ETV Bharat / bharat

ಚುನಾವಣೆ ಮುನ್ನ ಹಾಗೂ ಫಲಿತಾಂಶದ ಬಳಿಕ ಟ್ರಂಪ್​ ತಂತ್ರಗಾರಿಕೆ

ನವೆಂಬರ್​ 2020ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆ ಇಡೀ ದೇಶದ ಚುನಾವಣಾ ಇತಿಹಾಸದಲ್ಲೇ ಅತ್ಯಧಿಕ ಮತದಾನ ದಾಖಲಾಗಿದೆ. ಕೆಲವು ರಾಜ್ಯಗಳಲ್ಲಿ ಡೆಮಾಕ್ರಾಟ್‌ಗಳ ಪರವಾಗಿ ಮತದಾರರು ಮತ ಹಾಕಿದ್ದಾರೆ ಎಂಬುದು ತಿಳಿಯುತ್ತಿದ್ದಂತೆಯೇ ಟ್ರಂಪ್ ವಿವಿಧ ಆರೋಪಗಳನ್ನು ಮಾಡಲು ಮುಂದಾಗಿದ್ದರು. ಅಷ್ಟೇ ಅಲ್ಲದೆ ಅಂತಿಮವಾಗಿ ಚುನಾವಣಾ ಫಲಿತಾಂಶಕ್ಕೆ ಅಂಕಿತ ಹಾಕುವ ಸಮಯದಲ್ಲಿ ತನ್ನ ದುಷ್ಟ ಸಂಚನ್ನೂ ರೂಪಿಸಿದ್ದರು. ಕ್ಯಾಪಿಟಲ್ ಹಿಲ್‌ಗೆ ಜನರನ್ನು ಕಳುಹಿಸಿ, ಉಪಾಧ್ಯಕ್ಷ ಮೈಕ್‌ ಪೆನ್ಸ್ ನಡೆಸುತ್ತಿದ್ದ ಚುನಾವಣಾ ಅಂತಿಮ ಪ್ರಕ್ರಿಯೆಯನ್ನು ತಡೆಯಲು ಪ್ರಯತ್ನಿಸಿದರು.

ಟ್ರಂಪ್ ಭಯೋತ್ಪಾದನ ದಾಳಿ
Former American President Donald Trump terrorist attack on congress
author img

By

Published : Jan 10, 2021, 2:59 PM IST

ಕಣ್ಮರೆಯಾಗುತ್ತದೆ... ಒಂದು ದಿನ... ಜಾದೂ ಹಾಗೆ ಕಣ್ಮರೆಯಾಗುತ್ತದೆ ಎಂದು ಕಳೆದ ಫೆಬ್ರವರಿಯಲ್ಲಿ ಡೊನಾಲ್ಡ್ ಟ್ರಂಪ್‌ ಹೇಳಿದ್ದರು. ಸಾಂಕ್ರಾಮಿಕ ರೋಗವನ್ನು ಒಂದು ನೆಪವಾಗಿಟ್ಟುಕೊಂಡು ಜನರು ಸುರಕ್ಷಿತವಾಗಿ ಮತ ಹಾಕಲು ಬರಬಹುದು ಎಂದು ಭಾವಿಸುವವರೆಗೂ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡುವ ಸಂಚನ್ನು ರೂಪಿಸಲು ಪ್ರಯತ್ನಿಸಿದ್ದರು. ಅಂಚೆ ಮತ ಪತ್ರವನ್ನು ಪರಿಚಯಿಸಿದ ಕ್ರಮದ ವಿರುದ್ಧವೂ ಅವರು ಪ್ರಚಾರ ಮಾಡಿದ್ದರು. ತನ್ನ ಪರವಾಗಿ ಮತ ಹಾಕುವುದನ್ನು ತಪ್ಪಿಸುವುದಕ್ಕೆಂದೆ ಈ ವಿಧಾನವನ್ನು ಪರಿಚಯಿಸಲಾಗಿದೆ ಎಂದು ಅವರು ಹೇಳುತ್ತಿದ್ದರು.

