ETV Bharat / bharat

1948ರ ಬಳಿಕ ಮೊದಲ ಬಾರಿಗೆ ಕಾಶ್ಮೀರದಲ್ಲಿ 'ಹುತಾತ್ಮರ ದಿನ'ದ ಆಚರಣೆಯಿಲ್ಲ - ಮಹಾರಾಜ ಹರಿ ಸಿಂಗ್

1948 ರಿಂದ 2019ರ ವರೆಗೂ ಜು.13 ರಂದು ಮುಖ್ಯಮಂತ್ರಿಗಳು, ಸಚಿವರು, ಡಿಜಿಪಿ ಹಾಗೂ ಇತರ ರಾಜಕೀಯ ಗಣ್ಯರು ಸೇರಿದಂತೆ ಜಮ್ಮು- ಕಾಶ್ಮೀರದಾದ್ಯಂತ ಆಚರಿಸಲಾಗುತ್ತಿದ್ದ ಹುತಾತ್ಮರ ದಿನವನ್ನು ಇಂದು ಆಚರಿಸಲಾಗುತ್ತಿಲ್ಲ.

Martyrs' Day
ಹುತಾತ್ಮರ ದಿನ
author img

By

Published : Jul 13, 2020, 12:51 PM IST

ಶ್ರೀನಗರ: 1948ರ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ 13 ರ ಹುತಾತ್ಮರ ದಿನದಂದು ಇರುತ್ತಿದ್ದ ಸರ್ಕಾರಿ ರಜೆ ಅಥವಾ ಸರ್ಕಾರಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರ ಆಡಳಿತವು 2020ರ ಅಧಿಕೃತ ರಜಾದಿನಗಳ ಪಟ್ಟಿಯಿಂದ ಹುತಾತ್ಮರ ದಿನ ಮತ್ತು ಶೇಖ್ ಅಬ್ದುಲ್ಲಾ ಅವರ ಜನ್ಮ ದಿನವನ್ನು ತೆಗೆದು ಹಾಕಿದ್ದರಿಂದ ಈ ಬೆಳವಣಿಗೆ ಕಂಡು ಬಂದಿದೆ.

370ನೇ ವಿಧಿ ರದ್ದತಿಯ ಬಳಿಕ 2019ರ ಡಿಸೆಂಬರ್‌ನಲ್ಲಿ ಜು.13ರ ಹುತಾತ್ಮರ ದಿನ ಹಾಗೂ ಡಿ.5 ರಂದು ಆಚರಿಸಲಾಗುತ್ತಿದ್ದ ಜಮ್ಮು-ಕಾಶ್ಮೀರದ ಮಾಜಿ ಪ್ರಧಾನಿ (1947) ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ ಜನ್ಮ ದಿನವನ್ನು ಅಧಿಕೃತ ರಜಾ ದಿನಗಳ ಪಟ್ಟಿಯಿಂದ ಕೈಬಿಡಲಾಯಿತು. ಹೀಗಾಗಿ ಇಂದು ಹುತಾತ್ಮರ ದಿನದ ನಿಮಿತ್ತ ಇಂದು ಯಾವುದೇ ಸರ್ಕಾರಿ ಆಚರಣೆಗಳು ನಡೆಯುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

1931ರ ಜು.13 ರಂದು ಜಮ್ಮು- ಕಾಶ್ಮೀರ ರಾಜ ಸಂಸ್ಥಾನದ ಕೊನೆಯ ಡೋಗ್ರಾ ದೊರೆ, ನಿರಂಕುಶಾಧಿಕಾರಿ ಮಹಾರಾಜ ಹರಿ ಸಿಂಗ್‌ ವಿರುದ್ಧದ ಹೋರಾಟದಲ್ಲಿ 22 ಜನರು ಮೃತಪಟ್ಟಿದ್ದರು. 1947ರ ಅಕ್ಟೋಬರ್‌ನಲ್ಲಿ ಜಮ್ಮು- ಕಾಶ್ಮೀರದ ಮೊದಲ ಪ್ರಧಾನಿಯಾದ ನಂತರ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರು ಈ ದಿನವನ್ನು 'ಹುತಾತ್ಮರ ದಿನ' ಎಂದು ಘೋಷಿಸಿದ್ದರು.

2019ರ ವರೆಗೂ ಜು.13 ರಜಾದಿನವಾಗಿದ್ದು, ಮುಖ್ಯಮಂತ್ರಿಗಳು, ಸಚಿವರು, ಡಿಜಿಪಿ ಹಾಗೂ ಇತರ ರಾಜಕೀಯ ಗಣ್ಯರು ಸೇರಿದಂತೆ ಜಮ್ಮು-ಕಾಶ್ಮೀರದಾದ್ಯಂತ ಹುತಾತ್ಮರ ದಿನವನ್ನು ಆಚರಿಸುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.