ನವದೆಹಲಿ: ಸರ್ಕಾರ ರಚನೆ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಮೊದಲ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ ಮಹತ್ವ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಈ ಮೂಲಕ ದೇಶದ ರಕ್ಷಕರಿಗೆ ಈ ಮೊದಲ ನಿರ್ಧಾರ ಸಮರ್ಪಣೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
-
Our Government’s first decision dedicated to those who protect India!
— Narendra Modi (@narendramodi) May 31, 2019 " class="align-text-top noRightClick twitterSection" data="
Major changes approved in PM’s Scholarship Scheme under the National Defence Fund including enhanced scholarships for wards of police personnel martyred in terror or Maoist attacks. https://t.co/Vm90BD77hm pic.twitter.com/iXhFNlBCIc
">Our Government’s first decision dedicated to those who protect India!
— Narendra Modi (@narendramodi) May 31, 2019
Major changes approved in PM’s Scholarship Scheme under the National Defence Fund including enhanced scholarships for wards of police personnel martyred in terror or Maoist attacks. https://t.co/Vm90BD77hm pic.twitter.com/iXhFNlBCIcOur Government’s first decision dedicated to those who protect India!
— Narendra Modi (@narendramodi) May 31, 2019
Major changes approved in PM’s Scholarship Scheme under the National Defence Fund including enhanced scholarships for wards of police personnel martyred in terror or Maoist attacks. https://t.co/Vm90BD77hm pic.twitter.com/iXhFNlBCIc
ಈ ಯೋಜನೆಯಡಿ ಹುತಾತ್ಮ ಯೋಧರ ಮಕ್ಕಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನದ ಮೊತ್ತವನ್ನು ಏರಿಸಲಾಗಿದೆ. ಉಗ್ರರ ಅಥವಾ ನಕ್ಸಲರ ದಾಳಿಯಲ್ಲಿ ಮೃತಪಟ್ಟ ರಾಜ್ಯ ಪೊಲೀಸರ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಅದರಂತೆ ಗಂಡು ಮಕ್ಕಳಿಗೆ ಮಾಸಿಕ 2500ರೂ. ಹಾಗೂ ಹೆಣ್ಣು ಮಕ್ಕಳಿಗೆ 3000 ರೂ. ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದೆ.
-
#WATCH Prime Minister Narendra Modi chairs the first #UnionCabinet meeting of his second term. pic.twitter.com/nhKFEIDnfj
— ANI (@ANI) May 31, 2019 " class="align-text-top noRightClick twitterSection" data="
">#WATCH Prime Minister Narendra Modi chairs the first #UnionCabinet meeting of his second term. pic.twitter.com/nhKFEIDnfj
— ANI (@ANI) May 31, 2019#WATCH Prime Minister Narendra Modi chairs the first #UnionCabinet meeting of his second term. pic.twitter.com/nhKFEIDnfj
— ANI (@ANI) May 31, 2019
ರಾಷ್ಟ್ರೀಯ ರಕ್ಷಣಾ ನಿಧಿಯಡಿ ಮಾಜಿ ಯೋಧರು, ಸಂಸತ್ ಪಡೆ ಹಾಗೂ ರೈಲ್ವೆ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿ ಮಡಿದವರ ಪತ್ನಿ ಹಾಗೂ ಮಕ್ಕಳ ತಾಂತ್ರಿಕ ಹಾಗೂ ಉನ್ನತ ಶಿಕ್ಷಣಕ್ಕಾಗಿ ಈ ಯೋಜನೆ ಜಾರಿ ಮಾಡಲಾಗಿತ್ತು.
ನಿನ್ನೆಯಷ್ಟೇ ಪ್ರಧಾನಿ ಮೋದಿ ಹಾಗೂ ಅವರ ಟೀಂ ಪ್ರಮಾಣವಚನ ಸ್ವೀಕರಿಸಿತ್ತು. ಇಂದು ಸಚಿವ ಸ್ಥಾನಗಳ ಹಂಚಿಕೆ ಸಹ ನಡೆದಿತ್ತು. ಇದಾದ ನಂತರ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿಯವರು ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.