ETV Bharat / bharat

ವಿಶೇಷ ಲೇಖನ: ಗುಣಮಟ್ಟದ ಶಿಕ್ಷಣಕ್ಕೆ ರಾಜಪಥ! - Lack of quality education

ಹೊಸ ಸಂಶೋಧನೆಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ಮೇಲೆ ಸರ್ಕಾರಗಳು ಆಸಕ್ತಿ ತೋರಿಸುವುದರ ಹಿಂದೆ ಶ್ರಮಿಕ ಉತ್ಪಾದಕತೆ ಮತ್ತು ಒಟ್ಟು ರಾಷ್ಟ್ರೀಯ ಉತ್ಪನ್ನದ ಆಶಯವಿದೆ. ತಲೆಮಾರುಗಳುದ್ದಕ್ಕೂ ತಲೆ ಎತ್ತಿ ನಿಲ್ಲುವಂತೆ ದೇಶಗಳನ್ನು ನಿರ್ಮಿಸುವಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಆದರೆ, ಇಂತಹ ಉನ್ನತ ಕ್ಷೇತ್ರವು ನಮ್ಮ ದೇಶದಲ್ಲಿ ಬುನಾದಿ ಹಂತದಿಂದಲೇ ದುರ್ಬಲವಾಗಿದೆ ಎಂಬ ಆರೋಪಗಳಿವೆ.

Golden Path to Quality Education
ಗುಣಮಟ್ಟದ ಶಿಕ್ಷಣಕ್ಕೆ ರಾಜಪಥ!
author img

By

Published : Mar 19, 2020, 4:21 PM IST

ವಿಶ್ವವಿದ್ಯಾಲಯಗಳು ಉನ್ನತ ಕಲಿಕೆಯ ಕೇಂದ್ರಗಳಾಗಿವೆ. ವಿನೂತನ ಯೋಚನೆಗಳ ಮೂಲಕ ಅವು ಹೊಸ ಗಾಳಿಯನ್ನು ಉಸಿರಾಡುತ್ತವೆ. ಕ್ರಿಯಾಶೀಲತೆಯ ರೆಕ್ಕೆಗಳ ಮೇಲೆ ಏರುತ್ತವೆ. ಹಾಗೂ ಮಾನವ ಸಂಪನ್ಮೂಲಗಳ ಸಾಧ್ಯತೆಗಳನ್ನು ಸಮಾಜದ ಅಭ್ಯುದಯಕ್ಕಾಗಿ ಅನಾವರಣಗೊಳಿಸುತ್ತವೆ. ಇಂತಹ ವಿಶ್ವವಿದ್ಯಾಲಯಗಳ ಇವತ್ತಿನ ಪರಿಸ್ಥಿತಿ ಏನಿದೆ? ಅವುಗಳ ಪೈಕಿ ಬಹುತೇಕ ಸಂಸ್ಥೆಗಳು ಅನುದಾನದ ಕೊರತೆ ಹಾಗೂ ಸಿಬ್ಬಂದಿಯ ಕೊರತೆಯಿಂದ ಬಳಲುತ್ತಿವೆ. ಸಂಸದೀಯ ಸ್ಥಾಯಿ ಸಮಿತಿಯ ವರದಿ ಈ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲಗಳ ಸಚಿವಾಲಯಕ್ಕೆ ಭಾರಿ ಪೆಟ್ಟನ್ನೇ ನೀಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಉನ್ನತ ಶಿಕ್ಷಣ ಇಲಾಖೆಯ ರೂ. 58,000 ಕೋಟಿ ಅನುದಾನದ ಬೇಡಿಕೆಗೆ ಬಜೆಟ್‌ನಲ್ಲಿ ಹಂಚಿಕೆಯಾಗಿರುವ ಅನುದಾನವು ಅಂದಾಜು ರೂ.39,000 ಕೋಟಿ ಮಾತ್ರ! ಇಷ್ಟು ಕಡಿಮೆ ಅನುದಾನದಲ್ಲಿ ಮೂಲ ಸೌಕರ್ಯಗಳು ಹಾಗೂ ವಿದ್ಯಾರ್ಥಿಗಳು-ಬೋಧಕರ ಅನುಪಾತಕ್ಕೆ ಅನುಗುಣವಾಗುವಂತೆ ಹೊಸ ಶೈಕ್ಷಣಿಕ ಹುದ್ದೆಗಳನ್ನು ಹೊಂದುವುದು ಸಾಧ್ಯವಿಲ್ಲ ಎಂದು ತನ್ನ ಅಸಂತೃಪ್ತಿ ಹೊರಹಾಕಿರುವ ಸಂಸದೀಯ ಸ್ಥಾಯಿ ಸಮಿತಿಯು, ವಿವಿಧ ಹಂತಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಸಾರಾಂಶ ರೂಪದಲ್ಲಿ ನೀಡಿದೆ.