2020 ನವೆಂಬರ್‌ನಲ್ಲಿ ನಡೆಸಿದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆ ಇಡೀ ದೇಶದ ಚುನಾವಣಾ ಇತಿಹಾಸದಲ್ಲೇ ಅತ್ಯಧಿಕ ಮತದಾನ ದಾಖಲಾಗಿದೆ. ಪ್ರಮುಖ ರಾಜ್ಯಗಳಲ್ಲಿ ಡೆಮಾಕ್ರಾಟ್‌ಗಳ ಪರವಾಗಿ ಮತದಾರರು ಮತ ಹಾಕಿದ್ದಾರೆ ಎಂಬುದು ತಿಳಿಯುತ್ತಿದ್ದಂತೆಯೇ ಟ್ರಂಪ್ ತನ್ನ ನಾಲಿಗೆ ಹರಿಬಿಡಲು ಆರಂಭಿಸಿದ್ದರು. ಅಧಿಕಾರವನ್ನು ಸರಾಗವಾಗಿ ವರ್ಗಾವಣೆ ಮಾಡುವುದನ್ನು ತಡೆಯುವ ಹಲವು ಪ್ರಯತ್ನವನ್ನು ಟ್ರಂಪ್‌ ಮಾಡಿದ್ದರು. ಅಮೆರಿಕದ ಉಭಯ ಸದನಗಳು ಅಂತಿಮವಾಗಿ ಚುನಾವಣಾ ಫಲಿತಾಂಶಕ್ಕೆ ಅಂಕಿತ ಹಾಕುವ ಸಮಯದಲ್ಲಿ ತನ್ನ ದುಷ್ಟ ಸಂಚನ್ನೂ ರೂಪಿಸಿದ್ದರು. ಕ್ಯಾಪಿಟಲ್ ಹಿಲ್‌ಗೆ ಜನರನ್ನು ಕಳುಹಿಸಿ, ಉಪಾಧ್ಯಕ್ಷ ಮೈಕ್‌ ಪೆನ್ಸ್ ನಡೆಸುತ್ತಿದ್ದ ಚುನಾವಣಾ ಅಂತಿಮ ಪ್ರಕ್ರಿಯೆಯನ್ನು ತಡೆಯಲು ಪ್ರಯತ್ನಿಸಿದರು.

ಪ್ರಜಾಪ್ರಭುತ್ವದ ದೇಗುಲ ಎಂದೆ ಕರೆಯಲಾದ ಕಟ್ಟಡಕ್ಕೆ ಸಾವಿರಾರು ಜನರು ನುಗ್ಗಿದಾಗ ತಮ್ಮ ಜೀವ ಉಳಿಸಿಕೊಳ್ಳಲು ಗೌರವಯುತ ಸದನದ ಸದಸ್ಯರು ಅಡಗಿ ಕುಳಿತ್ತಿದ್ದರು. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ಕು ಜನರು ಜೀವ ತೆತ್ತಿದ್ದಾರೆ. ಟ್ರಂಪ್‌ ತನ್ನ ಬೆಂಬಲಿಗರ ಮಧ್ಯೆ ಮೂಡಿಸಿದ ದ್ವೇಷವನ್ನು ಈ ಇಡೀ ಘಟನೆ ಸಾಬೀತುಪಡಿಸುತ್ತದೆ. ಅಮೆರಿಕದ ಮೂಲಭೂತ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ಟ್ರಂಪ್‌ ನಡೆಸಿದ ಭಯೋತ್ಪಾದನಾ ದಾಳಿ ಇದಾಗಿತ್ತು. ಬಲಪಂಥೀಯ ದಾಳಿಕೋರರ ಜನಾಂಗೀಯ ಮನಸ್ಥಿತಿ ಇದಾಗಿತ್ತು. ಈ ಮೂಲಕ ತನ್ನ ಸರ್ವಾಧಿಕಾರಿತ್ವವನ್ನು ಹೊರ ಜಗತ್ತಿಗೆ ತಿಳಿಸುವ ಪ್ರಯತ್ನವೂ ಇದಾಗಿತ್ತು. ತೋಳ್ಬಲ ಪ್ರದರ್ಶಿಸಿ ಶ್ವೇತಭವನವನ್ನು ವಶಪಡಿಸಿಕೊಳ್ಳುವ ಅವರ ಪ್ರಯತ್ನದಲ್ಲಿ ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವವನ್ನು ಅಪಹಾಸ್ಯಕ್ಕೀಡು ಮಾಡಿದ್ದಾರೆ.

