ETV Bharat / bharat

ಶ್ರೀರಾಮ ಮಂದಿರ ನಿರ್ಮಾಣ: ವಿಎಚ್​ಪಿ ಮೂಲಕ ಕರ್ನಾಟಕದಲ್ಲಿ ಮನೆ - ಮನೆಗೆ ತೆರಳಿ ನಿಧಿ ಸಂಗ್ರಹ

author img

By

Published : Dec 22, 2020, 7:26 PM IST

ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ದೇವಾಲಯ ನಿರ್ಮಿಸಲು ಕರ್ನಾಟಕದಲ್ಲಿ ಮನೆ-ಮನೆಗೆ ತೆರಳಿ ಹಣ ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಲಿದೆ. ಆದಾಯ ತೆರಿಗೆ ಕಾಯ್ದೆಯ 80 ಜಿ ಅಡಿಯಲ್ಲಿ ದೇಣಿಗೆ ವಿನಾಯಿತಿ ನೀಡಲಾಗುತ್ತದೆ.

ಶ್ರೀರಾಮ ಮಂದಿರ ನಿರ್ಮಾಣ
ಶ್ರೀರಾಮ ಮಂದಿರ ನಿರ್ಮಾಣ

ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ದೇವಸ್ಥಾನವನ್ನು ನಿರ್ಮಿಸಲು, ವಿಎಚ್‌ಪಿ ಐದು ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರ ಮೂಲಕ ಮುಂದಿನ ವರ್ಷ ಜ.15 ರಿಂದ ಫೆ. 27 ರವರೆಗೆ ಕರ್ನಾಟಕದಲ್ಲಿ ಮನೆ ಮನೆಗೆ ತೆರಳಿ ಹಣ ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಲಿದೆ ಎಂದು ಸಂಘಟನೆಯ ಅಂತಾರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷ ಅಲೋಕ್ ಕುಮಾರ್ ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, "ನಾವು ಸ್ವಯಂಸೇವಕರನ್ನು ಒಳಗೊಂಡ ಒಂದು ಲಕ್ಷ ಗುಂಪನ್ನು ರಚಿಸಲಿದ್ದೇವೆ. ರಾಜ್ಯದ 27,500 ಗ್ರಾಮಗಳಿಗೆ ಹೋಗುತ್ತೇವೆ ಮತ್ತು 'ನಿಧಿ ಸಮರ್ಪನ್' (fund for temple) ಮೂಲಕ 90 ಲಕ್ಷ ಭಕ್ತರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದರು. "

ನಿಧಿ ಸಂಗ್ರಹಕ್ಕಾಗಿ ಯೋಜನೆಗಳನ್ನು ರೂಪಿಸಿರುವ ಕುಮಾರ್, ಹಣದ ಸಂಗ್ರಹಣೆಯ ಮೇಲ್ವಿಚಾರಣೆಗೆ ರಾಜ್ಯದಲ್ಲಿ ಶ್ರೀರಾಮ್ ಮಂದಿರ ನಿಧಿ ಸಮರ್ಪನ್ ಅಭಿಯಾನ್ ಎಂಬ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.

ಓದಿ:ಯುಕೆಯಲ್ಲಿ ಕೊರೊನಾ 2ನೇ ಅಲೆ ಹಿನ್ನೆಲೆ: ಕೆಐಎಲ್​ನಲ್ಲಿ ಆರ್​​​ಟಿಪಿಸಿಆರ್ ಸೌಲಭ್ಯ ಆರಂಭ

ಕುಮಾರ್ ಅವರ ಪ್ರಕಾರ, ಆರ್‌ಎಸ್‌ಎಸ್​ನ ಕಾರ್ಯಕಾರಿ ಎನ್. ತಿಪ್ಪೇಸ್ವಾಮಿ ಕರ್ನಾಟಕ ಸಮಿತಿಯ ಕಾರ್ಯದರ್ಶಿಯಾಗಲಿದ್ದಾರೆ. ಸಮಿತಿಗೆ ಮಾರ್ಗದರ್ಶನ ನೀಡಲು ಸಂತರ ಸಮಿತಿ ಇರುತ್ತದೆ. 10, 100 ರೂ. 1,000 ರೂ. ಟೋಕನ್ ಮೂಲಕ ಹಣವನ್ನು ಸಂಗ್ರಹಿಸಲಾಗುವುದು ಎಂದು ಕುಮಾರ್ ಹೇಳಿದರು.

2,000 ರೂ.ಗಿಂತ ಹೆಚ್ಚಿನ ಹಣವನ್ನು ದಾನ ಮಾಡುವವರಿಗೆ ರಶೀದಿ ಇರುತ್ತದೆ. ಈ ದೇಣಿಗೆಗಳನ್ನು ಆದಾಯ ತೆರಿಗೆ ಕಾಯ್ದೆಯ 80 ಜಿ ಅಡಿಯಲ್ಲಿ ವಿನಾಯಿತಿ ನೀಡಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.