ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರೆದಿದ್ದು, ಇಲ್ಲಿಯವರೆಗೆ ಯಾವುದೇ ದೇಶಗಳಿಂದ ಅಧಿಕೃತವಾಗಿ ಕೋವಿಡ್ ಲಸಿಕೆ ಸಿದ್ಧಗೊಂಡಿಲ್ಲ. ಅಮೆರಿಕ, ಫ್ರಾನ್ಸ್, ಜಪಾನ್ ಸೇರಿ ಅನೇಕ ದೇಶಗಳು ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿದ್ದು, ಇದರ ಮಧ್ಯೆ ಭಾರತದಿಂದ ಗುಡ್ನ್ಯೂಸ್ ಹೊರಬಿದ್ದಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) 100 ವರ್ಷಗಳ ಕಾಲಮಿತಿ ಇತಿಹಾಸ ಕುರಿತ ಪುಸ್ತಕ ಬಿಡುಗಡೆ ಮಾಡಿ ಕೇಂದ್ರ ಆರೋಗ್ಯ ಸಚಿವರು ಮಾತನಾಡಿದರು. 2021ರ ಮೊದಲ ತ್ರೈಮಾಸಿಕದ ವೇಳೆಗೆ ಭಾರತದಲ್ಲಿ ಮೊದಲ ಕೋವಿಡ್-19 ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ದೇಶದಲ್ಲಿ ಲಸಿಕೆ ಅಭಿವೃದ್ಧಿ ಪಡಿಸುವ ಸಂಶೋಧನಾ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಮೂರು ಲಸಿಕೆಗಳಿದ್ದು, 2021ರ 1ನೇ ತ್ರೈಮಾಸಿಕದ ವೇಳೆಗೆ ಅವು ಲಭ್ಯವಾಗಲಿವೆ ಎಂದಿದ್ದಾರೆ.
-
Today's a historic day for ICMR. It's an honour for me to release 100-year timeline of history of ICMR within its premises today. The contribution of scientists associated with it is commemorated & serves as an inspiration to upcoming scientists: H Vardhan, Union Health Minister pic.twitter.com/2smfgLXQwW
— ANI (@ANI) September 28, 2020 " class="align-text-top noRightClick twitterSection" data="
">Today's a historic day for ICMR. It's an honour for me to release 100-year timeline of history of ICMR within its premises today. The contribution of scientists associated with it is commemorated & serves as an inspiration to upcoming scientists: H Vardhan, Union Health Minister pic.twitter.com/2smfgLXQwW
— ANI (@ANI) September 28, 2020Today's a historic day for ICMR. It's an honour for me to release 100-year timeline of history of ICMR within its premises today. The contribution of scientists associated with it is commemorated & serves as an inspiration to upcoming scientists: H Vardhan, Union Health Minister pic.twitter.com/2smfgLXQwW
— ANI (@ANI) September 28, 2020
ಇಂದು ಐಸಿಎಂಆರ್ಗೆ ಐತಿಹಾಸಿಕ ದಿನ. 100 ವರ್ಷಗಳ ಟೈಮ್ಲೈನ್ ಇದೀಗ ರಿಲೀಸ್ ಮಾಡಲಾಗುತ್ತಿದ್ದು, ಇದು ನನಗೆ ಗೌರವವಾಗಿದೆ. ವಿಜ್ಞಾನಿಗಳ ಕೊಡುಗೆ ಸ್ಮರಿಸಲಾಗುತ್ತದೆ. ಜತೆಗೆ ಮುಂಬರುವ ವಿಜ್ಞಾನಿಗಳಿಗೆ ಇದು ಸ್ಫೂರ್ತಿಯಾಗಲಿದೆ ಎಂದಿದ್ದಾರೆ.
ಇದೇ ವೇಳೆ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 82,170 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಭಾರತದಲ್ಲಿ ಕೋವಿಡ್-19 60 ಲಕ್ಷ ಗಡಿ ದಾಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.