ಗಯಾ(ಬಿಹಾರ): ಶಿವ ಪರ್ವತದ ನಂದಿ ವಿಗ್ರಹವು ಭಕ್ತರು ನೀಡುವ ಹಾಲು ಮತ್ತು ನೀರನ್ನು ಕುಡಿಯುತ್ತಿದೆ ಎಂಬುದನ್ನ ಬಿಹಾರದ ಗಯಾದ ಜನ ಹೇಳಿಕೊಳ್ತಿದ್ದಾರೆ.
ಮಹಿಳೆಯೊಬ್ಬರು ನಂದಿಯು ಹಾಲನ್ನು ಕುಡಿಯುತ್ತಿದೆ ಎಂದು ಹೇಳಿಕೊಂಡ ನಂತರ ಇಲ್ಲಿನ ಸ್ಥಳೀಯರು ವಿಗ್ರಹಕ್ಕೆ ಹಾಲು-ನೀರನ್ನು ಅರ್ಪಿಸುತ್ತಿದ್ದಾರೆ. ಶ್ರಾವಣ ಮಾಸದ ಪವಿತ್ರ ತಿಂಗಳಿನಲ್ಲಿ ನಂದಿ ವಿಗ್ರಹವು ಹಾಲು ಹಾಗೂ ನೀರನ್ನು ಕುಡಿಯುತ್ತಿರುವುದು ಸತ್ಯ ಎಂದು ಸ್ಥಳೀಯರಾದ ಸುಮಿತ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ದೇವಾಲಯದ ಅರ್ಚಕರಾದ ಬ್ರಹ್ಮ ದೇವ್ ದಾಸ್, ನಂದಿ ವಿಗ್ರಹ ಈವರೆಗೂ ಒಂದು ಹನಿ ನೀರನ್ನೂ ಸೇವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಲಖನೌದ ದೇವಾಲಯವೊಂದರಲ್ಲಿ ಇದೇ ರೀತಿ ನಂದಿ ವಿಗ್ರಹವೊಂದು ನೀರು ಕುಡಿಯುತ್ತೆ ಅಂತಾ ಹೇಳಲಾಗಿತ್ತು. ಆದರೆ, ಅದನ್ನು ದೇವಾಲಯದ ಅರ್ಚಕರು ತಿರಸ್ಕರಿಸಿದ್ದರು.