ETV Bharat / bharat

ಮಹಾಮಳೆಗೆ ಅಸ್ಸೋಂ ತತ್ತರ... 17 ಜಿಲ್ಲೆಯ 4.23 ಲಕ್ಷ ಜನರು ಸಂಕಷ್ಟದಲ್ಲಿ! - ನೆರೆಹಾವಳಿ

ಅಸ್ಸೋಂನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಾವಿರಾರು ಜನರು ಮನೆ ಕಳೆದುಕೊಂಡು, ನಿರಾಶ್ರಿತರ ಶಿಬಿರ ಸೇರಿದ್ದಾರೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ

ಆಸ್ಸೋಂನಲ್ಲಿ ಮಳೆಯ ಅಬ್ಬರ
author img

By

Published : Jul 12, 2019, 5:10 PM IST

ಆಸ್ಸೋಂ: ಅಸ್ಸೋಂನಲ್ಲಿ ಇದೀಗ ವರುಣನ ಅಬ್ಬರ ಜೋರಾಗಿದ್ದು, ಮಹಾಮಳೆಗೆ 17 ಜಿಲ್ಲೆಯ 4.23 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾಗಿ ತಿಳಿದು ಬಂದಿದೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ

ಮಳೆಯ ಅಬ್ಬರಕ್ಕೆ ಮೂವರು ಸಾವನ್ನಪ್ಪಿರುವುದಾಗಿ ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಈಗಾಗಲೇ 11 ಜಿಲ್ಲೆಯ 2.5 ಲಕ್ಷ ಜನರನ್ನ ರಕ್ಷಣೆ ಮಾಡಲಾಗಿದ್ದು, ಎಲ್ಲ ರೀತಿಯ ರಕ್ಷಣಾ ಕ್ರಮ ಕೈಗೊಂಡಿರುವುದಾಗಿ ಅಲ್ಲಿನ ರಾಜ್ಯ ಸರ್ಕಾರ ತಿಳಿಸಿದೆ.

ಆಸ್ಸೋಂನಲ್ಲಿ ಮಳೆಯ ಅಬ್ಬರ

ರಾಜ್ಯದಲ್ಲಿ 530ಕ್ಕೂ ಹೆಚ್ಚು ಮಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಹಲವಾರು ರಸ್ತೆಗಳು, ಕಟ್ಟಡಗಳು ಮತ್ತು ಸೇತುವೆಗಳು ಮಳೆಯಿಂದ ಹಾಳಾಗಿದ್ದು, ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರೋಂಗನೋಡಿ ಜಲ ವಿದ್ಯುತ್​ ಯೋಜನೆಯ ಹೆಚ್ಚುವರಿ ನೀರನ್ನು ಲಖಿಂಪುರ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಅನೇಕ ಗ್ರಾಮಗಳು ಸಂಕಷ್ಟಕ್ಕೊಳಗಾಗಿವೆ.

ಪ್ರಮುಖವಾಗಿ ಮಹಾಮಳೆಗೆ ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ದಾರಂಗ್, ಬಾರ್‌ಪೇಟಾ, ನಲ್ಬಾರಿ, ಚಿರಾಂಗ್, ಗೋಲಾಘಾಟ್, ಮಜುಲಿ, ಜೋರ್ಹತ್, ದಿಬ್ರುಗಢ, ನಾಗಾನ್, ಮೊರಿಗಾಂವ್, ಕೊಕ್ರಜಾರ್, ಬೊಂಗೈಗಾಂವ್, ಬಕ್ಸಾ ಮತ್ತು ಸೋನಿತ್‌ಪುರ ತತ್ತರಿಸಿವೆ. ಹೆಚ್ಚು ಮಳೆ ಬೀಳುತ್ತಿರುವ 749 ಗ್ರಾಮದ 1,843 ಜನರನ್ನ ವಿವಿಧ ನಿರಾಶ್ರಿತ ಕೇಂದ್ರಗಳಲ್ಲಿ ಇರಿಸಲಾಗಿದ್ದು, ಅದಕ್ಕಾಗಿ 53 ಕ್ಯಾಂಪ್​ ತೆರೆಯಲಾಗಿದೆ.

ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿರುವ ಕಾರಣ, ಕಾಜಿರಂಗ ರಾಷ್ಟ್ರೀಯ ಪಾರ್ಕ್​ನೊಳಗೆ ಮಳೆಯ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ. ಇನ್ನು ವಿವಿಧ ಜಿಲ್ಲೆಗಳಲ್ಲಿ ಮೆಡಿಕಲ್​ ಕ್ಯಾಂಪ್​ ತೆರೆಯಲಾಗಿದ್ದು ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ.

Intro:Body:

ಮಹಾಮಳೆಗೆ ಆಸ್ಸೋಂ ತತ್ತರ... 17 ಜಿಲ್ಲೆಯ 4.23 ಲಕ್ಷ ಜನರು ಸಂಕಷ್ಟದಲ್ಲಿ!

ಆಸ್ಸೋಂ: ಆಸ್ಸೋಂನಲ್ಲಿ ಇದೀಗ ವರುಣನ ಅಬ್ಬರ ಜೋರಾಗಿದ್ದು, ಮಹಾಮಳೆಗೆ 17 ಜಿಲ್ಲೆಯ 4.23 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾಗಿ ತಿಳಿದು ಬಂದಿದೆ. 

ಮಳೆಯ ಅಬ್ಬರಕ್ಕೆ ಮೂವರು ಸಾವನ್ನಪ್ಪಿರುವುದಾಗಿ ಆಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಈಗಾಗಲೇ 11 ಜಿಲ್ಲೆಯ 2.5 ಲಕ್ಷ ಜನರನ್ನ ರಕ್ಷಣೆ ಮಾಡಲಾಗಿದ್ದು, ಎಲ್ಲ ರೀತಿಯ ರಕ್ಷಣಾ ಕ್ರಮ ಕೈಗೊಂಡಿರುವುದಾಗಿ ಅಲ್ಲಿನ ರಾಜ್ಯ ಸರ್ಕಾರ ತಿಳಿಸಿದೆ. 

ಪ್ರಮುಖವಾಗಿ ಮಹಾಮಳೆಗೆ ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ದಾರಂಗ್, ಬಾರ್‌ಪೇಟಾ, ನಲ್ಬಾರಿ, ಚಿರಾಂಗ್, ಗೋಲಾಘಾಟ್, ಮಜುಲಿ, ಜೋರ್ಹತ್, ದಿಬ್ರುಗ, ನಾಗಾನ್, ಮೊರಿಗಾಂವ್, ಕೊಕ್ರಜಾರ್, ಬೊಂಗೈಗಾಂವ್, ಬಕ್ಸಾ ಮತ್ತು ಸೋನಿತ್‌ಪುರ ತತ್ತರಿಸಿವೆ. ಹೆಚ್ಚು ಮಳೆ ಬೀಳುತ್ತಿರುವ 749 ಗ್ರಾಮದ 1,843 ಜನರನ್ನ ವಿವಿಧ ಗಂಜಿ ಕೇಂದ್ರಗಳಲ್ಲಿ ಇರಿಸಲಾಗಿದ್ದು, 53 ಕ್ಯಾಂಪ್​ ತೆರೆಯಲಾಗಿದೆ. 

ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿರುವ ಕಾರಣ, ಕಾಜಿರಂಗ ರಾಷ್ಟ್ರೀಯ ಪಾರ್ಕ್​ನೊಳಗೆ ಮಳೆಯ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ. ಇನ್ನು ವಿವಿಧ ಜಿಲ್ಲೆಗಳಲ್ಲಿ ಮೆಡಿಕಲ್​ ಕ್ಯಾಂಪ್​ ತೆರೆಯಲಾಗಿದ್ದು ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.