ಗುಂಟೂರು(ಆಂಧ್ರಪ್ರದೇಶ) : ಎಲ್ಲಿ ನೋಡಿದರೂ 100, 200, 300, 500 ಹಾಗೂ 2000 ರೂ. ಮುಖಬೆಲೆಯ ನೋಟುಗಳು. ನೋಟುಗಳ ನಡುವೆ ವಿರಾಜಮಾನನಾಗಿರೋ ವಿಘ್ನನಿವಾರಕ. ಇದು ಗುಂಟೂರಿನ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಸ್ಥಾಪಿತಗೊಂಡಿರುವ ವಿಶೇಷ ಚೌತಿ ಗಣೇಶ.
ದೇಗುಲದ ಸಮಿತಿಯು ಈ ಬಾರಿ ವಿಭಿನ್ನವಾಗಿ ಲಂಬೋದರನನ್ನು ಅಲಂಕರಿಸಿದ್ದಾರೆ. ಮೂಷಿಕ ವಾಹನ ಮಾತ್ರವಲ್ಲದೇ, ಆತನನ್ನು ಪ್ರತಿಷ್ಟಾಪಿಸಿರುವ ಮಂಟಪವನ್ನೂ ಕೂಡಾ ಸಂಪೂರ್ಣವಾಗಿ ನೋಟುಗಳಿಂದಲೇ ಅಲಂಕರಿಸಲಾಗಿದೆ. ಒಟ್ಟು ಬರೋಬ್ಬರಿ ಒಂದು ಕೋಟಿ 60 ಲಕ್ಷ ರೂ. ಮೌಲ್ಯದ ನೋಟುಗಳನ್ನು ಈ ಗಣೇಶನ ಅಲಂಕಾರಕ್ಕಾಗಿ ಬಳಸಲಾಗಿದೆ.
ಈ ವಕ್ರತುಂಡನನ್ನು ಇದೇ ಸೆಪ್ಟೆಂಬರ್ 6ರಂದು ಅಲಂಕರಿಸಲಾಗಿದ್ದು, ದೇವಸ್ಥಾನದ ಸಮಿತಿಯ ಒಟ್ಟು 102 ಮಂದಿ ಸೇರಿ ಈ ಅಲಂಕಾರ ಮಾಡಿರುವುದಾಗಿ ಸಮಿತಿಯ ಅಧ್ಯಕ್ಷ ತುಂಗುಂಟ್ಲಾ ನಾಗೇಶ್ವರಾವ್ ತಿಳಿಸಿದ್ದಾರೆ.
ನೋಟುಗಳಿಂದಲೇ ಅಲಂಕಾರಗೊಂಡಿರೋ ಈ ಲಕ್ಷ್ಮೀ ಗಣೇಶನನ್ನು ನೋಡೋದಿಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ.