ಹೈದರಾಬಾದ್: ವಿಶ್ವದಾದ್ಯಂತ ಕೊರೊನಾ ಸೋಂಕು 8,61,45,979ಕ್ಕೂ ಹೆಚ್ಚು ಜನರಿಗೆ ತಗುಲಿದ್ದು, 18,61,559ಕ್ಕೂ ಹೆಚ್ಚು ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೆ 6,11,05,194ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.
ಅಮೆರಿಕವು ಕೊರೊನಾ ಮಹಾಮಾರಿಯಿಂದ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದೆ. ಯುಎಸ್ನಲ್ಲಿ 2,13,53,051 ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 3,62,123 ಕ್ಕಿಂತ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ.
ಈ ಮಧ್ಯೆ ವುಹಾನ್ ನಗರದಲ್ಲಿ ಕೋವಿಡ್-19 ಕುರಿತು ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಂಡಕ್ಕೆ ಚೀನಾ ಪ್ರವೇಶ ನಿರಾಕರಿಸಿದೆ. ಇಬ್ಬರು ಸದಸ್ಯರು ಈಗಾಗಲೇ ಅಲ್ಲಿಗೆ ಹೊರಟಿದ್ದರು. ಇದರಲ್ಲಿ ಒಬ್ಬರು ಈಗ ಹಿಂದೆ ಸರಿದಿದ್ದಾರೆ. ಇದಕ್ಕೆ ವೀಸಾ ಅನುಮತಿಗಳ ಕೊರತೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಓದಿ:ನಿಲ್ಲದ ಕೋವಿಡ್ ಅಲೆ: 63 ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ ಪ್ರೋಗ್ರಾಂ ಮುಂದೂಡಿಕೆ
ಫೈಜರ್ ಮತ್ತು ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಆಸ್ಟ್ರೇಲಿಯಾ ಹತ್ತು ಮಿಲಿಯನ್ ಡೋಸ್‌ಗಳನ್ನು ಪಡೆದುಕೊಂಡಿದೆ. ಆಸ್ಟ್ರೇಲಿಯಾದಲ್ಲಿ ಮೊದಲು ಲಸಿಕೆಯನ್ನು ಮುಂಚೂಣಿ ಕಾರ್ಮಿಕರು ಮತ್ತು ವೃದ್ಧರಿಗೆ ಆದ್ಯತೆಯ ಮೇರೆಗೆ ನೀಡಲಾಗುತ್ತದೆ. COVID-19 ಲಸಿಕೆಯನ್ನು ಈಗ ತಿಂಗಳ ಕೊನೆಯಲ್ಲಿ ಬದಲಾಗಿ ಮಾರ್ಚ್ ಆರಂಭದಲ್ಲಿ ನೀಡಲಾಗುವುದು ಎಂದು ಆಸ್ಟ್ರೇಲಿಯಾದ ಆರೋಗ್ಯ ಸಚಿವರಾದ ಗ್ರೆಗ್ ಹಂಟ್ ಹೇಳಿದ್ದಾರೆ.