ETV Bharat / bharat

ಪ್ಲಾಸ್ಟಿಕ್​ ಫ್ಯಾಕ್ಟರಿ ಬ್ಲಾಸ್ಟ್​: ಸ್ಥಳದಲ್ಲೇ ಐವರ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ - ಮಲ್ಡಾ ಪ್ಲಾಸ್ಟಿಕ್​ ಕಂಪನಿ ಸ್ಫೋಟ,

Five people died,  Five people died in plastic factory blast,  Five people died in plastic factory blast at Malda,  Malda plastic factory blast,  Malda plastic factory blast news,  ಐವರು ಸಾವು,  ಪ್ಲಾಸ್ಟಿಕ್​ ಕಂಪನಿ ಸ್ಫೋಟದಲ್ಲಿ ಐವರು ಸಾವು,  ಮಲ್ಡಾದಲ್ಲಿ ಪ್ಲಾಸ್ಟಿಕ್​ ಕಂಪನಿ ಸ್ಫೋಟದಲ್ಲಿ ಐವರು ಸಾವು,  ಮಲ್ಡಾ ಪ್ಲಾಸ್ಟಿಕ್​ ಕಂಪನಿ ಸ್ಫೋಟ,  ಮಲ್ಡಾ ಪ್ಲಾಸ್ಟಿಕ್​ ಕಂಪನಿ ಸ್ಫೋಟ ಸುದ್ದಿ,
ಪ್ಲಾಸ್ಟಿಕ್​ ಫ್ಯಾಕ್ಟರಿ ಬ್ಲಾಸ್ಟ್
author img

By

Published : Nov 19, 2020, 1:37 PM IST

Updated : Nov 19, 2020, 4:29 PM IST

13:27 November 19

ಪ್ಲಾಸ್ಟಿಕ್​ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.

ಪ್ಲಾಸ್ಟಿಕ್​ ಫ್ಯಾಕ್ಟರಿ ಬ್ಲಾಸ್ಟ್

ಮಾಲ್ಡಾ( ಪಶ್ಚಿಮ ಬಂಗಾಳ): ಜಿಲ್ಲೆಯ ಸುಜಾಪುರ್​ ಬಸ್​ ನಿಲ್ದಾಣದ ಬಳಿ ಸಂಭವಿಸಿರುವ ದುರಂತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಹೌದು, ಇಲ್ಲಿನ ಪ್ಲಾಸ್ಟಿಕ್​ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ಲಾಸ್ಟಿಕ್​ ಫ್ಯಾಕ್ಟರಿಯಲ್ಲಿ ಸ್ಫೋಟದ ಸದ್ದು ಕೇಳಿದ ನೆರೆಹೊರೆಯವರು ಕೂಡಲೇ ಅಗ್ನಿ ಶಾಮಕದಳ ಮತ್ತು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯ ಆರಂಭಿಸಿದರು. ಗಾಯಾಳುಗಳನ್ನು ಆ್ಯಂಬುಲೆನ್ಸ್​​​​​​​​ ಮೂಲಕ ಆಸ್ಪತ್ರೆಗೆ ರವಾನಿಸಿದರು. ಇನ್ನು ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿತು. 

ಮೃತಪಟ್ಟವರಿಗೆ ತಲಾ 2 ಲಕ್ಷ ರೂ ಘೋಷಣೆ

ಈ ಘಟನೆ ಕುರಿತು ಮಾಲ್ಡಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  ಈ ನಡುವೆ ಪಶ್ಚಿಮ ಬಂಗಾಳ ಸರ್ಕಾರ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2ಲಕ್ಷ ರೂ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಘೋಷಣೆ ಮಾಡಲಾಗಿದೆ.

Last Updated : Nov 19, 2020, 4:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.