ETV Bharat / bharat

ಬ್ಯಾಲೆಟ್​ ಪೇಪರ್​ ಮೂಲಕ ನಡೆಯಲಿದೆ ಜೆಹೆಚ್​ಎಂಸಿ ಚುನಾವಣೆ

author img

By

Published : Oct 5, 2020, 8:12 PM IST

ಹೆಚ್ಚಿನ ಪಕ್ಷಗಳ ಅಭಿಪ್ರಾಯ ಪರಿಗಣಿಸಿ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಯನ್ನು ಬ್ಯಾಲೆಟ್​ ಪೇಪರ್​ ಮೂಲಕ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ..

GHMC elections will be held by ballot papers
ಬ್ಯಾಲೆಟ್​ ಪೇಪರ್​ ಮೂಲಕ ನಡೆಯಲಿದೆ ಜೆಹೆಚ್​ಎಂಸಿ ಚುನಾವಣೆ

ಹೈದಾರಾಬಾದ್​ : ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್ ಕಾರ್ಪೊರೇಶನ್ ( ಜಿಹೆಚ್​ಎಂಸಿ) ಚುನಾವಣೆಯನ್ನು ಬ್ಯಾಲೆಟ್​ ಪೇಪರ್​ ಮೂಲಕ ನಡೆಸಲು ತೆಲಂಗಾಣ ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ.

ಮಾನ್ಯತೆ ಪಡೆದ ಮತ್ತು ನೋಂದಾಯಿತ 50 ರಾಜಕೀಯ ಪಕ್ಷಗಳ ಪೈಕಿ, 26 ಪಕ್ಷಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿವೆ. ಅವುಗಳಲ್ಲಿ 13 ರಾಜಕೀಯ ಪಕ್ಷಗಳು ಚುನಾವಣೆಯನ್ನು ಬ್ಯಾಲೆಟ್​ ಪೇಪರ್​ ಮೂಲಕ ನಡೆಸಬೇಕು ಎಂದು ಹೇಳಿವೆ. ಮೂರು ಪಕ್ಷಗಳು ಇವಿಎಂ ಮೂಲಕ ನಡೆಸುವಂತೆ ಅಭಿಪ್ರಾಯ ವ್ಯಕ್ತಪಡಿಸಿವೆ.

ಹೆಚ್ಚಿನ ಪಕ್ಷಗಳು ಬ್ಯಾಲೆಟ್​ ಪೇಪರ್​ ಪರ ಒಲವು ತೋರಿರುವ ಹಿನ್ನೆಲೆ ಬ್ಯಾಲೆಟ್​ ಪೇಪರ್​ ಮೂಲಕ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಇತ್ತೀಚಿನ ಗ್ರಾಮ ಪಂಚಾಯತ್ ಚುನಾವಣೆಯ ಜೊತೆಗೆ, 2020ರಲ್ಲಿ ನಡೆದ ಪುರಸಭೆ, ಎಂಪಿಟಿಸಿ ಮತ್ತು ಝೆಡ್‌ಪಿಟಿಸಿ ಚುನಾವಣೆಗಳನ್ನು ಬ್ಯಾಲೆಟ್​ ಪೇಪರ್​ ಮೂಲಕವೇ ನಡೆಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಕಾರ್ಪೊರೇಶನ್ ಚುನಾವಣೆ ಜೊತೆಗೆ ಜೆಹೆಚ್​ಎಂಸಿ ಚುನಾವಣೆ ಬ್ಯಾಲೆಟ್​ ಪೇಪರ್​​ ಮೂಲಕ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.