ETV Bharat / bharat

ದೆಹಲಿಯಲ್ಲಿ 2 ಪ್ರತ್ಯೇಕ ಅಗ್ನಿ ಅವಘಡ... 250 ಗುಡಿಸಲುಗಳು ಸುಟ್ಟು ಭಸ್ಮ, ಶೂ ಫ್ಯಾಕ್ಟರಿಯಲ್ಲೂ ಬೆಂಕಿ ಧಗ ಧಗ - ಶೂ ತಯಾರಿಸುವ ಕಾರ್ಖಾನೆಯಲ್ಲಿ ಬೆಂಕಿ

ನವದೆಹಲಿಯಲ್ಲಿ ಎರಡು ಪ್ರತ್ಯೇಕ ಅಗ್ನಿ ಅವಘಡಗಳು ಸಂಭವಿಸಿವೆ. ಕೇಶವ್‌ಪುರಂ ಪ್ರದೇಶದಲ್ಲಿರುವ ಶೂ ತಯಾರಿಸುವ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮತ್ತೊಂದೆಡೆ ತುಘಲಕಾಬಾದ್​ ಪ್ರದೇಶದಲ್ಲಿ ಅಗ್ನಿ ರೌದ್ರನರ್ತನಕ್ಕೆ 250 ಗುಡಿಸಲು ಸುಟ್ಟು ಭಸ್ಮವಾಗಿವೆ.

Fire breaks out at a footwear manufacturing factory
ಫೂಟ್​ವೇರ್ ಕಾರ್ಖಾನೆಯಲ್ಲಿ ಬೆಂಕಿ
author img

By

Published : May 26, 2020, 11:22 AM IST

ನವದೆಹಲಿ: ಆಗ್ನೇಯ ದೆಹಲಿಯಲ್ಲಿ ಎರಡು ಪ್ರತ್ಯೇಕ ಅಗ್ನಿ ಅವಘಡಗಳು ಸಂಭವಿಸಿವೆ. ತುಘಲಕಾಬಾದ್ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಮಾರು 250 ಗುಡಿಸಲುಗಳು ಸುಟ್ಟುಹೋಗಿವೆ.

ಮಧ್ಯರಾತ್ರಿ 12.50 ಕ್ಕೆ ಈ ಅವಘಡಕ್ಕೆ ಸಂಬಂಧಿಸಿದಂತೆ ನಮಗೆ ಕರೆ ಬಂದಿದ್ದು, 28 ಅಗ್ನಿಶಾಮಕ ವಾಹನ‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಮುಂಜಾನೆ 3.30ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಕೇಶವ್‌ಪುರಂ ಪ್ರದೇಶದಲ್ಲಿರುವ ಶೂ ಕಾರ್ಖಾನೆಯಲ್ಲೂ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಫುಟ್​ವೇರ್ ಕಾರ್ಖಾನೆಯಲ್ಲಿ ಬೆಂಕಿ

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದು, ಬೆಂಕಿಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದಿದ್ದಾರೆ.

ಬೆಳಗ್ಗೆ 8.34 ಕ್ಕೆ ಬೆಂಕಿ ತಗುಲಿರುವ ಬಗ್ಗೆ ಕರೆ ಬಂದಿದ್ದು, 23 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗರ್ಗ್ ಮಾಹಿತಿ ನೀಡಿದ್ದಾರೆ.

  • Delhi: A fire has broken out at Tughlakabad slums. Rajendra Prasad Meena, DCP South East says, "We received information of fire at around 1 am, 18-20 fire tenders are at the spot. Firefighting operations underway. No casualty reported so far". pic.twitter.com/9ny3HpHAAZ

    — ANI (@ANI) May 25, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.