ETV Bharat / bharat

ದೇವಾಲಯದ ಪ್ರಚಾರಕ್ಕೆ ಹಾವಿನೊಂದಿಗೆ ಆಟ.. ದೇವ ಮಹಿಳೆ ಕಥೆ ಏನಾಯ್ತು ಗೊತ್ತಾ?

ಜೀವಂತ ಹಾವನ್ನ ಪೂಜಿಸಿ ಕೊರಳಿಗೆ ಸುತ್ತಿಕೊಂಡು ಪೋಸ್​ ನೀಡಿದ್ದ ಸ್ವಯಂ ಘೋಷಿತ ದೇವ ಮಹಿಳೆಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

author img

By

Published : Dec 22, 2019, 8:00 PM IST

ಜೀವಂತ ಹಾವನ್ನ ಪೂಜಿಸಿದ ದೇವ ಮಹಿಳೆ ಬಂಧನ, Forest Department arrest God Woman kamala
ಜೀವಂತ ಹಾವನ್ನ ಪೂಜಿಸಿದ ದೇವ ಮಹಿಳೆ ಬಂಧನ

ಕಾಂಚಿಪುರಂ(ತಮಿಳುನಾಡು): 2 ವರ್ಷದ ಹಿಂದೆ ಹಾವನ್ನ ಕೊರಳಿಗೆ ಹಾಕಿಕೊಂಡು ಪವಾಡ ಎಂಬುವರೀತಿ ಬಿಂಬಿಸಿದ್ದ ದೇವ ಮಹಿಳೆಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಜೀವಂತ ಹಾವನ್ನ ಪೂಜಿಸಿದ ದೇವ ಮಹಿಳೆ ಬಂಧನ

ಕಾಂಚೀಪುರಂ ಜಿಲ್ಲೆಯ ವಲಾಜಾಬಾದ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಉತ್ತರ ಭದ್ರಕಾಳಿ ಅಮ್ಮನ್ ದೇವಾಲಯ ನಿರ್ಮಾಣ ಸಮಯದಲ್ಲಿ 2018 ಫೆಬ್ರವರಿ 2 ರಂದು ದೇವ ಮಹಿಳೆ ಕಮಲಾ ಹಾವುಗಳನ್ನ ಪೂಜಿಸಿ ಕೊರಳಿಗೆ ಸುತ್ತಿಕೊಂಡು ದೇವರ ಮಹಿಮೆ ಎಂಬ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದರು.

ಕಮಲಾ ಹಾವನ್ನ ಕೊರಳಿಗೆ ಸುತ್ತಿಕೊಂಡಿರುವ ವಿಡೀಯೋ ಇತ್ತೀಚೆಗೆ ಜಾಲತಾಣದಲ್ಲಿ ಫುಲ್ ವೈರಲ್​ ಆಗಿತ್ತು. ಇದನ್ನ ಗಮನಿಸಿದ ಕಾಂಚಿಪುರಂ ಜಿಲ್ಲಾ ಅರಣ್ಯ ಅಧಿಕಾರಿಗಳು ಆಕೆಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಹೊಸದಾಗಿ ನಿರ್ಮಿಸಿದ್ದ ದೇವಾಲಯದ ಪ್ರಚಾರಕ್ಕಾಗಿ ಹಾವುಗಳನ್ನ ಬಾಡಿಗೆಗೆ ತೆಗೆದುಕೊಂಡು ಬಂದು ಪೂಜೆ ಮಾಡಿ, ಈ ರೀತಿ ಮಾಡಲಾಗಿತ್ತು ಎಂದು ದೇವ ಮಹಿಳೆ ಕಮಲಾ ವಿಚಾರಣೆ ವೇಳೆ ತಿಳಿಸಿದ್ದಾಳೆ. ಜಿಲ್ಲಾ ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಆಕೆಯನ್ನ ಬಂಧಿಸಲಾಗಿದೆ. ಘಟನೆ ನಡೆದು ವರ್ಷಗಳೆ ಕಳೆದಿದ್ದು, ಈಗ ದೇವ ಮಹಿಳೆಯನ್ನ ಬಂಧಿಸಿರುವುದಕ್ಕೆ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.