ETV Bharat / bharat

ಫೇಕ್​ ವಿಡಿಯೋ ಹಂಚಿದ ಆರೋಪ: ದಿಗ್ವಿಜಯ್ ಸಿಂಗ್​ ವಿರುದ್ಧ ಎಫ್​ಐಆರ್​

ಮಧ್ಯಪ್ರದೇಶ ಸಿಎಂ ವಿರುದ್ಧದ ಫೇಕ್​ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಆರೋಪದ ಮೇಲೆ ಕೈ ಹಿರಿಯ ನಾಯಕ ದಿಗ್ವಿಜಯ್ ಸಿಂಗ್​ ವಿರುದ್ಧ ಎಫ್​ಐಆರ್ ದಾಖಲಾಗಿದೆ.

Digvijaya Singh
ದಿಗ್ವಿಜಯ್ ಸಿಂಗ್​
author img

By

Published : Jun 15, 2020, 11:16 AM IST

ಭೋಪಾಲ್​(ಮಧ್ಯಪ್ರದೇಶ): ಫೇಕ್​ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಕಾಂಗ್ರೆಸ್​ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಭೋಪಾಲ್​ ಕ್ರೈಮ್​ ಬ್ರಾಂಚ್​ ಎಫ್​ಐಆರ್​ ದಾಖಲಿಸಿದ್ದು, ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಐಪಿಸಿ ಸೆಕ್ಷನ್​ನ ವಿವಿಧ ಕಾಲಂಗಳ ಅಡಿ ಎಫ್​​ಐಆರ್​ ದಾಖಲಾಗಿದ್ದು, ಬಿಜೆಪಿ ಈ ಕುರಿತು ದೂರು ನೀಡಿತ್ತು. ಈ ದೂರಿನ ಅನುಸಾರ ಕ್ರಮ ಕೈಗೊಂಡ ಭೋಪಾಲ್​ ಅಪರಾಧ ವಿಭಾಗ ಎಫ್​ಐಆರ್ ದಾಖಲಿಸಿಕೊಂಡಿದೆ.

ಸದ್ಯಕ್ಕೆ ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಮಧ್ಯಪ್ರದೇಶ ಕಾಂಗ್ರೆಸ್​ನಿಂದ ದಿಗ್ವಿಜಯ್ ಸಿಂಗ್​ ​ ಅಭ್ಯರ್ಥಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.