ಕೃಷ್ಣಗಿರಿ (ತಮಿಳುನಾಡು): ಕೃಷ್ಣಗಿರಿ ಜಿಲ್ಲಾ ಕೇಂದ್ರದ ಹೆದ್ದಾರಿಯ ಟೋಲ್ ಗೇಟ್ನಿಂದ ತುಸು ದೂರದಲ್ಲಿದ್ದ ಶಶಿಕಲಾ ಬೆಂಬಲಿಗರ ಎರಡು ಕಾರುಗಳು ಬೆಂಕಿಗಾಹುತಿಯಾಗಿವೆ.
ತಮಿಳುನಾಡಿನ ರಾಜಕೀಯ ವಲಯದಲ್ಲಷ್ಟೇ ಅಲ್ಲ ಭಾವನಾತ್ಮಕ ವಲಯದಲ್ಲೂ ಸಂಚಲನ ಮೂಡಿಸಿರುವ ಚಿನ್ನಮ್ಮ ಶಶಿಕಲಾರ ಸ್ವಾಗತಕ್ಕೆ ನಿನ್ನೆಯಿಂದಲೇ ಸಿದ್ಧತೆ ನಡೆದಿತ್ತು.
ಓದಿ: ಅದ್ಧೂರಿ ಸ್ವಾಗತದೊಂದಿಗೆ ಕರ್ನಾಟಕ ಗಡಿ ದಾಟಿದ ತಮಿಳುನಾಡಿನ ಚಿನ್ನಮ್ಮ
ಚಿನ್ನಮ್ಮ ಸ್ವಾಗತಕ್ಕೆಂದು ಇಂದು ಅವರ ಬೆಂಬಲಿಗರು ಎರಡು ಕಾರಿನಲ್ಲಿ ಪಟಾಕಿ ತುಂಬಿಕೊಂಡು ಹೋಗುತ್ತಿದ್ದಾಗ ಕೃಷ್ಣಗಿರಿ ಟೋಲ್ ಗೇಟ್ ಬಳಿ ಎರಡು ಕಾರುಗಳಿಗೆ ಬೆಂಕಿ ತಗುಲಿ, ಈ ಅವಘಡ ಸಂಭವಿಸಿದೆ.