ETV Bharat / bharat

ನ್ಯೂ ಇಯರ್​ ಪಾರ್ಟಿ; ಗೋವಾ ಬೀಚ್​ಗೆ ಆಗಮಿಸುತ್ತಿದೆ ಪ್ರವಾಸಿಗರ ದಂಡು!

ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಪ್ರವಾಸಿಗರು ಗೋವಾ ಕಡಲ ತೀರಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕದಿಂದ ಮನೆಯಲ್ಲೇ ಇದ್ದವರು ಈಗ ರೆಕ್ಕೆ ಬಿಚ್ಚಿ ಹಾರಲು ಮುಂದಾಗಿದ್ದಾರೆ.

Goa beaches are full of indigenous tourists
ಗೋವಾ ಬೀಚ್​ಗೆ ಆಗಮಿಸುತ್ತಿದೆ ಪ್ರವಾಸಿಗ ದಂಡು!
author img

By

Published : Dec 31, 2020, 3:55 PM IST

ಪಣಜಿ : ಹೊಸ ವರ್ಷಕ್ಕೆ ಇನ್ನು ಕೆಲವೇ ಗಂಟೆ ಬಾಕಿ ಇದ್ದು ಈಗಲೇ ಗೋವಾದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕಾಣಿಸಿಕೊಂಡಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಪ್ರವಾಸಿಗರು ಇಲ್ಲಿಗೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರವಾಸೋದ್ಯಮ ಸಚಿವ ಮನೋಹರ್ ಅಜಗಾಂವಕರ್, ಎಲ್ಲಾ ರೀತಿಯ ಕೊರೊನಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಪ್ರವಾಸಿಗರು ಸಂಭ್ರಮಾಚರಣೆ ಮಾಡಲಿದ್ದಾರೆ. ಗೋವಾದಲ್ಲಿನ ವ್ಯವಹಾರಗಳಿಗೆ ಇದು ಸಹಾಯಕವಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ.

ಹೊಸ ವರ್ಷಾಚರಣೆಗೆ ಕ್ಷಣಗಣನೆ
ಹೊಸ ವರ್ಷಾಚರಣೆಗೆ ಕ್ಷಣಗಣನೆ

ಲಾಕ್ ಡೌನ್ ಮತ್ತು ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ನಮ್ಮ ಮನೆಗಳಲ್ಲಿಯೇ ಈವರೆಗೆ ಇದ್ದೆವು. ಆದರೆ, ಈಗ ಕೋವಿಡ್​ ಆತಂಕ ದೂರ ಆಗಿದ್ದರಿಂದ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಕುಟುಂಬದೊಂದಿಗೆ ಮೊದಲ ಬಾರಿಗೆ ಬಂದ ಪ್ರವಾಸಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ನಾನು ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರತಿವರ್ಷ ಗೋವಾಕ್ಕೆ ಭೇಟಿ ನೀಡುತ್ತೇನೆ. ವಿಶೇಷವಾಗಿ ಹೊಸ ವರ್ಷದ ಮುನ್ನಾದಿನದಂದು ಇಲ್ಲಿಗೆ ಬರಲು ನಾನು ಇಷ್ಟಪಡುತ್ತೇನೆ ಎಂದು ಅಗರ್ತಲಾದಿಂದ ಬಂದ ರಾಜೀವ್ ಎಂಬುವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.