ಚುನಾವಣೆಯ ಅಂತಿಮ ಫಲಿತಾಂಶವನ್ನು ರಿಪಬ್ಲಿಕನ್ನರು ಒಪ್ಪಿ, ಕ್ಯಾಟಿಪಲ್ ಹಿಲ್‌ ಅನ್ನು ವಶಪಡಿಸಿಕೊಳ್ಳುವ ಟ್ರಂಪ್‌ ಪ್ರಯತ್ನಕ್ಕೆ ನಮ್ಮ ಬೆಂಬಲವಿಲ್ಲ ಎಂದು ರಿಪಬ್ಲಿಕನ್ನರು ಸ್ಪಷ್ಟಪಡಿಸಿದ ನಂತರವೆ ಟ್ರಂಪ್‌ ತಣ್ಣಗಾಗಿ, ಅಧಿಕಾರವನ್ನು ಸರಾಗವಾಗಿ ಹಸ್ತಾಂತರಿಸಲು ನಿರ್ಧರಿಸಿದರು. ಒಂದು ಕ್ಷಣವೂ ಅಧ್ಯಕ್ಷೀಯ ಸ್ಥಾನದಲ್ಲಿ ಇರಲು ಟ್ರಂಪ್‌ ಹಕ್ಕು ಹೊಂದಿಲ್ಲ. ರಾಜಕೀಯ ಪಕ್ಷಗಳು ಪರಸ್ಪರ ದ್ವೇಷವನ್ನು ಹೊಂದಿದ್ದರೆ ಪ್ರಜಾಪ್ರಭುತ್ವವನ್ನು ನಿಷ್ಕ್ರಿಯವಾಗುತ್ತದೆ. ಅರಾಜಕತೆ ಉಂಟಾಗುತ್ತದೆ ಎಂದು 225 ವರ್ಷಗಳ ಹಿಂದೆಯೇ ಜಾರ್ಜ್‌ ವಾಷಿಂಗ್ಟನ್ ಹೇಳಿದ್ದರು. ಸ್ವಾರ್ಥ ನಾಯಕರು ಇಂಥ ಸಂದರ್ಭದಲ್ಲಿ ಮುಂದೆ ಬಂದು ಸನ್ನಿವೇಶವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ ಎಂದೂ ಅವರು ಎಚ್ಚರಿಕೆ ನೀಡಿದ್ದರು.