ಆ ಪ್ರಕಾರ, ಎನ್‌ಐಟಿಯಲ್ಲಿ ಇರಬೇಕಾದ ಹುದ್ದೆಗಳ ಪೈಕಿ ಶೇ 37.7 ರಷ್ಟು ಹುದ್ದೆಗಳು ಖಾಲಿ ಇವೆ. ಅಷ್ಟೇ ಪ್ರಮಾಣದ ಹುದ್ದೆಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿಯೂ ಖಾಲಿ ಇವೆ. ಐಐಟಿಗಳಲ್ಲಿ ಖಾಲಿ ಇರುವ ಶೇ 29ರಷ್ಟು ಹುದ್ದೆಗಳೂ ಸೇರಿದಂತೆ ಈ ವಲಯದಲ್ಲಿ ಸದ್ಯ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 78,000. ಅಂದರೆ, ಸರಾಸರಿ ಮೂರು ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಒಂದು ಸಂಸ್ಥೆಯಲ್ಲಿ ಬೋಧಕ ಸಿಬ್ಬಂದಿಯ ಕೊರತೆಯಿದೆ. ಸಮಸ್ಯೆಯ ಮೂಲವನ್ನು ಕೆದಕಿರುವ ನೀತಿ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್‌ ಅವರು, ಉನ್ನತ ಶಿಕ್ಷಣಕ್ಕೆ ಚೀನಾ ದೇಶದಲ್ಲಿ ಹಂಚಿಕೆಯಾಗಿರುವ ರೂ.10 ಲಕ್ಷ ಕೋಟಿಗೆ ಹೋಲಿಸಿದಾಗ, ಭಾರತ ಹಂಚಿಕೆ ಮಾಡಿರುವ ಅನುದಾನ ಮಹಾಸಾಗರದಲ್ಲಿ ಒಂದು ಹನಿ ಇದ್ದ ಹಾಗೆ ಎಂದಿದ್ದಾರೆ.

ಇನ್ನು, ಹಂಚಿಕೆಯಾಗಿರುವ ಅನುದಾನದಲ್ಲಿ ಶೇ 50ರಷ್ಟನ್ನು ಐಐಟಿ, ಐಐಎಂ ಮತ್ತು ಎನ್‌ಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ದೇಶಾದ್ಯಂತ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡಾ 97ರಷ್ಟು ವಿದ್ಯಾರ್ಥಿಗಳನ್ನು ಹೊಂದಿರುವ ಇತರ 865 ಶಿಕ್ಷಣ ಸಂಸ್ಥೆಗಳಿಗೆ ಶೇ 49ರಷ್ಟು ಅನುದಾನವನ್ನು ಹಂಚಿಕೆ ಮಾಡಿರುವ ಶಿಕ್ಷಣ ಇಲಾಖೆಯ ತರ್ಕ ಮತ್ತು ಆದ್ಯತೆ ದೋಷಪೂರಿತ ಎಂದು ಸಂಸದೀಯ ಸ್ಥಾಯಿ ಸಮಿತಿ ಗುರುತಿಸಿದೆ. ಅನುದಾನ ಹಂಚಿಕೆಯಷ್ಟೇ ಅಲ್ಲದೇ, ಇತರ ಹಲವಾರು ಸ್ಥಳೀಯ ಸಮಸ್ಯೆಗಳನ್ನು ದೇಶಿ ಶಿಕ್ಷಣ ಕ್ಷೇತ್ರ ಎದುರಿಸುತ್ತಿದೆ.

ನಿರಂತರವಾಗಿ ವಿಸ್ತರಿಸುವ ಉನ್ನತ ಶಿಕ್ಷಣದ ಅವಶ್ಯಕತೆಗಳನ್ನು ಈಡೇರಿಸಲು ಆಗಾಗ ಅದನ್ನು ಬಲಪಡಿಸಬೇಕಾದ ಅವಶ್ಯಕತೆಯಿದೆ ಎಂದು ಏಳು ದಶಕಗಳ ಹಿಂದೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯೂನಿವರ್ಸಿಟಿ ಗ್ರ್ಯಾಂಟ್ಸ್‌ ಕಮೀಶನ್‌–ಯುಜಿಸಿ) ಅಧ್ಯಕ್ಷರಾಗಿದ್ದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್‌ ಹೇಳಿದ್ದರು. ಆದರೆ, ಆ ನಂತರ ಬಂದ ಸಾಲು ಸಾಲು ಸರ್ಕಾರಗಳು ತಮ್ಮ ಅಜ್ಞಾನದಿಂದಾಗಿ ದೇಶ ನಿರ್ಮಾಣದಲ್ಲಿ ಉನ್ನತ ಶಿಕ್ಷಣ ಹೊಂದಿರುವ ಮಹತ್ವ ಗ್ರಹಿಸಲಿಲ್ಲ. ಇದರಿಂದಾಗಿ ಖಾಲಿ ಹುದ್ದೆಗಳ ಸಂಖ್ಯೆ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚುತ್ತಲೇ ಹೋಯಿತು.

ವಿದೇಶಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಆಯ್ಕೆ ಮಾಡುವ ದೇಶಗಳ ಪೈಕಿ ಸದ್ಯ 29ನೇ ಸ್ಥಾನದಲ್ಲಿರುವ ಭಾರತದತ್ತ ಪ್ರತಿ ವರ್ಷ 2 ಲಕ್ಷ ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯಲು ವಿಶೇಷ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬ ಪ್ರಸ್ತಾಪವನ್ನು ಇತ್ತೀಚೆಗಷ್ಟೇ ನೀತಿ ಆಯೋಗ ಮುಂದಿಟ್ಟಿತ್ತು. “ಭಾರತದಲ್ಲಿ ಕಲಿಯಿರಿ” ಎಂಬ ಯೋಜನೆಯನ್ನು ವಿಸ್ತರಿಸುವ ಮೂಲಕ ಪ್ರಾರಂಭದಲ್ಲಿ 30 ದೇಶಗಳ ವಿದ್ಯಾರ್ಥಿಗಳನ್ನು ಸೆಳೆಯಲು ಮೋದಿ ಸರ್ಕಾರ ಕಳೆದ ವರ್ಷ ಇದೇ ಸಮಯದಲ್ಲಿ ಪ್ರಸ್ತಾಪ ಮಾಡಿತ್ತು. ಆದರೆ, ವಿಶ್ವವಿದ್ಯಾಲಯಗಳು ಹಾಗೂ ಹೊಸದಾಗಿ ಹೊಮ್ಮುತ್ತಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈಗಾಗಲೇ ಖಾಲಿ ಇರುವ ಬೋಧಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಬೇಕಾದ ಅವಶ್ಯಕ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಕಂಡುಕೊಳ್ಳುವುದೇ ನಿಜವಾದ ಸಮಸ್ಯೆಯಾಗಿದೆ.

