ನವದೆಹಲಿ: ವಿಶ್ವವನ್ನ ಕಾಡುತ್ತಿರುವ ಮಹಾಮಾರಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಸಾಗಿದೆ.
ಜಗತ್ತಿನಾದ್ಯಂತ 79.82 ಲಕ್ಷ ಜನ ಕೊರೊನಾ ಪೀಡಿತರಾಗಿದ್ದಾರೆ. ಕೋವಿಡ್ ದಾಳಿಯಿಂದಾಗಿ ಸುಮಾರು 4.35 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 41,03,984(41 ಲಕ್ಷ) ಜನ ಗುಣಮುಖರಾಗಿ ಸಹಜ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಕಾಯಿಲೆಯ ಮೂಲವಾದ ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮರುಕಳಿಸಿದೆ.
ಡ್ರ್ಯಾಗನ್ ರಾಜಧಾನಿ ಬೀಜಿಂಗ್ನಲ್ಲಿ 49 ಹೊಸ ಪಾಸಿಟಿವ್ ಕೇಸ್ಗಳು ಕಂಡು ಬಂದಿವೆ. ಚೀನಾದಲ್ಲಿ 83,181 ಪಾಸಿಟಿವ್ ಕೇಸ್ಗಳು ವರದಿಯಾಗಿದ್ದರೆ, 4634 ಜನ ಮರಣಹೊಂದಿದ್ದಾರೆ.