ನವದೆಹಲಿ: ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಜರ್ಮನ್ ಚಾನ್ಸೆಲರ್ ಏಜೆಂಲ್ ಮರ್ಕೆಲ್ ಅವರು ಗುರುವಾರ ತಡರಾತ್ರಿ ದೆಹಲಿಗೆ ಬಂದಿಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ 5ನೇ ದ್ವೈವಾರ್ಷಿಕ ಅಂತರ್ ಸರ್ಕಾರಿ ಸಮಾಲೋಚನೆಯಲ್ಲಿ (ಐಜಿಸಿ) ಭಾಗವಹಿಸಲು ಭಾರತಕ್ಕೆ ಆಗಮಿಸಿದ್ದಾರೆ. ಫೆಡರಲ್ ಸರ್ಕಾರದ ಕೆಲ ಮಂತ್ರಿಗಳು ಮತ್ತು ರಾಜ್ಯ ಕಾರ್ಯದರ್ಶಿಗಳು ಮತ್ತು ಉನ್ನತ ಮಟ್ಟದ ವ್ಯಾಪಾರ ನಿಯೋಗ ಸಾಥ್ ನೀಡಲಿದೆ.
ಪ್ರಧಾನ ಮಂತ್ರಿಗಳ ಕಚೇರಿಯ ಜಿತೇಂದ್ರ ಸಿಂಗ್ ಅವರ ಮಾರ್ಕೆಲ್ ಮತ್ತು ಜರ್ಮನ್ ನಿಯೋಗವನ್ನು ಬರಮಾಡಿಕೊಂಡರು. ಇದೇ ವೇಳೆ ಮೋದಿ ಮತ್ತು ಮಾರ್ಕೆಲ್ ಅವರು ಸುಮಾರು 20 ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.
ಐಜಿಯಲ್ಲಿ ಮೋದಿ- ಮಾರ್ಕೆಲ್ ಅಧ್ಯಕ್ಷತೆ ವಹಿಸಲಿದ್ದು, ಉಭಯ ರಾಷ್ಟ್ರಗಳ ಸಚಿವರು ತಮ್ಮ ನಿರ್ವಹಣೆ ಕ್ಷೇತ್ರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಚರ್ಚಿತ ವಿಷಯಗಳ ವರದಿ ಮಾಡಿ ಸಮಾಲೋಚನೆಯ ಮುಂದಿಡಲಿದ್ದಾರೆ.