ಮುಂಬೈ(ಮಹಾರಾಷ್ಟ್ರ): ಭಕ್ತರು ಗಣಪತಿಯನ್ನು ಮನೆಗೆ ಭಕ್ತಿ ಮತ್ತು ಉತ್ಸಾಹದಿಂದ ಸ್ವಾಗತಿಸುವ ಗಣೇಶ ಚತುರ್ಥಿಯ ದಿನ ಇಂದು. ಈ ದಿನದಂದು ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗಣರಾಜನಿಗೆ ಆರತಿ ನೆರವೇರಿಸಲಾಯಿತು.
ಗಣೇಶ ಚತುರ್ಥಿಯನ್ನು ವಿನಾಯಕ ಚೌತಿ ಎಂದೂ ಕರೆಯುತ್ತಾರೆ. ಇದು ಶುಭ ಹಿಂದೂಗಳ ಶ್ರೇಷ್ಠ ಹಬ್ಬವಾಗಿದ್ದು, ಇದನ್ನು ಪ್ರತಿವರ್ಷ 10 ದಿನಗಳವರೆಗೆ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಭದ್ರಾ ತಿಂಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಆಗಸ್ಟ್ ಮಧ್ಯದಿಂದ ಸೆಪ್ಟೆಂಬರ್ ವರೆಗೆ ಬರುತ್ತದೆ. ಇದು ಪ್ರೀತಿಯ ಆನೆ ತಲೆಯ ಗಣೇಶನ ಜನ್ಮದಿನವನ್ನು ಸೂಚಿಸುತ್ತದೆ.
ಗಣೇಶನನ್ನು ಸಂಪತ್ತು, ವಿಜ್ಞಾನ, ಜ್ಞಾನ, ಬುದ್ಧಿವಂತಿಕೆ ಮತ್ತು ಸಮೃದ್ಧಿಯ ದೇವರು ಎಂದು ಕರೆಯಲಾಗುತ್ತದೆ. ಮತ್ತು ಅದಕ್ಕಾಗಿಯೇ ಹೆಚ್ಚಿನ ಹಿಂದೂಗಳು ಅವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಯಾವುದೇ ಪ್ರಮುಖ ಕೆಲಸವನ್ನು ಪ್ರಾರಂಭಿಸುವ ಮೊದಲು ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಗಣೇಶನನ್ನು ಗಜಾನನ, ವಿನಾಯಕ, ವಿಘ್ನನಿವಾರಕ ಮುಂತಾದ 108 ಹೆಸರುಗಳಿಂದ ಕರೆಯಲಾಗುತ್ತದೆ.
ಈ ಹಬ್ಬವನ್ನು ಪ್ರಪಂಚದಾದ್ಯಂತ ಹಿಂದೂಗಳು ಬಹಳ ಭಕ್ತಿ ಮತ್ತು ಸಂತೋಷದಿಂದ ಈ ಹಬ್ಬವನ್ನ ಆಚರಿಸುತ್ತಾರೆ. ಇದು ಮಹಾರಾಷ್ಟ್ರ ರಾಜ್ಯದ ನಾಡ ಹಬ್ಬವೂ ಹೌದು. ಕೇವಲ ಮಹಾರಾಷ್ಟ್ರದಲ್ಲಿ ಅಷ್ಟೇ ಅಲ್ಲ, ಭಾರತದಲ್ಲಿ ಗುಜರಾತ್, ಗೋವಾ, ಮಧ್ಯಪ್ರದೇಶ, ಕರ್ನಾಟಕ, ಮತ್ತು ತೆಲಂಗಾಣ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಗಣೇಶ ಹಬ್ಬಕ್ಕೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾದ ಸ್ಥಾನವಿದೆ. ಕೇವಲ ಮನೆ ಮನೆಗಳಿಗೆ ಮಾತ್ರ ಸೀಮಿತವಾಗಿದ್ದ ಗಣೇಶ ಹಬ್ಬ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಸಾರ್ವಜನಿಕ ಹಬ್ಬವಾಯಿತು. ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಜನರನ್ನ ಸಂಘಟಿತಗೊಳಿಸಲು ವಿನಾಯಕ ಚತುರ್ಥಿ ಬಹಳ ಸಹಾಯ ಮಾಡಿದೆ.