ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜನವರಿ ತಿಂಗಳ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆ(ಸಿಎಡಿ)ಯ ಮೇಲೆ ಚಿನ್ನದ ಆಮದು ಶೇ.9ರಷ್ಟು ಕುಸಿದು ಸುಮಾರು 1.74 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.
2018-19ರ ಇದೇ ಅವಧಿಯಲ್ಲಿ ಚಿನ್ನದ ಆಮದು 27 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಹಳದಿ ಲೋಹದ ಆಮದಿನ ಕುಸಿತವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜನವರಿ ತಿಂಗಳ ಅವಧಿಯಲ್ಲಿ ದೇಶದ ವ್ಯಾಪಾರ ಕೊರತೆಯನ್ನು 133.27 ಬಿಲಿಯನ್ ಡಾಲರ್‌ಗೆ ಇಳಿಸಿದೆ.
ಕಳೆದ ವರ್ಷದ ಜುಲೈ ತಿಂಗಳಿನಿಂದ ಚಿನ್ನದ ಆಮದು ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಆದಾಗಿಯೂ ಇದು ಕಳೆದ ವರ್ಷ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.
ಭಾರತವು ಚಿನ್ನದ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿದ್ದು, ಇದು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ಪೂರೈಸುತ್ತದೆ. ದೇಶವು ವಾರ್ಷಿಕವಾಗಿ 800-900 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ.
ವ್ಯಾಪಾರ ಕೊರತೆ ಮತ್ತು ಸಿಎಡಿ ಮೇಲೆ ಚಿನ್ನದ ಆಮದಿನ ಋಣಾತ್ಮಕ ಪರಿಣಾಮವನ್ನು ತಗ್ಗಿಸಲು, ಸರ್ಕಾರವು ಚಿನ್ನ ಮೇಲಿನ ಆಮದು ಸುಂಕವನ್ನು ಶೇ. 10 ರಿಂದ 12.5 ಕ್ಕೆ ಹೆಚ್ಚಿಸಿದೆ.