ETV Bharat / bharat

ಗಡಿ ಘರ್ಷಣೆ: ಚೀನಾದ ಕಮಾಂಡಿಂಗ್ ಆಫೀಸರ್ ಸಾವು, ಭಾರತೀಯ ಯೋಧರು ಗಂಭೀರ - india china border news live

ಲೈನ್​ ಆಫ್​ ಆಕ್ಟುವಲ್ ಕಂಟ್ರೋಲ್​ನಲ್ಲಿ ಚೀನಾ-ಭಾರತ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಗಾಯಗೊಂಡಿದ್ದ ನಾಲ್ವರು ಯೋಧರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಘರ್ಷಣೆಯಲ್ಲಿ ಚೀನಾದ ಕಮಾಂಡಿಂಗ್​ ಆಫೀಸರ್ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

china conflict
ಚೀನಾ ಸಂಘರ್ಷ
author img

By

Published : Jun 17, 2020, 11:19 AM IST

ನವದೆಹಲಿ: ಭಾರತ ಹಾಗೂ ಚೀನಾ ನಡುವೆ ನಡೆದ ಘರ್ಷಣೆಯಲ್ಲಿದ್ದ ಇನ್ನೂ ನಾಲ್ವರು ಭಾರತೀಯ ಸೈನಿಕರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸೋಮವಾರ ಸಂಜೆ ಪೂರ್ವ ಲಡಾಖ್​ನ ಗಾಲ್ವನ್​ ಕಣಿವೆಯಲ್ಲಿ ಘರ್ಷಣೆ ನಡೆದಿದ್ದು, ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ದೃಢಪಡಿಸಿತ್ತು. ಇದೇ ವೇಳೆ ಚೀನಾದ ಕಮಾಂಡಿಂಗ್​ ಆಫೀಸರ್ ಸೇರಿ 43 ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗ ಬಂದಿರುವ ಮಾಹಿತಿಯಂತೆ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ ಗಾಯಗೊಂಡಿದ್ದ ನಾಲ್ವರು ಭಾರತೀಯರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘರ್ಷಣೆಯನ್ನು ಚೀನಾ ಒಪ್ಪಿಕೊಂಡಿದೆಯಾದರೂ, ಸಾವು- ನೋವುಗಳ ಬಗ್ಗೆ ನಿಖರವಾದ ಮಾಹಿತಿ ನೀಡಿಲ್ಲ.

ಇದಕ್ಕೂ ಮೊದಲು ಪ್ರಧಾನಿ ಮೋದಿ ರಾತ್ರಿ ಕೇಂದ್ರ ಮಂತ್ರಿಗಳೊಡನೆ ಲಡಾಖ್​ ಸಂಘರ್ಷದ ಕುರಿತು ಮಾತುಕತೆ ನಡೆಸಿದ್ದರು. ಇದರ ಜೊತೆಗೆ ಸಭೆಯಲ್ಲಿ ಸೇನಾ ಮುಖ್ಯಸ್ಥರು ಕೂಡಾ ಭಾಗಿಯಾಗಿದ್ದರು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.