ವಾಸ್ತವ ಏನೆಂದರೆ, ಪಿಹೆಚ್‌.ಡಿ. ಮತ್ತು ಸ್ನಾತಕೋತ್ತರ ಪದವಿಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಕೂಡಾ ಸಂದರ್ಶನದಲ್ಲಿ ಕಳಪೆಯಾಗಿ ಅನುತ್ತೀರ್ಣರಾಗುತ್ತಿರುವುದು ಉನ್ನತ ಶಿಕ್ಷಣದ ಗುಣಮಟ್ಟಗಳು ಕುಸಿಯುತ್ತಿರುವುದನ್ನು ತೋರಿಸುತ್ತದೆ. ಭವಿಷ್ಯದ ತಲೆಮಾರನ್ನು ರೂಪಿಸಲು ಬೇಕಾದ ಬೋಧಕರನ್ನು ಇಂತಹ ಅರೆಬರೆ ಗುಣಮಟ್ಟದ ಸರಕಿನಲ್ಲಿ ಹುಡುಕುವುದೇ ನಿಜವಾದ ಸವಾಲಾಗಿದೆ. ಉನ್ನತ ಶಿಕ್ಷಣದಲ್ಲಿ ಬೋಧನಾ ಮಟ್ಟಗಳ ಕುಸಿತವನ್ನು ತಡೆಯುವ ಉದ್ದೇಶದಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಎರಡು ವರ್ಷಗಳ ಹಿಂದೆ ಯುಜಿಸಿ ಸಿದ್ಧಪಡಿಸಿತ್ತು. ಆನಂತರ ಬೆಳಕಿಗೆ ಬಂದ ನಕಲಿ ಪಿಹೆಚ್‌.ಡಿ ಘಟನೆಗಳು ನಿಜಕ್ಕೂ ಆಘಾತಕಾರಿಯಾಗಿವೆ. ಇಂತಹ ಪರಿಸ್ಥಿತಿಗಳಲ್ಲಿ ಉನ್ನತ ಗುಣಮಟ್ಟಗಳನ್ನ ಸಾಧಿಸುವಲ್ಲಿ ಆಳ ತಿಳುವಳಿಕೆಯ ಜೊತೆಗೆ ದೀರ್ಘಕಾಲೀನ ಕ್ರಿಯಾ ಯೋಜನೆಯನ್ನು ಹೊಂದುವಲ್ಲಿ ನಿಜವಾದ ಪರಿಹಾರ ಅಡಗಿದೆ.

ಹೊಸ ಸಂಶೋಧನೆಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ಮೇಲೆ ಸರ್ಕಾರಗಳು ಆಸಕ್ತಿ ತೋರಿಸುವುದರ ಹಿಂದೆ ಶ್ರಮಿಕ ಉತ್ಪಾದಕತೆ ಮತ್ತು ಒಟ್ಟು ರಾಷ್ಟ್ರೀಯ ಉತ್ಪನ್ನದ ಆಶಯವಿದೆ. ತಲೆ ತಲೆಮಾರುಗಳುದ್ದಕ್ಕೂ ತಲೆ ಎತ್ತಿ ನಿಲ್ಲುವಂತೆ ದೇಶಗಳನ್ನು ನಿರ್ಮಿಸುವಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಆದರೆ, ಇಂತಹ ಉನ್ನತ ಕ್ಷೇತ್ರವು ನಮ್ಮ ದೇಶದಲ್ಲಿ ಬುನಾದಿ ಹಂತದಿಂದಲೇ ದುರ್ಬಲವಾಗಿದೆ.

