಂಸಾಚಾರವನ್ನಿಟ್ಟುಕೊಂಡು ಅವರ ಚಳವಳಿಯನ್ನು ನಿಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಬಹುಪಾಲು ರೈತರು ನಿಗದಿತ ಮಾರ್ಗದಲ್ಲಿಯೇ ಟ್ರ್ಯಾಕ್ಟರ್​ನೊಂದಿಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದರು. ಆದ್ರೆ ಕೆಲವೇ ರೈತರಿಗೆ ಮಾತ್ರ ಬೇರೆ ಮಾರ್ಗದಲ್ಲಿ ಹೋಗಲು ಅನುಮತಿ ನೀಡಲಾಗಿದೆ, ಇದರಿಂದ ಅಹಿತಕರ ಘಟನೆ ನಡೆಯಿತು ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್​ ಯೆಚೂರಿ ಹೇಳಿದ್ದಾರೆ.

CPI(M) general secretary Sitaram Yechury
ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್​ ಯೆಚೂರಿ
author img

By

Published : Jan 29, 2021, 7:08 AM IST

Updated : Jan 29, 2021, 9:02 AM IST

ನವದೆಹಲಿ: ರೈತರ ಟ್ರ್ಯಾಕ್ಟರ್​​ ರ‍್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎನ್​ಡಿಎ ಸರ್ಕಾರವನ್ನು ದೂಷಿಸುತ್ತಿರುವ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್​ ಯೆಚೂರಿ, ಈ ವಿಷಯವನ್ನಿಟ್ಟುಕೊಂಡು ರೈತರ ನಿಜವಾದ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರೈತರ ಟ್ರ್ಯಾಕ್ಟರ್ ರ‍್ಯಾಲಿಯ ವೇಳೆ ನಡೆದ ಹಿಂಸಾಚಾರವನ್ನಿಟ್ಟುಕೊಂಡು ಅವರ ಚಳವಳಿಯನ್ನು ನಿಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಬಹುಪಾಲು ರೈತರು ನಿಗದಿತ ಮಾರ್ಗದಲ್ಲಿಯೇ ಟ್ರ್ಯಾಕ್ಟರ್​ನೊಂದಿಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದರು. ಆದರೆ, ಕೆಲವೇ ರೈತರಿಗೆ ಮಾತ್ರ ಬೇರೆ ಮಾರ್ಗದಲ್ಲಿ ಹೋಗಲು ಅನುಮತಿ ನೀಡಲಾಗಿದೆ, ಇದರಿಂದ ಅಹಿತಕರ ಘಟನೆ ನಡೆಯಿತು. ಪೊಲೀಸರು ಸೂಚಿಸಿದ ಮಾರ್ಗದಲ್ಲಿಯೇ ಲಕ್ಷಾಂತರ ರೈತರು ಟ್ರ್ಯಾಕ್ಟರ್​ಗಳೊಂದಿಗೆ ಶಾಂತಿಯುತವಾಗಿ ಹೋಗುತ್ತಿದ್ದರು ಎಂದು ಯೆಚೂರಿ ಹೇಳಿದ್ದಾರೆ.

ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್​ ಯೆಚೂರಿ

ಕೆಲವು ರೈತರು ನಿಗದಿತ ಮಾರ್ಗದಿಂದ ಬೇರೆ ಕಡೆ ಹೋಗಲು ಹೇಗೆ ಅನುಮತಿ ಪಡೆದರೋ ಗೊತ್ತಿಲ್ಲ. ಅಲ್ಲದೇ ಅವರು ದೆಹಲಿಯನ್ನು ಹೇಗೆ ತಲುಪಿದರು ಎಂಬುದು ತಿಳಿದಿಲ್ಲ. ಬಳಿಕ ಕೆಂಪು ಕೋಟೆಗೆ ಬಂದು ತ್ರಿವರ್ಣದ ಬಳಿ ಮತ್ತೊಂದು ಧ್ವಜವನ್ನು ಹಾರಿಸಿದರು ಎಂದು ಯೆಚೂರಿ ಹೇಳಿದ್ದಾರೆ.

ಓದಿ: 'ಈಟಿವಿ ಭಾರತ' ವಿಶೇಷ ಸಂದರ್ಶನ: ಚು.ಆಯೋಗದ ಮಾಜಿ ಆಯುಕ್ತ ಒ.ಪಿ.ರಾವತ್ ಮಾತು

ಈ ಇಡೀ ಪ್ರಕರಣದ ಪ್ರಮುಖ ಆರೋಪಿ ಪಂಜಾಬಿ ನಟ ದೀಪ್ ಸಿಧು, ಅವರಿಗೆ ಬಿಜೆಪಿಯೊಂದಿಗೆ ಸಂಪರ್ಕವಿದೆ. ಆದರೆ, ಇದರ ಹೊರತಾಗಿಯೂ, ರೈತರೊಂದಿಗೆ ದಬ್ಬಾಳಿಕೆ ನಡೆಯುತ್ತಿದೆ. ಕೆಂಪು ಕೋಟೆಗೆ ಪ್ರವೇಶಿಸಿದ ದುಷ್ಕರ್ಮಿಗಳು ಈ ಹಿಂದೆ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಅವರು ಆರೋಪ ಮಾಡಿದ್ದಾರೆ.

ಸರ್ಕಾರದೊಂದಿಗೆ ಮಾತುಕತೆ ನಡೆಸಿದ ರೈತರ ವಿರುದ್ಧ 25 ಎಫ್‌ಐಆರ್ ದಾಖಲಿಸಲಾಗಿದೆ. ದೆಹಲಿ ಗಲಭೆಗಳನ್ನು ಪ್ರಚೋದಿಸುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದವರು ಮುಕ್ತವಾಗಿ ಓಡಾಡುತ್ತಿದ್ದಾರೆ. ಆದರೆ ದೆಹಲಿ ಪೊಲೀಸರು ಸಂತ್ರಸ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Last Updated : Jan 29, 2021, 9:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.