ETV Bharat / bharat

'ಕೊರೊನಾ ವೈರಸ್'​ ಯಾವ ರೀತಿ ಇದೆ ನೋಡಿ... ದೇಶದ ಮೊದಲ ಪ್ರಕರಣದ ಮೈಕ್ರೋಸ್ಕೋಪಿ ಚಿತ್ರ ರಿಲೀಸ್​​​

ರಕ್ಕಸ ಕೊರೊನಾ ವೈರಸ್​ ಯಾವ ರೀತಿಯಲ್ಲಿರುತ್ತದೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದ್ದು, ಭಾರತದಲ್ಲಿ ಪತ್ತೆಯಾಗಿದ್ದ ಮೊದಲ ಕೇಸ್​ನ ಮೈಕ್ರೋಸ್ಕೋಪಿ ಚಿತ್ರವನ್ನ ಭಾರತೀಯ ವಿಜ್ಞಾನಿಗಳು ರಿಲೀಸ್​ ಮಾಡಿದ್ದಾರೆ.

First images from India of virus causing Covid-19

author img

By

Published : Mar 27, 2020, 8:17 PM IST

ನವದೆಹಲಿ: ದೇಶದ ಮೊದಲ ಕೊರೊನಾ ವೈರಸ್​ ಪ್ರಕರಣದ ಮೈಕ್ರೋಸ್ಕೋಪಿ ಚಿತ್ರ ರಿಲೀಸ್​ ಆಗಿದೆ. ಕೇರಳದಲ್ಲಿ ಜನವರಿ 30ರಂದು ವರದಿಯಾಗಿದ್ದ ಭಾರತದ ಮೊದಲ ಕೊರೊನಾ ವೈರಸ್​ ವ್ಯಕ್ತಿಯಲ್ಲಿನ ಗಂಟಲಿನ ದ್ರವ ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ಅದರ ಚಿತ್ರ ರಿಲೀಸ್ ಆಗಿದೆ.

First images from India of virus causing Covid-19
'ಕೊರೊನಾ ವೈರಸ್'​ ಯಾವ ರೀತಿ ಇದೆ ನೋಡಿ

ಭಾರತೀಯ ವಿಜ್ಞಾನಿಗಳು SARS-CoV-2 ವೈರಸ್ (COVID19)ನ ಮೈಕ್ರಸ್ಕೋಪಿ ಚಿತ್ರವನ್ನ ರಿಲೀಸ್​ ಮಾಡಿದ್ದು, ಆತನಿಗೆ ಕೊರೊನಾ ಇರುವುದನ್ನ ಪ್ರಯೋಗಾಲಯದಲ್ಲಿ ದೃಢಪಡಿಸಿದ ಬಳಿಕ ವಿಜ್ಞಾನಿಗಳು ಗಂಟಲಿನ ದ್ರವ ತೆಗೆದುಕೊಂಡಿದ್ದರು. ಸದ್ಯ ಅದರ ಸಂಶೋಧನೆ ನಡೆಸಿದ ಬಳಿಕ ಅಂದರೆ ಬರೋಬ್ಬರಿ 2 ತಿಂಗಳ ಬಳಿಕ ಅದರ ಚಿತ್ರ ರಿಲೀಸ್​ ಮಾಡಲಾಗಿದೆ. ಇದರಲ್ಲಿ ಕೊರೊನಾ ಸೋಂಕು ಯಾವ ರೀತಿಯಾಗಿರುತ್ತದೆ ಎಂಬುದರ ದೃಶ್ಯವಿದೆ.

ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಇಮೇಜಿಂಗ್ ಬಳಸಿ ಪುಣೆಯ ವಿಜ್ಞಾನಿಗಳು ಕೋವಿಡ್​ ವೈರಸ್​ ಯಾವ ರೀತಿಯಾಗಿರುತ್ತದೆ ಎಂಬುದನ್ನ ರಿಲೀಸ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.