ಭಾರತ 15 ಲಕ್ಷಕ್ಕೂ ಹೆಚ್ಚು ಶಾಲೆಗಳನ್ನು ಹೊಂದಿದ್ದರೂ ದುರ್ಬಲ ಶಾಲಾ ವ್ಯವಸ್ಥೆಯಿಂದಾಗಿ 15 ವರ್ಷ ಹಿಂದಿದೆ ಎಂದು ಯುನೆಸ್ಕೋದ ಅಧ್ಯಯನವೊಂದು ಈ ಹಿಂದೆ ಹೇಳಿತ್ತು. ಮೂಲಸೌಕರ್ಯದಿಂದ ಹಿಡಿದು ಬೋಧನಾ ಸಿಬ್ಬಂದಿವರೆಗಿನ ಎಲ್ಲಾ ಹಂತಗಳಲ್ಲಿ ಕಂಡು ಬರುವ ಅಸಮರ್ಥತೆಯು ಮಕ್ಕಳ ಸಹಜ ಪ್ರತಿಭೆಯ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. 19 ಸಾವಿರ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿರುವ ಜಡತ್ವವನ್ನು ಹೋಗಲಾಡಿಸದೇ ಇದ್ದರೆ, ಬೋಧನಾ ಗುಣಮಟ್ಟ ಸುಧಾರಣೆ ಕಾಣುವುದು ಸಾಧ್ಯವಿಲ್ಲ.

ವಿವಿಧ ಹಂತಗಳಲ್ಲಿ ಶಿಕ್ಷಕರ ಕೊರತೆ ಎದುರಿಸುತ್ತಿರುವ ಜಗತ್ತಿನ 74 ದೇಶಗಳ ಪೈಕಿ ಭಾರತ ಮುಂಚೂಣಿಯಲ್ಲಿರುವುದು ಮುಂದುವರಿದೇ ಇದೆ. ಇದರಿಂದಾಗಿ ಶೈಕ್ಷಣಿಕ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗಿದೆ. ಭಾರಿ ಮೊತ್ತದ ಸಂಬಳ ನೀಡುವ ಮೂಲಕ ವಿದೇಶಗಳಲ್ಲಿದ್ದ ಸುಮಾರು 1 ಲಕ್ಷಕ್ಕೂ ಹೆಚ್ಚು ಪಿಹೆಚ್‌.ಡಿ ಪದವಿ ಹೊಂದಿರುವ ತನ್ನ ಶಿಕ್ಷಕರನ್ನು ಸ್ವದೇಶಕ್ಕೆ ಹಿಂದಿರುಗುವಂತೆ ಆಕರ್ಷಿಸುವಲ್ಲಿ ಚೀನಾ ಸಫಲವಾಗಿದೆ. ಉನ್ನತ ಅರ್ಹತೆ ಹೊಂದಿರುವ ಶಿಕ್ಷಕರಿಗೆ ಸೂಕ್ತ ಹುದ್ದೆಗಳು, ಭತ್ಯೆಗಳು ಮತ್ತು ತರಬೇತಿಯನ್ನು ಸರಿಯಾಗಿ ನೀಡುವ ಮೂಲಕ ಅವರನ್ನು ಉತ್ತೇಜಿಸುವ ಇಂತಹ ಅವಶ್ಯಕತೆ ನಮ್ಮಲ್ಲಿಯೂ ಇದೆ. ಜ್ಞಾನಾಧರಿತ ಕ್ರಿಯಾಶೀಲ ಸಮುದಾಯ ವ್ಯವಸ್ಥೆಯನ್ನು ಹೊಂದುವ ಕ್ರಿಯಾ ಯೋಜನೆಯನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದ್ದು, ಅದು ತಳಹಂತದಿಂದಲೇ ಪ್ರಾರಂಭವಾಗಬೇಕಿದೆ. ಉನ್ನತ ಶಿಕ್ಷಣಕ್ಕೆ ಗುಣಮಟ್ಟದ ಶಿಕ್ಷಣವೇ ರಾಜಮಾರ್ಗ. ಅಂತಹ ಗುಣಮಟ್ಟದ ಶಿಕ್ಷಣವೇ ದೇಶದ ಸರ್ವಾಂಗೀಣ ಪ್ರಗತಿಗೆ ನಿಜವಾದ ಶಕ್ತಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.