ETV Bharat / bharat

ಮಿನಿ ಟ್ರಕ್ ಪಲ್ಟಿ: ನಾಲ್ವರ ಸಾವು,15 ಜನರ ಸ್ಥಿತಿ ಗಂಭೀರ - ಸಿಂಗ್ರೌಲಿಯಲ್ಲಿ ಟ್ರಕ್ ಪಲ್ಟಿಯಾಗಿ ನಾಲ್ವರು ಸಾವು

ಸಮಾರಂಭಕ್ಕೆ ಹೋಗಿ ಹಿಂದಿರುಗುವಾಗ ಟ್ರಕ್ ಪಲ್ಟಿಯಾಗಿ ನಾಲ್ವರು ಮೃತಪಟ್ಟಿದ್ದು, 15 ಜನರಿಗೆ ಗಾಯಗಳಾಗಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.

MP
ಸ್ಥಿತಿ ಗಂಭೀರ
author img

By

Published : Nov 7, 2020, 1:58 PM IST

ಸಿಂಗ್ರೌಲಿ (ಮಧ್ಯಪ್ರದೇಶ): ಮಿನಿ ಟ್ರಕ್ ಪಲ್ಟಿಯಾಗಿ ನಾಲ್ವರು ದಾರುಣ ಸಾವನ್ನಪ್ಪಿದ್ದು, 15 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಭಲೈ ತೋಲಾ ಗ್ರಾಮದಲ್ಲಿ ನಡೆದಿದೆ. ಮೃತರೆಲ್ಲರೂ ಬರೇಲಿಯ ಹಳೆ ನಗರದ ನಿವಾಸಿಗಳೆಂದು ತಿಳಿದು ಬಂದಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ 10 ಮಂದಿ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಗೆ ಜಿಲ್ಲಾಧಿಕಾರಿ ರಾಜೀವ್ ರಂಜನ್ ಮೀನಾ, ಎಸ್​ಪಿ ವೀರೇಂದ್ರ ಕುಮಾರ್ ಸಿಂಗ್ ಮತ್ತು ಶಾಸಕ ಸುಭಾಷ್ ರಾಮ್ ಚರಿತ್ ವರ್ಮಾ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.