ನವದೆಹಲಿ: ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ದಿಕ್ಷಾ (DIKSHA) ಪ್ಲಾಟ್ಫಾರ್ಮ್ನಲ್ಲಿ ಇಂಟಿಗ್ರೇಟೆಡ್ ಗವರ್ನಮೆಂಟ್ ಆನ್ಲೈನ್ ಟ್ರೇನಿಂಗ್ (iGOT) ಎಂಬ ಪೋರ್ಟಲ್ ಮೂಲಕ ಕೋವಿಡ್-19 ಹೋರಾಟಕ್ಕಾಗಿ ಹೊಸ ತರಬೇತಿ ಕೋರ್ಸ್ಗಳನ್ನು ಸರ್ಕಾರ ಆರಂಭಿಸಿದೆ.
ದೇಶಾದ್ಯಂತ ಕೋವಿಡ್ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ ಮುಂಚೂಣಿಯಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಒಂದೊಮ್ಮೆ ಕೊರೊನಾ ವೈರಸ್ ಸ್ಥಿತಿ ಸ್ಫೋಟಗೊಂಡಲ್ಲಿ ಹೆಚ್ಚಿನ ಆರೋಗ್ಯ ಸಿಬ್ಬಂದಿ ಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ದೂರದೃಷ್ಟಿಯ ಕ್ರಮವಾಗಿ ಈ ಕೋರ್ಸ್ ಪ್ರಾರಂಭಿಸಲಾಗಿದೆ.
ವೈದ್ಯರು, ನರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ಟೆಕ್ನಿಶಿಯನ್ಸ್, ಎಎನ್ಎಂ, ರಾಜ್ಯ ಸರ್ಕಾರಿ ಅಧಿಕಾರಿಗಳು, ನಾಗರಿಕ ರಕ್ಷಣಾ ಅಧಿಕಾರಿಗಳು, ವಿವಿಧ ಪೊಲೀಸ್ ವಿಭಾಗಗಳು, ಎನ್ಸಿಸಿ, ನೆಹರು ಯುವ ಕೇಂದ್ರ ಸಂಘಟನೆ, ಎನ್ನೆಸ್ಸೆಸ್, ಇಂಡಿಯನ್ ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ಗಳಿಗಾಗಿ ಐಜಿಓಟಿ ಕೋರ್ಸ್ಗಳನ್ನು ವಿಶೇಷವಾಗಿ ತಯಾರಿಸಲಾಗಿದೆ.
https://igot.gov.in/igot/ ಮೂಲಕ ಐಜಿಓಟಿ ಪೋರ್ಟಲ್ಗೆ ಭೇಟಿ ನೀಡಿ ಕೋರ್ಸ್ಗೆ ನೋಂದಾಯಿಸಬಹುದು ಹಾಗೂ ತಮ್ಮ ಬಿಡುವಿನ ವೇಳೆಯಲ್ಲಿ ಪಾಠಗಳನ್ನು ಕಲಿಯಬಹುದು.