ಛತ್ತೀಸಗಢ: ಹಸಿವು ನೀಗಿಸುವುದರ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತದಲ್ಲೇ ಇದೇ ಮೊದಲ ಬಾರಿಗೆ ಗಾರ್ಬೆಜ್ ಕೆಫೆ ಛತ್ತೀಸ್ಗಢದ ನಗರವೊಂದರಲ್ಲಿ ತೆರೆಯಲಾಗಿದೆ.
ಈ ಯೋಜನೆಯಡಿ, 1 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಪ್ರತಿಯಾಗಿ ಒಂದೊತ್ತಿನ ಊಟ, 500 ಗ್ರಾಂ/ ಅರ್ಧ ಕೆ.ಜಿ ತ್ಯಾಜ್ಯಕ್ಕೆ ಪ್ರತಿಯಾಗಿ ಒಂದೊತ್ತಿನ ತಿಂಡಿ ನೀಡಲಾಗುತ್ತದೆ. ನಗರದ ಮುಖ್ಯ ಬಸ್ ನಿಲ್ದಾಣದ ಬಳಿ ಈ ಯೋಜನೆ ಕಾರ್ಯಗತವಾಗಿದೆ.
ಈ ಕ್ರಿಯಾತ್ಮಕ ಯೋಜನೆ ಹಲವು ಜನರ ಹಸಿದ ಹೊಟ್ಟೆ ತುಂಬಿಸುವುದರ ಜೊತೆಗೆ, ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಬಹುದೆಂದು ನಗರದ ಪುರಸಭೆಯ ಬಜೆಟ್ ಮಂಡಿಸಿದ ಮೇಯರ್ ಅಜಯ್ ಟಿರ್ಕಿ ಹೇಳಿದ್ದಾರೆ.
ಗಾರ್ಬೆಜ್ ಕೆಫೆ ಯೋಜನೆ, ಸ್ವಚ್ಛ ಭಾರತ್ ಯೋಜನೆಯೊಂದಿಗೆ ಸಂಬಂಧ ಹೊಂದಿದ್ದು, ನಿರ್ಗತಿಕರಿಗೆ ಸಹಾಯಕಾರಿಯಾಗಿದೆ. ತ್ಯಾಜ್ಯದ ಪ್ರತಿಯಾಗಿ ಹಸಿದವರಿಗೆ ಆಹಾರ ಕೊಡುತ್ತಿದೆ. ಇನ್ನುಈ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ. ಈಗಾಗಲೇ 8 ಲಕ್ಷ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಾಜ್ಯದಲ್ಲಿ ಮೊದಲ ರಸ್ತೆಯನ್ನೂ ನಿರ್ಮಾಣ ಮಾಡಲಾಗಿದೆ.
ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆ ಅಡಿ ಅಂಬಿಕಾಪುರ ಮುನ್ಸಿಪಲ್ ಕಾರ್ಪೋರೇಷನ್ ಎರಡನೇ ಶುದ್ಧ ನಗರ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.