ಕೋಲ್ಕತ್ತಾ : ಬಿಜೆಪಿಗೆ ಸೇರ್ಪಡೆಯಾದ ಒಂದು ದಿನದ ಬಳಿಕ ಭಾರತದ ಮಾಜಿ ಫುಟ್ಬಾಲ್ ಆಟಗಾರ ಮೆಹ್ತಾಬ್ ಹೊಸೈನ್ ಅವರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಘೋಷಿಸಿದ್ದಾರೆ.
ಕೋಲ್ಕತ್ತಾ ಮೈದಾನದಲ್ಲಿ 'ಮಿಡ್‌ಫೀಲ್ಡ್ ಜನರಲ್' ಎಂದು ಪ್ರಸಿದ್ಧಿಯಾಗಿರುವ ಹೊಸೈನ್, ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಹಠಾತ್ ನಡೆಯಿಂದಾಗಿ ಕುಟುಂಬಸ್ಥರು ಮತ್ತು ಹಿತೈಷಿಗಳಿಗೆ ನೋವಾಗಿದೆ. ಅವರ ಭಾವನೆಗಳಿಗೆ ಧಕ್ಕೆ ಆಗಿದ್ದರಿಂದ ರಾಜಕೀಯ ತೊರೆಯುವುದು ನನ್ನ ವೈಯಕ್ತಿಕ ನಿರ್ಧಾರ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳ ಫುಟ್ಬಾಲ್ ತಂಡದ ಮಾಜಿ ನಾಯಕರಾಗಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು ಮಂಗಳವಾರ ಮುರಳೀಧರ್ ಸೇನ್ ಲೇನ್ ಕಚೇರಿಯಲ್ಲಿ "ಭಾರತ್ ಮಾತಾ ಕಿ ಜೈ" ಎಂಬ ಘೋಷಣೆ ನಡುವೆ ಬಿಜೆಪಿ ಧ್ವಜ ಹಸ್ತಾಂತರಿಸಿದ್ದರು.
'ನಾನು ಇಂದಿನಿಂದ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರುವುದಿಲ್ಲ. ನನ್ನ ಈ ನಿರ್ಧಾರಕ್ಕಾಗಿ ನನ್ನ ಎಲ್ಲ ಹಿತೈಷಿಗಳಿಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೊಸೈನ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳಲು ಯಾರೂ ನನಗೆ ಒತ್ತಾಯಿಸಿಲ್ಲ. ಇದು ರಾಜಕೀಯದಿಂದ ದೂರವಿರಲು ನನ್ನ ವೈಯಕ್ತಿಕ ನಿರ್ಧಾರ ಎಂದರು.
ಭಾರತಕ್ಕಾಗಿ 30 ಪಂದ್ಯಗಳನ್ನು ಆಡಿ ಎರಡು ಗೋಲುಗಳನ್ನು ಗಳಿಸಿರುವ ಹೊಸೈನ್ ಅವರು ಹೆಚ್ಚು ಜನರನ್ನು ತಲುಪಲು ಬಯಸಿದ್ದರಿಂದ ರಾಜಕೀಯಕ್ಕೆ ಸೇರುತ್ತಿದ್ದೇನೆ ಎಂದು ಪಕ್ಷ ಸೇರ್ಪಡೆ ವೇಳೆ ಹೇಳಿದ್ದರು.
"ಈ ಪ್ರಯತ್ನದ ಸಮಯದಲ್ಲಿ ನಾನು ಜನರೊಂದಿಗೆ ಇರಬೇಕೆಂದು ಬಯಸಿದ್ದೆ. ಆ ಅಸಹಾಯಕ ಮುಖಗಳು ನನ್ನ ನಿದ್ರೆಯನ್ನು ಕಿತ್ತುಕೊಂಡಿವೆ. ಅದಕ್ಕಾಗಿಯೇ ನಾನು ಏಕಾಏಕಿ ರಾಜಕೀಯಕ್ಕೆ ಬಂದೆ. ಆದರೆ, ನಾನು ರಾಜಕಾರಣಿಯಾಗಿ ಸೇವೆ ಸಲ್ಲಿಸಲು ಬಯಸುವ ಜನರು ನಾನು ರಾಜಕೀಯಕ್ಕೆ ಸೇರಬಾರದು ಎಂದು ಹೇಳಿದರು. ಅವರು ನನ್ನನ್ನು ರಾಜಕಾರಣಿಯಾಗಿ ನೋಡಲು ಬಯಸುವುದಿಲ್ಲ ಎಂದು ಹೂಸೈನ್ ಹೇಳಿದರು.