ತಿರುವನಂತಪುರ: ಕೇರಳದ ರಣಜಿ ಮಾಜಿ ಕ್ರಿಕೆಟ್ ಆಟಗಾರ ಜಯಮೋಹನ್ ತಂಪಿ (64) ಮನಕೋಡ್ ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಜಯಮೋಹನ್ ತಂಪಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಘಟನೆ ಸಂಬಂಧ ಜಯಮೋಹನ್ ತಂಪಿ ಅವರ ಮಗ ಅಶ್ವಿನ್ ನನ್ನು ಬಂಧಿಸಿದ್ದಾರೆ.
ಮಗ ಅಶ್ವಿನ್ ಜಯಮೋಹನ್ ತಂಪಿ ಅವರನ್ನು ತಳ್ಳಿದಾಗ ಅವರ ಹಣೆಗೆ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಅಶ್ವಿನ್ ಮನೆಯ ನೆರೆಹೊರೆಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.
ನಿನ್ನೆ ಬೆಳಗ್ಗೆ ಅಶ್ವಿನ್ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಬಾಗಿಲು ತೆರೆದು ನೋಡಿದಾಗ ರೂಮಿನ ನೆಲದ ಮೇಲೆ ಜಯಮೋಹನ್ ತಂಪಿ ಶವ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.