ಗುವಾಹಟಿ( ಅಸ್ಸೋಂ): ಕೊರೊನಾ ವೈರಸ್ ಭೀತಿಯಿಂದಾಗಿ ದೇಶದಾದ್ಯಂತ ಲಾಕ್ಡೌನ್ ಆದೇಶ ಹೊರಡಿಸಲಾಗಿದೆ. ಲಾಕ್ಡೌನ್ನಿಂದಾಗಿ ಪ್ರತಿಯೊಬ್ಬರೂ ತಮ್ಮ ಉದ್ಯೋಗದಿಂದ ದೂರ ಉಳಿದಿದ್ದಾರೆ. ಆದರೆ,ಲಾಕ್ಡೌನ್ ಅಸ್ಸೋಂನ ಕೆಲವು ಗ್ರಾಮಗಳ ಗ್ರಾಮಸ್ಥರಿಗೆ ತಮ್ಮ ಉದ್ಯೋಗಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಪ್ರೋತ್ಸಾಹಿಸಿದೆ.
ಹೌದು..ಪುಂಡಿಬಾರಿ ಮತ್ತು ಖುಮ್‌ಗುರಿ ಗ್ರಾಮದ ಜನರು ಈಗ ಜನಪ್ರಿಯ ಎರಿ ರೇಷ್ಮೆ ಉತ್ಪಾದನೆಗೆ ಲಾಕ್ಡೌನ್ ಅವಧಿಯನ್ನು ಬಳಸುತ್ತಿದ್ದಾರೆ. ಅಸ್ಸೋಂನ ಹೆಚ್ಚಿನ ಬುಡಕಟ್ಟು ಸಮುದಾಯಗಳು ಎರಿ ರೇಷ್ಮೆ ಉದ್ಯೋಗವನ್ನೆ ಅವಲಂಬಿಸಿದ್ದು,ಇದರಿಂದ ತಿಂಗಳಿಗೆ 15,000 ರೂ. ಆದಾಯ ಗಳಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಸಿದ ಪುಂಡಿಬಾರಿ ಸಿಲೇಜ್‌ನ ಬಾಬುರಾಮ್ ಬಸುಮಾಟರಿ, ಲಾಕ್ಡೌನ್ ಅನೇಕರ ಕಷ್ಟಗಳಿಗೆ ಕಾರಣವಾಗಿದೆ. ಆದರೆ, ನಮಗೆ ಇದರಿಂದ ಸಹಾಯಕವಾಗಿದೆ. ನಾನು ಶಾಲಾ ಶಿಕ್ಷಕನಾಗಿದ್ದು, ತರಗತಿಗಳು ನಡೆಯುತ್ತಿಲ್ಲವಾದ್ದರಿಂದ ಈ ದಿನಗಳಲ್ಲಿ ಎರಿ ಪಾಲನೆಗಾಗಿ ನಾನು ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಿದ್ದೇನೆ.
ಅಲ್ಲದೇ, ನನ್ನ ಕುಟುಂಬದ ಎಲ್ಲ ಐವರು ಸದಸ್ಯರು ಈಗ ಎರಿ ಪೋಲು ಪಾಲನೆ ಮಾಡುವಲ್ಲಿ ನಿರತರಾಗಿದ್ದಾರೆ. ಹಳ್ಳಿಯಲ್ಲಿರುವ ಇತರರಿಗೆ ಲಾಕ್ಡೌನ್ ಅವಧಿ ಎರಿ ಪಾಲನೆಗಾಗಿ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಒಂದು ಅವಕಾಶವಾಗಿದೆ ಅಂತಿದ್ದಾರೆ ಶಿಕ್ಷಕ.