ಸೂಪರ್ ಪವರ್ ಆಗಿ ತನ್ನ ಹೆಮ್ಮೆ ಮತ್ತು ಸಮಾನತೆ ಮತ್ತು ಸ್ವಾಯತ್ತತೆಯನ್ನು ನೀಡುವ ತನ್ನ ಸಂವಿಧಾನದ ಹೆಚ್ಚುಗಾರಿಕೆಯ ಹೊರತಾಗಿಯೂ, ಸಮಾಜದಲ್ಲಿ ಒಡಮೂಡಿರುವ ಸಾಮಾಜಿಕ ಅಸಮಾನತೆಯಿಂದಾಗಿ ಅಮೆರಿಕದಲ್ಲಿ ಅಂತರಿಕವಾಗಿ ಅಸಮಾಧಾನ ಹೆಚ್ಚುತ್ತಿದೆ. ಕಪ್ಪು ವರ್ಣೀಯ ಬರಾಕ್ ಒಬಾಮ ಅವರ ಎರಡು ಅವಧಿಯಲ್ಲಿನ ಅಧ್ಯಕ್ಷೀಯ ಅವಧಿಯ ನಂತರ, ಜನರ ಜನಾಂಗೀಯ ಭಾವನೆಗಳನ್ನು ಉದ್ರೇಕಿಸಿ ದ್ವೇಷ ಭಾಷಣದ ಮೂಲಕ ಕಳೆದ ಚುನಾವಣೆಯನ್ನು ಟ್ರಂಪ್‌ ಗೆದ್ದಿದ್ದರು. ಹೀಗಾಗಿ, ಜಾರ್ಜ್ ವಾಷಿಂಗ್ಟನ್ ಅವರ ಮಾತನ್ನು ಟ್ರಂಪ್ ಸಾಬೀತುಪಡಿಸಿದಂತಾಗಿದೆ. ಟ್ರಂಪ್ ಗೆದ್ದ ನಂತರದಲ್ಲಿ ಎಕಾನಮಿಸ್ಟ್ ನಡೆಸಿದ ನಾಲ್ಕು ಸಮೀಕ್ಷೆಯಲ್ಲಿ ಟ್ರಂಪ್ ಗೆಲುವು ಹತ್ತು ಜಾಗತಿಕ ಅಪಾಯಗಳಲ್ಲಿ ಒಂದು ಎಂದು ತಿಳಿದುಬಂದಿದೆ.

ಅಮೆರಿಕ ಫರ್ಸ್ಟ್ ಎಂಬ ಘೋಷಣೆಯನ್ನು ಬಳಸಿ ಅಧಿಕಾರಕ್ಕೆ ಬಂದ ಟ್ರಂಪ್‌, ಎಲ್ಲಾ ವ್ಯವಸ್ಥೆಯನ್ನೂ ಹಾಳು ಮಾಡಿದರು ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯತ್ಯಯವನ್ನು ಉಂಟು ಮಾಡಿದರು. ಅವರ ಎಲ್ಲಾ ಇತರ ಕ್ರಮಗಳಿಗೆ ಮುಕುಟದಂತೆ ಕ್ಯಾಪಿಟಲ್ ಹಿಲ್ ದಾಳಿಯೂ ನಡೆಯಿತು.

ನಿಜವಾದ ಹೋರಾಟ ಈಗಷ್ಟೇ ಆರಂಭವಾಗಿದೆ ಎಂದು ಹೇಳುವ ಮೂಲಕ ಟ್ರಂಪ್‌, 2024ರ ಚುನಾವಣೆಗೆ ಸಿದ್ಧವಾಗುತ್ತಿದ್ದಾರೆ. ಅಮೆರಿಕದ ಹಿತಾಸಕ್ತಿಯ ಪ್ರಕಾರ, ಟ್ರಂಪ್‌ರನ್ನು ಕೇವಲ ಕಚೇರಿಯಿಂದ ತಕ್ಷಣ ಹೊರಹಾಕುವುದಷ್ಟೇ ಅಲ್ಲ, ಭವಿಷ್ಯದ ಚುನಾವಣೆಯಲ್ಲಿ ಭಾಗವಹಿಸುವುದನ್ನೂ ನಿರ್ಬಂಧಿಸಬೇಕು. ಅಧ್ಯಕ್ಷೀಯ ಹುದ್ದೆಯನ್ನು ಗಳಿಸುವುದರ ಜೊತೆಗೆ ಡೆಮಾಕ್ರಾಟ್‌ಗಳು ಸಂಸತ್ತಿನ ಎರಡೂ ಸದನಗಳ ಮೇಲೂ ಮೇಲುಗೈ ಸಾಧಿಸಿದ್ದಾರೆ. ಅಮೆರಿಕದ ಸಮಾಜದಲ್ಲಿ ಬೇರು ಬಿಟ್ಟಿರುವ ಜನಾಂಗೀಯತೆಯನ್ನು ತಕ್ಷಣವೇ ನಿವಾರಿಸುವುದು ಅವರ ಮೊದಲ ಕೆಲಸವಾಗಬೇಕಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.